ಹಾರೂಗೇರಿ ಹೆದ್ದಾರಿಯಲ್ಲಿಕಟೌಟ್ ಗಳ ಕಾರುಬಾರು

Contributed by: brarakeri@rediffmail.com|Vijaya Karnataka•
installation of cutouts on harugeri highway causing accident fears
ಧಿ- ಅಪಘಾತದ ಭೀತಿಯಲ್ಲಿವಾಹನ ಸವಾರರು - ಕಳೆಗುಂದಿದ ಪಟ್ಟಣದ ಸೌಂದರ್ಯ

ವಿಕ ಸುದ್ದಿಲೋಕ ಹಾರೂಗೇರಿ
ಇಲ್ಲಿನ ಪ್ರಸಿದ್ಧ ವೇದಾಂತ ಪರಿಷತ್ ಜಾತ್ರಾಮಹೋತ್ಸವ ನಿಮಿತ್ತ ಹಾರೂಗೇರಿ ಪಟ್ಟಣವು ಸಿಂಗಾರಗೊಂಡ ಬೆನ್ನಲ್ಲೇ, ಪಟ್ಟಣದ ನಾನಾ ಕಡೆ ಅಳವಡಿಸಲಾಗಿರುವ ಅನಧಿಕೃತ ಫ್ಲೆಕ್ಸ್ ಹಾಗೂ ಕಟೌಟ್ ಗಳು ಪಟ್ಟಣದ ಸೌಂದರ್ಯವನ್ನು ಸಂಪೂರ್ಣವಾಗಿ ಹಾಳುಗೆಡವಿವೆ. ಜತ್ - ಜಾಂಬೋಟಿ ರಾಜ್ಯ ಹೆದ್ದಾರಿಯ ರಸ್ತೆಬದಿ ಹಾಗೂ ಡಿವೈಡರ್ ಗಳಲ್ಲಿಇಂತಹ ಫ್ಲೆಕ್ಸ್ ಗಳು ಸಾಲುಗಟ್ಟಿ ರಾರಾಜಿಸುತ್ತಿದ್ದರೂ, ಪೊಲೀಸ್ ಇಲಾಖೆ ಹಾಗೂ ಪುರಸಭೆ ಸಂಪೂರ್ಣ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕ ವಲಯದಲ್ಲಿತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ರಾಜ್ಯ ಹೆದ್ದಾರಿಗಳಲ್ಲಿಫ್ಲೆಕ್ಸ್ ಅಳವಡಿಕೆಗೆ ರಸ್ತೆ ಸಂಚಾರಿ ನಿಯಮಗಳಲ್ಲಿಯಾವುದೇ ಅವಕಾಶವಿಲ್ಲದಿದ್ದರೂ, ಹೆದ್ದಾರಿ ಅಕ್ಕಪಕ್ಕ ಹಾಗೂ ಡಿವೈಡರ್ ಗಳ ಮಧ್ಯದಲ್ಲೇ ಕಾನೂನು ಬಾಹಿರವಾಗಿ ಫ್ಲೆಕ್ಸ್ ಗಳನ್ನು ಅಳವಡಿಸಲಾಗಿದೆ. ಅಥಣಿ ರಸ್ತೆಯ ಬಾಬಾನಂದ ನಗರ ವೃತ್ತದಿಂದ ಹಿಡಿದು ಗೋಕಾಕ ರಸ್ತೆಯುದ್ದಕ್ಕೂ ಸಾಲು ಸಾಲು ಕಟೌಟ್ ಗಳು ತಲೆಯೆತ್ತಿವೆ.

ಅಪಘಾತ ಭೀತಿ: ಪಟ್ಟಣದಲ್ಲಿವಾಹನಗಳ ಏಕಮುಖ ಸಂಚಾರಕ್ಕಾಗಿ ನಿರ್ಮಿಸಲಾದ ಡಿವೈಡರ್ ಗಳನ್ನು ಇದೀಗ ಫ್ಲೆಕ್ಸ್ ಗಳು ಸಂಪೂರ್ಣವಾಗಿ ಕಬಳಿಸಿವೆ. ರಸ್ತೆಯ ತಿರುವುಗಳಲ್ಲಿಎಡ-ಬಲದಿಂದ ಬರುವ ವಾಹನಗಳು ಕಾಣಿಸದೇ ಇರುವುದರಿಂದ ವಾಹನ ಚಾಲಕರಿಗೆ ಮತ್ತು ಪಾದಚಾರಿಗಳಿಗೆ ಅಪಘಾತದ ಭಯ ಎದುರಾಗಿದೆ. ದ್ವಿಚಕ್ರ ವಾಹನ ಸವಾರರು ಜೀವ ಕೈಯಲ್ಲಿಹಿಡಿದುಕೊಂಡು ಸಂಚರಿಸುವ ದುಸ್ಥಿತಿ ನಿರ್ಮಾಣವಾಗಿದೆ.

