52 ಅಡಿ ಎತ್ತರದ ರಾವಣ, 48 ಅಡಿ ಎತ್ತರದ ಮೇಘನಾಥ ಮತ್ತು ಕುಂಭಕರ್ಣನ ಮೂರ್ತಿಗಳ ಆಕರ್ಷಣೆವಿಕ ಸುದ್ದಿಲೋಕ ದಾಂಡೇಲಿ
ನಗರದ ಪ್ರಸಿದ್ಧ ಶ್ರೀ ದಾಂಡೇಲಪ್ಪ ಜಾತ್ರೆಯ ಅಂಗವಾಗಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಆಶ್ರಯದಲ್ಲಿ ಅ.20ರಂದು ಸಂಜೆ 6.30ರಿಂದ ಅದ್ಧೂರಿ ರಾಮಲೀಲೋತ್ಸವ ಆಯೋಜಿಸಲಾಗಿದೆ. ಕಾರ್ಯಕ್ರಮದ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ ತಿವಾರಿ ತಿಳಿಸಿದರು.
ನಗರದ ಡಿಲಕ್ಸ್ ಸಭಾಭವನದಲ್ಲಿನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘‘ಈ ಬಾರಿ 52 ಅಡಿ ಎತ್ತರದ ರಾವಣ ಹಾಗೂ 48 ಅಡಿ ಎತ್ತರದ ಮೇಘನಾಥ ಮತ್ತು ಕುಂಭಕರ್ಣನ ಮೂರ್ತಿಗಳನ್ನು ನಿರ್ಮಿಸಲಾಗಿದೆ. ಸಾರ್ವಜನಿಕರ ಸುರಕ್ಷತೆಗಾಗಿ ಅಗ್ನಿಶಾಮಕ ವಾಹನ, ಆಂಬ್ಯುಲೆನ್ಸ್ , ವೈದ್ಯರು ಹಾಗೂ ದಾದಿಯರ ವ್ಯವಸ್ಥೆ ಮಾಡಲಾಗಿದೆ. ಸಂಚಾರಕ್ಕೆ ತೊಂದರೆಯಾಗದಂತೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ.
ಸಂಚಾರ ಮಾರ್ಗ ಬದಲಾವಣೆ, ಪಾಕಿಂರ್ ಗ್ ವ್ಯವಸ್ಥೆ: ಡಿವೈಎಸ್ಪಿ ಗಿರೀಶ್ ಮಾತನಾಡಿ ‘‘ಶ್ರೀದಾಂಡೇಲಪ್ಪ ಜಾತ್ರೆ ಶಾಂತಿಯುತವಾಗಿ ನಡೆಯಲು ಪೊಲೀಸ್ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಜಾತ್ರೆಯ ಮುನ್ನಾದಿನ ಸಂಜೆ 6 ರಿಂದ ಜಾತ್ರೆ ಮುಗಿಯುವವರೆಗೆ ದಾಂಡೇಲಿಯಿಂದ ಹಳಿಯಾಳಕ್ಕೆ ಹಾಗೂ ಹಳಿಯಾಳದಿಂದ ದಾಂಡೇಲಿಗೆ ಸಂಚರಿಸುವ ಬಸ್ ಗಳು ಮತ್ತು ಇತರ ವಾಹನಗಳಿಗೆ ಕರ್ಕಾ-ಬರ್ಚಿನಾಕಾ, ಬಂಬೂಗೇಟ್ ಹಾಗೂ ಸೋಮಾನಿ ವೃತ್ತದ ಮಾರ್ಗವಾಗಿ ಸಂಚರಿಸಲು ವ್ಯವಸ್ಥೆ ಮಾಡಲಾಗಿದೆ’’ ಎಂದು ತಿಳಿಸಿದರು.
ದ್ವಿಚಕ್ರ ವಾಹನಗಳ ಪಾರ್ಕಿಂಗ್ ಗೆ ನಗರದ ಕನ್ಯಾ ವಿದ್ಯಾಲಯದಲ್ಲಿಹಾಗೂ ನಾಲ್ಕು ಚಕ್ರ ವಾಹನಗಳ ಪಾರ್ಕಿಂಗ್ ಗೆ ಜನತಾ ವಿದ್ಯಾಲಯದ ಆವರಣದಲ್ಲಿವ್ಯವಸ್ಥೆ ಕಲ್ಪಿಸಲಾಗಿದೆ. ಆಟೊಗಳು ಹಳಿಯಾಳ ರಸ್ತೆಯ ಮೂರನೇ ಗೇಟ್ ವರೆಗೆ ಮಾತ್ರ ಸಂಚರಿಸಲು ಅವಕಾಶವಿದೆ’’ ಎಂದರು.
ಸಿಸಿ ಕ್ಯಾಮೆರಾ ಅಳವಡಿಕೆ: ಪಿಎಸ್ ಐ ಅಮೀನ ಅತ್ತಾರ ಮಾತನಾಡಿ, ‘‘ಪೊಲೀಸ್ ಇಲಾಖೆಯ ಮಾರ್ಗಸೂಚಿಯಂತೆ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್ ಒಪಿ)ಯನ್ನು ಕಾಗದ ಕಾರ್ಖಾನೆ ಹಾಗೂ ದಾಂಡೇಲಪ್ಪ ಜಾತ್ರಾ ಸಮಿತಿಗೆ ನೀಡಲಾಗಿದೆ. ಪ್ರಮುಖ ಸ್ಥಳಗಳಲ್ಲಿಸಿಸಿ ಕ್ಯಾಮೆರಾ ಮತ್ತು ಮಾನಿಟರ್ ಗಳನ್ನು ಅಳವಡಿಸಲಾಗಿದ್ದು, ಭದ್ರತೆಗಾಗಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ’’ ಎಂದರು.
ಸುದ್ದಿಗೋಷ್ಠಿಯಲ್ಲಿಸಿಪಿಐ ಶಿವಾನಂದ ಅಂಬಿಗೇರ, ಪಿಎಸ್ ಐ ಶಿವಾನಂದ ನಾವದಗಿ, ಪಿಎಸ್ ಐ ಮಂಜುಳಾ ರಾವೋಜಿ, ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ಜೆ., ಭದ್ರತಾ ಅಧಿಕಾರಿಗಳಾದ ಕುಶಾಲಪ್ಪ ಹಾಗೂ ಎಸ್ .ಜಿ. ಪಾಟೀಲ ಇದ್ದರು.