ಟಿ.ಶೆಟ್ಟಿಗೇರಿಯಲ್ಲಿಸ್ವಚ್ಛತಾ ಕಾರ ್ಯಕ್ರಮ

Contributed by: jagadishjodubeeti@gmail.com|Vijaya Karnataka•
complete overview of the cleanliness drive in t shettigere
ವಿಕ ಸುದ್ದಿಲೋಕ ಗೋಣಿಕೊಪ್ಪ

ಟಿ.ಶೆಟ್ಟಿಗೇರಿ ಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜ, ಸಂಭ್ರಮ ಪೊಮ್ಮಕ್ಕಡ ಕ್ರೀಡೆ-ಸಾಂಸ್ಕೃತಿಕ ಸಂಸ್ಥೆ ಹಾಗೂ ಟಿ.ಶೆಟ್ಟಿಗೇರಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯರಿಂದ ಟಿ.ಶೆಟ್ಟಿಗೇರಿ ಪಟ್ಟಣದ ಸುತ್ತಮುತ್ತಲ ಪ್ರದೇಶದಲ್ಲಿಸ್ವಚ್ಛತಾ ಕಾರ ್ಯಕ್ರಮ ನಡೆಸಲಾಯಿತು.
ತಾವಳಗೇರಿಯ ಪೌರಾಣಿಕ ಹಿನ್ನೆಲೆಯುಳ್ಳ ಪ್ರಸಿದ್ಧ ಪೆರುಮಾಳ್ ಪಟ್ಟಿಯಿಂದ ಟಿ.ಶೆಟ್ಟಿಗೇರಿಯ ಕೊರಕೊಟ್ ್ಟ ಅಯ್ಯಪ್ಪ ದೇವಸ್ಥಾನದ ಹೆಬ್ಬಾಗಿಲವರೆಗೆ ಹಾಗೂ ರೂಟ್ಸ್ ವಿದ್ಯಾಸಂಸ್ಥೆಯವರೆಗೆ ಸದಸ್ಯರೆಲ್ಲರೂ ಸ್ವ ಇಚ್ಚೆಯಿಂದ ಪಾಲ್ಗೊಂಡು ಸ್ವಚ್ಛತಾ ಕಾರ ್ಯಕ್ರಮ ನಡೆಸಿದರು.

ಸ್ವಚ್ಛತೆಯೇ ದೈವತ್ವ ಎಂಬ ಘೋಷವಾಕ್ಯದಡಿಯಲ್ಲಿಮುಂಜಾನೆ 6ಗಂಟೆಯಿಂದ 8.30ರವರೆಗೆ ನಡೆಸಿದ ಕಾರ ್ಯಕ್ರಮದಲ್ಲಿಮೂರೂ ಸಂಸ್ಥೆಗಳ ಸದಸ್ಯರು ಭಾಗವಹಿಸಿದ್ದು, ಟಿ.ಶೆಟ್ಟಿಗೇರಿ ಪಟ್ಟಣ ಸುತ್ತಮುತ್ತಲಿನ ಸುಮಾರು ನಾಲ್ಕು ಕಿಲೋ ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿದ್ದ ಕಸತೆಗೆದು ಸ್ವಚ್ಛಗೊಳಿಸಿದರು.

ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ವತಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿಈ ತಿಂಗಳ 18ರಿಂದ 27ರವರೆಗೆ ಹತ್ತನೆ ವರ್ಷದ ಚಂಗ್ರಾಂದಿ ಪತ್ತಲೋದಿ ಕಾರ ್ಯಕ್ರಮ ನಡೆಸುತ್ತಿದ್ದು, ಇದರ ಅಂಗವಾಗಿ ತಲಕಾವೇರಿಯಿಂದ ಕಾವೇರಿ ತೀರ್ಥ ತಂದು ಕೊಡವ ಸಮಾಜದಲ್ಲಿ18ರಂದು ಬೆಳಗ್ಗೆ 10ಗಂಟೆಗೆ ತೀರ್ಥ ಪೂಜೆ ಹಾಗೂ ಕಣಿ ಪೂಜೆ ನೆರವೇರಿಸಿದ ನಂತರ ಭಕ್ತಾದಿಗಳಿಗೆ ಕಾವೇರಿ ತಾಯಿಯ ಪವಿತ್ರ ತೀರ್ಥವನ್ನು ವಿತರಿಸಲಾಗುವುದು.

ತಾಯಿ ಕಾವೇರಿ ಪವಿತ್ರ ತೀರ್ಥ ರೂಪಿಣಿಯಾಗಿ ಅವಿರ್ಭವಿಸುವ ಸಂದರ್ಭ ಹಾಗೂ ಕಾವೇರಿ ತೀರ್ಥವನ್ನು ಟಿ.ಶೆಟ್ಟಿಗೇರಿಗೆ ತರುವ ಮುನ್ನ ಕೊಡವ ಸಮಾಜ ವ್ಯಾಪ್ತಿಯ ಪ್ರದೇಶ ಸ್ವಚ್ಛವಾಗಿರಬೇಕೆಂಬ ಉದ್ದೇಶದಿಂದ ನೆರವೇರಿಸಿದರು.

ಈ ಸ್ವಚ್ಛತಾ ಕಾರ ್ಯಕ್ರಮದಲ್ಲಿತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಸಂಭ್ರಮ ಪೊಮ್ಮಕ್ಕಡ ಕೂಟದ ಹಾಗೂ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷ - ಆಡಳಿತ ಮಂಡಳಿ ಹಾಗೂ ಸದಸ್ಯರು ಸೇರಿದಂತೆ ಐವತ್ತಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.

ಫೋಟೋ : 15 ಜಿ.ಕೆ.ಎಲ್ 05: ಗೋಣಿಕೊಪ್ಪದ ಟಿ.ಶೆಟ್ಟಿಗೇರಿ ಪಟ್ಟಣದಲ್ಲಿಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯರಿಂದ ಸ್ವಚ್ಛತಾ ಕಾರ್ಯ ನಡೆಯಿತು.

ಓದಲೇ ಬೇಕಾದ ಸುದ್ದಿ