ಸ್ವಪ್ರತಿಷ್ಠೆ ಪ್ರದರ್ಶನ: ನಿಯಮಬಾಹಿರವಾಗಿ ಫ್ಲೆಕ್ಸ್ ಹಾಗೂ ಬ್ಯಾನರ್ ಗಳನ್ನು ಅಳವಡಿಸಿರುವವರಲ್ಲಿರಾಜಕಾರಣಿಗಳು ಮತ್ತು ಅವರ ಬೆಂಬಲಿಗರೇ ಹೆಚ್ಚಾಗಿದ್ದಾರೆ. ಹಾಲಿ ಹಾಗೂ ಮಾಜಿ ಶಾಸಕರ ಬೆಂಬಲಿಗರು ಜಿದ್ದಿಗೆ ಬಿದ್ದು ಬೃಹತ್ ಗಾತ್ರದ ಬ್ಯಾನರ್ ಗಳನ್ನು ಹಾಕಿದ್ದು, ಜಾತ್ರೆಗೆ ಶುಭಾಶಯ ಕೋರುವುದಕ್ಕಿಂತ ತಮ್ಮ ಸ್ವಪ್ರತಿಷ್ಠೆ ಹಾಗೂ ಪ್ರಚಾರದ ಭರಾಟೆಯೇ ಇಲ್ಲಿಹೆಚ್ಚಾಗಿ ಎದ್ದು ಕಾಣುತ್ತಿದೆ.

-----------------------

ಬಾಕ್ಸ್ ....

ಪುರಸಭೆ ಆದಾಯಕ್ಕೆ ಕನ್ನ

ಐದು ದಿನಗಳ ಕಾಲ ನಡೆಯುವ ಈ ವೈಭವದ ಜಾತ್ರೆಗೆ ರಾಜ್ಯ ಹಾಗೂ ನೆರೆ ರಾಜ್ಯಗಳಿಂದ ಸಾವಿರಾರು ಭಕ್ತರು ಮತ್ತು ಮಹಾತ್ಮರು ಆಗಮಿಸುತ್ತಿದ್ದು, ಈ ಫ್ಲೆಕ್ಸ್ ಗಳ ಹಾವಳಿಯಿಂದಾಗಿ ತೀವ್ರ ಕಿರಿಕಿರಿ ಅನುಭವಿಸುವಂತಾಗಿದೆ. ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿಬ್ಯಾನರ್ ಅಳವಡಿಸಲು ಪರವಾನಗಿ ಪಡೆದು ಶುಲ್ಕ ಪಾವತಿಸುವುದು ಕಡ್ಡಾಯವಾಗಿದ್ದರೂ, ಪುರಸಭೆ ಅಧಿಕಾರಿಗಳ ಅಸಡ್ಡೆಯಿಂದಾಗಿ ಯಾವುದೇ ಅನುಮತಿ ಇಲ್ಲದೆ ಅನಧಿಕೃತ ಫ್ಲೆಕ್ಸ್ ಗಳು ತಲೆಯೆತ್ತಿದ್ದು, ಪುರಸಭೆಯ ಆದಾಯಕ್ಕೂ ಕನ್ನ ಬಿದ್ದಿದೆ.

-----------------

ಕ್ವೋಟ್ಸ್ ..

ಫ್ಲೆಕ್ಸ್ ಹಾಗೂ ಬ್ಯಾನರ್ ಅಳವಡಿಕೆಗಾಗಿ ಒಂದೆರಡು ಅರ್ಜಿಗಳು ಮಾತ್ರ ಬಂದಿದ್ದು, ಉಳಿದವರು ಅನುಮತಿ ಪಡೆದಿಲ್ಲ. ನಿಯಮಬಾಹಿರವಾಗಿ ಫ್ಲೆಕ್ಸ್ ಅಳವಡಿಸಿದವರ ಮಾಹಿತಿ ಸಂಗ್ರಹಿಸಿ ಶುಲ್ಕ ವಸೂಲು ಮಾಡಲಾಗುವುದು. ಅರ್ಜಿ ಸಲ್ಲಿಸಿದರೆ ಅನುಮತಿ ನೀಡಲಾಗುವುದು.

-ಬಸವರಾಜ ಮನಗೂಳಿ, ಮುಖ್ಯಾಧಿಕಾರಿ, ಪುರಸಭೆ ಹಾರೂಗೇರಿ

---------

ಕ್ವೋಟ್ಸ್ ....

ರಾಜ್ಯ ಹೆದ್ದಾರಿಯ ಡಿವೈಡರ್ ನಲ್ಲಿಸಾಲುಸಾಲು ಫ್ಲೆಕ್ಸ್ ಗಳನ್ನು ಅಳವಡಿಸಿರುವುದರಿಂದ ರಸ್ತೆಯೇ ಮರೆಮಾಚಿದೆ. ವಾಹನ ಚಾಲನೆ ಮಾಡುವಾಗ ಎಡ-ಬಲದಿಂದ ಬರುವ ವಾಹನಗಳು ಕಾಣಿಸದೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ.

- ರಾಜಶೇಖರ, ವಾಹನ ಚಾಲಕ

-------------

- 17ಅರಕೇರಿ2

ಹಾರೂಗೇರಿ ಪಟ್ಟಣದ ಜತ್ - ಜಾಂಬೋಟಿ ರಾಜ್ಯ ಹೆದ್ದಾರಿ ಮೇಲೆ ನೂರಾರು ಸಂಖ್ಯೆಯಲ್ಲಿಬ್ಯಾನರ್ ಗಳನ್ನು ಅಳವಡಿಸಿರುವುದು.

ಓದಲೇ ಬೇಕಾದ ಸುದ್ದಿ