ಗ್ರಾಮದ ಹಳ್ಳದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿಪ್ರಥಮ ವರ್ಷದ ನವರಾತ್ರಿ ಉತ್ಸವದ ನಿಮಿತ್ತ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸಡಗರ, ಸಂಭ್ರಮ ಹಾಗೂ ತೀವ್ರ ಭಕ್ತಿಭಾವದಿಂದ ವಿಜೃಂಭಣೆಯಿಂದ ಜರುಗಿತು.ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಬಾಡಗಿ ಗ್ರಾಮದ ಸಂಗಯ್ಯ ಸ್ವಾಮೀಜಿ ಆಶೀರ್ವಚನ ನೀಡಿ, ‘‘ಶ್ರೀ ದುರ್ಗಾದೇವಿ ಸಾಮಾನ್ಯ ದೇವಿಯಲ್ಲ, ಸಕಲ ಜಗತ್ತಿಗೆ ಶಕ್ತಿ ನೀಡುವ ಆದಿಶಕ್ತಿ ಸ್ವರೂಪಿಣಿಯಾಗಿದ್ದಾಳೆ. ಭಕ್ತಿಯಿಂದ ತಾಯಿಯನ್ನು ಆರಾಧಿಸಿ, ಶ್ರದ್ಧೆಯಿಂದ ಪ್ರಾರ್ಥಿಸುವ ಭಕ್ತರ ಸಂಕಷ್ಟಗಳಿಗೆ ಸ್ಪಂದಿಸುವ ಕರುಣಾಮಯಿ,’’ ಎಂದರು.
ಶ್ರೀ ದುರ್ಗಾದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಆಕಾಶ ಮಾದರ ಹಾಗೂ ಅವರ ಪತ್ನಿ ರೇಷ್ಮಾ ಅವರು ಮುತ್ತೈದೆಯರಿಗೆ ಉಡಿ ತುಂಬಿದರು. ಅರ್ಚಕ ರಾಚಪ್ಪ ಮಾದರ ಪೂಜಾ ಕೈಂಕರ್ಯಗಳನ್ನು ನೆರವೇರಿಸಿದರು. ಸಮಾಜದ ಹಿರಿಯರಾದ ಅಪ್ಪಾಸಾಬ ವಿಠ್ಠಲ ಸಪ್ತಸಾಗರ ಅನ್ನಪ್ರಸಾದದ ಸೇವೆ ಒದಗಿಸಿದ್ದರು.
ಮಾದಿಗ ಸಮಾಜ ಹಿರಿಯರಾದ ಬಸಪ್ಪ ಮಾದರ, ಅಪ್ಪಾಸಾಬ ಸಪ್ತಸಾಗರ, ಕಾಮೇಶ ಸಪ್ತಸಾಗರ, ಸುರೇಶ ಮಾದರ, ಶೆಟೆಪ್ಪ ಮಾದರ, ಪಾಂಡು ಮಾದರ, ಬಾಳಪ್ಪ ಮಾದರ, ಸಂಗಪ್ಪ ಮಾದರ, ಟ್ರಸ್ಟ ಕಮೀಟಿ ಉಪಾಧ್ಯಕ್ಷ ಸಚೀನ ಮಹಾಲಿಂಗಪೂರ, ಕಾರ್ಯದರ್ಶಿ ಅಪ್ಪಾಸಾಬ ಮಾದರ, ಖಜಾಂಚಿ ಸುಭಾಸ ಮಾದರ, ವಿಜಯ ಮಾದರ, ಅಪ್ಪಾಸಾಬ ಮಾದರ ಸೇರಿದಂತೆ ಇನ್ನಿತರರು ಇದ್ದರು.
-17ಐಗಳಿ1
ಐಗಳಿಯ ಹಳ್ಳದ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು.