ಹೆರಾಯಿನ್ ಮಾರಾಟ ಯತ್ನ; ಇಬ್ಬರ ಬಂಧನ

Contributed by: ravi.gosavi@timesofindia.com|Vijaya Karnataka•
attempt to sell heroin in belagavi two arrested
ಬೆಳಗಾವಿ : ನಗರದ ರಾಷ್ಟ್ರೀಯ ಹೆದ್ದಾರಿ ಸಮೀಪ ಮಾದಕ ವಸ್ತು, ಹೆರಾಯಿನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 3 ಲಕ್ಷ ರೂ. ಮೌಲ್ಯದ ಹೆರಾಯಿನ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ. ಅಂಬೇಡ್ಕರ್ ಗಲ್ಲಿಯ ಮಹಾಂತೇಶ್ ರಾಮಣ್ಣ ಅಂಬಿಗೇರ(37) ಹಾಗೂ ಯಳ್ಳೂರಿನ ಹರಿಕಾಲನಿ ನಿವಾಸಿ ಆಕಾಶ್ ಸುರೇಶ್ ನಂದಿ(28) ಬಂಧಿತ ಆರೋಪಿಗಳು. ಆರೋಪಿಗಳಿಂದ 2.90 ಲಕ್ಷ ರೂ. ಮೌಲ್ಯದ 14.49 ಗ್ರಾಂ ಹೆರಾಯಿನ್ ಪುಡಿ ಹಾಗೂ 10 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಗಳನ್ನು ಜಪ್ತಿ ಮಾಡಲಾಗಿದೆ. ಮಹಾರಾಷ್ಟ್ರದ ಅಮ್ಮ ಎಂಬ ಮಹಿಳೆಯಿಂದ ಹೆರಾಯಿನ್ ತಂದಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ತಿಳಿಸಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಫೋಟೊ- -18ರವಿಜಿ3
ಹೆರಾಯಿನ್ ಮಾರಾಟ ಮಾಡಲು ಯತ್ನಿಸಿದ ಆರೋಪಿಗಳನ್ನು ಬಂಧಿಸಿದ ಪೊಲೀಸರು.

ಓದಲೇ ಬೇಕಾದ ಸುದ್ದಿ