ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶಿವಮಂದಿರ ಆವರಣದಲ್ಲಿಸಂಭ್ರಮ ಸಡಗರದಿಂದ ದಾಂಡಿಯಾ ನೃತ್ಯ ಜರುಗಿತು.**
ಶಿವಮಂದಿರದಲ್ಲಿಸಂಭ್ರಮದ ದಾಂಡಿಯಾ
ವಿಕ ಸುದ್ದಿಲೋಕ ಕಲಬುರಗಿ
ದಸರಾ ಹಬ್ಬದ ಪ್ರಯುಕ್ತ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಶಿವಮಂದಿರ ಆವರಣದಲ್ಲಿಸಂಭ್ರಮ ಸಡಗರದಿಂದ ದಾಂಡಿಯಾ ನೃತ್ಯ ಜರುಗಿತು.
ಬಿಜೆಪಿ ನಾಯಕಿ ಶಶಿಕಲಾ ಟೆಂಗಳಿ ದಾಂಡಿಯಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದಾಂಡಿಯಾ ನೃತ್ಯ ದಸರಾ ಹಬ್ಬದ ವಿಶೇಷ ಸಾರುತ್ತದೆ. ದಾಂಡಿಯಾ ನೃತ್ಯ ಕೇವಲ ಮನರಂಜನೆ ಅಲ್ಲ. ಒಗ್ಗಟ್ಟು ಬಲಪಡಿಸುವ ಸಾಧನವಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ಜಯನಗರ ಶಿವಮಂದಿರ ಅಭಿವೃದ್ಧಿ ಟ್ರಸ್ಟ್ ನಿಂದ ಶಿವಮಂದಿರ ಆವರಣದಲ್ಲಿಏರ್ಪಡಿಸಿ ಯಶಸ್ಸು ಕಂಡಿರುವುದು ಶ್ಲಾಘನೀಯ ಎಂದರು.
ನಗರದ ವಿವಿಧ ಬಡಾವಣೆಗಳಿಂದ ಅನೇಕ ಮಹಿಳೆಯರು, ತರುಣಿಯರು ವಿಶೇಷ ಅಲಂಕಾರ ಮಾಡಿಕೊಂಡು ಕೋಲು ಹಿಡಿದುಕೊಡು ನೃತ್ಯದಲ್ಲಿಭಾಗವಹಿಸಿದ್ದರು. ಟ್ರಸ್ಟ್ ಅಧ್ಯಕ್ಷ ಡಾ.ಲಿಂಗರಾಜ ಸಿರಗಾಪುರ, ಹಿರಿಯ ಸದಸ್ಯ ಭೀಮಾಶಂಕರ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ, ಅನುರಾಧ ಕುಮಾರಸ್ವಾಮಿ, ಲತಾ ತುಪ್ಪದ, ದಾಂಡಿಯಾ ನೃತ್ಯಗಾರ್ತಿ ರಾಜೇಶ್ವರಿ ಪಾಟೀಲ ಮಾತನಾಡಿದರು.
ಟ್ರಸ್ ್ಬ ಪದಾಧಿಕಾರಿ ಸಿದ್ಧಲಿಂಗ ಗುಬ್ಬಿ, ಮಲ್ಲಯ್ಯ ಸ್ವಾಮಿ ಗಂಗಾಧರಮಠ, ವೀರಪ್ಪ ಹುಡುಗಿ, ಹಿರಿಯ ಸದಸ್ಯ ಗುರುಪಾದಪ್ಪ ಕಾಂತಾ, ಎಸ್ ಡಿ ಸೇಡಂಕರ, ಬಸವರಾಜ ಪುರ್ಮ, ಮನೋಹರ ಬಡಶೇಷಿ, ಸುನೀಲ್ ಬಿಡಪ್ , ಶಿವಮಂದಿರದ ಅರ್ಚಕ ಬಸಯ್ಯಸ್ಮಾಮಿ ಕೋಡದೂರ, ಮಹಿಳಾ ಘಟಕದ ಸುರೇಖಾ ಬಾಲಕೊಂದೆ, ಗೀತಾ ಸಿರಗಾಪುರ, ಪಾರ್ವತಿ ರಠಕಲ…, ಗೀತಾ ಹುಡುಗಿ, ಗಂಗಾ ಅನ್ವರಕರ, ವಿಜಯಲಕ್ಷ್ಮಿ ಪುರ್ಮ, ಶೈಲಜಾ ಬೊಮ್ಮಣ, ನಿಲೋಚನಾ ಬಿಡಪ್ಪ, ಅರ್ಚನಾ, ಜ್ಯೋತಿ ಬಂಡಿ, ಗೀತಾಂಜಲಿ, ಶ್ರೀದೇವಿ, ಜ್ಯೋತಿ ವೈದ್ಯರಾಜ, ಶಿವಲಿಲಾ ಬೊಮ್ಮಣ, ಸವಿತಾ ಕೋಟಗೆ ಇತರರಿದ್ದರು.