ಶಿಕ್ಷಣ ತಜ್ಞರು, ತುಮಕೂರಿನ ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆಯ ನಿರ್ಮಾತೃಗಳು ಹಾಗೂ ನನ್ನ ಆತ್ಮೀಯ ಒಡನಾಡಿ ಕೆ.ಬಿ. ಜಯಣ್ಣ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಯಿತು ಎಂದು ಡಿಸಿಎಂ ಡಾ.ಜಿ.ಪರಮೇಶ್ವರ್ ಸಂತಾಪ ಸೂಚಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳ ಮೂಲಕ ಅಕ್ಷರ-ಜ್ಞಾನ ನೀಡಿ, ಸಾವಿರಾರು ವಿದ್ಯಾರ್ಥಿಗಳ ಬದುಕನ್ನು ಉಜ್ವಲವಾಗಿಸಿದ ಸಮಾಜಮುಖಿ ಜೀವವನ್ನು ನಾವಿಂದು ಕಳೆದುಕೊಂಡಿದ್ದೇವೆ ಎಂದಿದ್ದಾರೆ.ನನ್ನ ಮೇಲಿನ ಪ್ರೀತಿ - ವಿಶ್ವಾಸದಿಂದ ನನಗಾಗಿ ಮೊಟ್ಟಮೊದಲ ಅಭಿಮಾನಿ ಬಳಗವೊಂದನ್ನು ಕಟ್ಟಿ, ನನ್ನೆಲ್ಲಾಜನಪರವಾದ ಕಾರ್ಯಗಳಿಗೆ ಬೆಂಬಲವಾಗಿ ನಿಂತು ಪ್ರೋತ್ಸಾಹ ನೀಡುತ್ತಿದ್ದ ಅವರ ವ್ಯಕ್ತಿತ್ವ ಬೆಲೆಕಟ್ಟಲಾಗದಂತದ್ದು. ಜಯಣ್ಣ ತಮ್ಮ ಸಜ್ಜನಿಕೆ - ಸೇವೆಯ ಮೂಲಕ ನಮ್ಮ ನಡುವೆ ಸದಾ ಜೀವಂತ ಎಂದು ನೆನೆದಿದ್ದಾರೆ. ಭಗವಂತನು ಶ್ರೀಯುತರ ಆತ್ಮಕ್ಕೆ ಚಿರಶಾಂತಿ ಕರುಣಿಸಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬಸ್ಥರಿಗೆ ನೀಡಲಿ ಎಂದು ಪರಮೇಶ್ವರ್ ಪ್ರಾರ್ಥಿಸಿದ್ದಾರೆ.
ಬಾಕ್ಸ್
ವಿಕ ಅಚೀವರ್ಸ್ ಆಫ್ ಕರ್ನಾಟಕ :
ಕೆ.ಬಿ.ಜಯಣ್ಣ ಅವರಿಗೆ ವಿಜಯ ಕರ್ನಾಟಕ ಅಚೀವರ್ಸ್ ಆಫ್ ಕರ್ನಾಟಕ ಪ್ರಶಸ್ತಿ ನೀಡಿ ಗೌರವಿಸಿದೆ.