ಕಾಗೋಡು ಸತ್ಯಾಗ್ರಹ ರೂವಾರಿಯ ಸ್ಮಾರಕ ಸ್ಥಾಪನೆಗೆ ಮನವಿ

Contributed by: kugweprakash@gmail.com|Vijaya Karnataka•
request to establish a memorial for the historic kagodu satyagraha
ಕಾಗೋಡು ಸತ್ಯಾಗ್ರಹ ರೂವಾರಿಯ ಸ್ಮಾರಕ ಸ್ಥಾಪನೆಗೆ ಮನವಿ

ವಿಕ ಸುದ್ದಿಲೋಕ ಸಾಗರ
ಐತಿಹಾಸಿಕ ಕಾಗೋಡು ಸತ್ಯಾಗ್ರಹದ ರೂವಾರಿ ಡಾ. ಎಚ್ .ಗಣಪತಿಯಪ್ಪ ಅವರ ಸ್ಮಾರಕವನ್ನು ಕಾಗೋಡಿನಲ್ಲಿಸ್ಥಾಪಿಸಬೇಕು. ಸತ್ಯಾಗ್ರಹಕ್ಕೆ 75 ವರ್ಷ ತುಂಬಿರುವ ಹಿನ್ನೆಲೆಯಲ್ಲಿಎಲ್ಲಭೂಹೀನ ರೈತರಿಗೆ ಭೂಮಿಹಕ್ಕು ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಸಂಯುಕ್ತ ರೈತ ಸಂಘದ ಪ್ರಮುಖರು ಸಚಿವ ಮಧು ಬಂಗಾರಪ್ಪ ಅವರಿಗೆ ಮನವಿ ಸಲ್ಲಿಸಿದರು.

ನಗರದಲ್ಲಿಈಚೆಗೆ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿಸಚಿವರನ್ನು ಭೇಟಿಯಾದ ರೈತ ಮುಖಂಡರು, ಕಾಗೋಡು ಸತ್ಯಾಗ್ರಹ ದೇಶದ ಭೂಹೀನ ಹಾಗೂ ಗೇಣಿ ರೈತರ ಬದುಕಿಗೆ ಹೊಸ ಬೆಳಕು ನೀಡಿದ ಐತಿಹಾಸಿಕ ಹೋರಾಟವಾಗಿದ್ದು, ಸರಕಾರ ಅದರ ನೆನಪನ್ನು ಉಳಿಸುವ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಾಗರ-ಹೊಸನಗರ ತಾಲೂಕುಗಳನ್ನು ಬರಪೀಡಿತ ಪಟ್ಟಿಯಿಂದ ಕೈಬಿಟ್ಟಿರುವುದು ಅವೈಜ್ಞಾನಿಕವಾಗಿದ್ದು, ಹಿಂದಿನ ಸರಕಾರ ಜಾರಿಗೆ ತಂದ ಭೂಸುಧಾರಣಾ ತಿದ್ದುಪಡಿ ಕಾಯಿದೆಯನ್ನು ಪ್ರಣಾಳಿಕೆಯಂತೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭ ಸಂಘದ ರಾಜ್ಯ ಉಪಾಧ್ಯಕ್ಷ ಶಿವಾನಂದ ಕುಗ್ವೆ, ಗೌರವಾಧ್ಯಕ್ಷ ಜಿನೇಶ್ ಕುಮಾರ್ , ಅಧ್ಯಕ್ಷ ಹೊಯ್ಸಳ ಗಣಪತಿಯಪ್ಪ, ಸುಂದರ ಸಿಂಗ್ , ರಮೇಶ್ ಐಗಿನಬೈಲು, ಭದ್ರೇಶ್ ಬಾಳಗೋಡು, ಬೇಬಿ ಗೋಳಗೋಡು, ಜಯಲಕ್ಷಮ್ಮ, ರಾಮಪ್ಪ ಶಿರವಾಳ ಮತ್ತಿತರರು ಇದ್ದರು.

ಚಿತ್ರಶೀರ್ಷಿಕೆ

07ಎಸ್ ಜಿಆರ್ 1

ಸಾಗರದಲ್ಲಿಈಚೆಗೆ ಸಚಿವ ಮಧು ಬಂಗಾರಪ್ಪಗೆ ರೈತ ಸಂಘದ ಪ್ರಮುಖರು ಮನವಿ ಸಲ್ಲಿಸಿದರು.

ಓದಲೇ ಬೇಕಾದ ಸುದ್ದಿ