ಪುಟ ನಾನ್ ಸಿನಿಮಾ

Contributed by: shubha.hegde@timesgroup.com|Vijaya Karnataka•
navaratri dandiya backless choli trending fashion transformation
ಬೆನ್ನಾಣಗಿತ್ತಿಯರು (ಸ್ಲಗ್ )

ದಾಂಡಿಯಾದಲ್ಲಿಬ್ಯಾಕ್ ಲೆಸ್ ಚೋಲಿ ಟ್ರೆಂಡ್
-ಫ್ಯಾಷನ್ ಆಯ್ಕೆಗೆ ಟ್ರೋಲ್ ಸುರಿಮಳೆ

ಇಂಟ್ರೋ

ನವರಾತ್ರಿ ದಾಂಡಿಯಾ ನೈಟ್ ನಲ್ಲಿಬ್ಯಾಕ್ ಲೆಸ್ ಚೋಲಿಗಳು ಆಕರ್ಷಕ ವಿನ್ಯಾಸಗಳೊಂದಿಗೆ ಯುವತಿಯರಿಗೆ ಮೋಡಿ ಮಾಡಿವೆ. ಸತತ ಟ್ರೋಲ್ ಗಳ ಮಧ್ಯೆಯೂ ಈ ಪುಟ್ಟ ದಿರಸಿಗೆ ವ್ಯಾಪಕ ಬೇಡಿಕೆ ವ್ಯಕ್ತವಾಗಿದೆ.

ಬಬಿತಾ ಎಸ್ .

ನವರಾತ್ರಿ ಹಬ್ಬಕ್ಕೆ ಬಣ್ಣಬಣ್ಣದ ಲೆಹೆಂಗಾ, ಹೊಳೆಯುವ ಆಭರಣ, ಸಾಂಪ್ರದಾಯಿಕ ಉಡುಗೆಗಳು ಮತ್ತು ದಾಂಡಿಯಾ ಸಂಭ್ರಮ ಎಲ್ಲೆಡೆ ಕಳೆಗಟ್ಟಿದೆ. ಮಹಿಳೆಯರು ಸಾಂಪ್ರದಾಯಿಕ ಉಡುಗೆಗಳಿಗೆ ಆಧುನಿಕ ಫ್ಯಾಷನ್ ನ ಸ್ಪರ್ಶವಿರುವ ಉಡುಪುಗಳನ್ನು ಧರಿಸಿ ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ಲಾಸ್ಯವಾಡುತ್ತಿದ್ದಾರೆ. ಇಂಥ ದಿರಸಿನಲ್ಲಿ

ಬ್ಯಾಕ್ ಲೆಸ್ ಚೋಲಿ ಅಂದರೆ ಬೆನ್ನಿನ ಭಾಗ ತೆರೆದಿರುವ ಬ್ಲೌಸ್ ವಿನ್ಯಾಸವೂ ಅವರ ಫೇವರಿಟ್ ಆಯ್ಕೆಯಾಗಿದೆ. ಆದರೆ ಈ ಫ್ಯಾಷನಬಲ್ ಉಡುಪು ಈ ಬಾರಿ ಸಾಮಾಜಿಕ ಜಾಲತಾಣದಲ್ಲಿಟ್ರೋಲ್ ಆಗುತ್ತಿದೆ.

ಕಾಂಟೆಂಪರರಿ ಸ್ಟೈಲ್

ಸಾಂಪ್ರದಾಯಿಕ ಲೆಹೆಂಗಾದೊಂದಿಗೆ ವಿಭಿನ್ನ ವಿನ್ಯಾಸದ ಚೋಲಿ ಧರಿಸಿ ದಾಂಡಿಯಾ ಆಡಲು ಬರುವ ಯುವತಿಯರ ಫೋಟೊಗಳು ಮತ್ತು ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿಹರಿದಾಡುತ್ತಿವೆ. ಕೆಲವರು ಈ ವಿನ್ಯಾಸವನ್ನು ಆಧುನಿಕ ಫ್ಯಾಷನ್ ನ ಭಾಗವೆಂದು ಮೆಚ್ಚಿದರೆ, ಇನ್ನು ಕೆಲವರು ಉಡುಪಿನ ಆಯ್ಕೆಯ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡುತ್ತಿದ್ದಾರೆ. ಲೆಹೆಂಗಾ ಚೋಲಿಯ ಸೌಂದರ್ಯಕ್ಕಿಂತಲೂ ಅದರ ವಿನ್ಯಾಸವನ್ನೇ ಗುರಿಯಾಗಿಸಿರುವ ಕಾಮೆಂಟ್ ಗಳು ಚರ್ಚೆಗೆ ಕಾರಣವಾಗುತ್ತಿವೆ. ಸಾಂಪ್ರದಾಯಿಕ ಉಡುಪುಗಳಲ್ಲಿಯೂ ಹೊಸ ವಿನ್ಯಾಸಗಳನ್ನು ಪ್ರಯೋಗಿಸುವುದು ಫ್ಯಾಷನ್ ಜಗತ್ತಿನ ಸಹಜ ಬೆಳವಣಿಗೆ. ಆದರೆ ಇಂತಹ ಉಡುಪುಗಳನ್ನು ಧರಿಸಿದವರನ್ನು ಸಾರ್ವಜನಿಕವಾಗಿ ಟೀಕಿಸುವುದು ಅಥವಾ ಅವರ ವ್ಯಕ್ತಿತ್ವದ ಬಗ್ಗೆ ತೀರ್ಪು ನೀಡುವುದು ಎಷ್ಟು ಸಮಂಜಸ ಎಂಬ ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿಕೇಳಿಬಂದಿದೆ.

ಬೆನ್ನಾಣಗಿತ್ತಿಯರಿಗೆ ಇರಲಿ ಆತ್ಮವಿಶ್ವಾಸ

ದಾಂಡಿಯಾ ಕೇವಲ ನೃತ್ಯವಲ್ಲ, ಅದು ಸಂಭ್ರಮ, ಸ್ನೇಹ ಮತ್ತು ಸಾಂಸ್ಕೃತಿಕ ಒಗ್ಗಟ್ಟಿನ ಸಂಕೇತ. ಕಾಲ ಬದಲಾದಂತೆ ಸಾಂಪ್ರದಾಯಿಕ ಉಡುಪುಗಳ ವಿನ್ಯಾಸಗಳೂ ಬದಲಾಗುತ್ತವೆ. ಕೆಲವರಿಗೆ ಸಾಂಪ್ರದಾಯಿಕ ಶೈಲಿ ಇಷ್ಟವಾದರೆ, ಇನ್ನು ಕೆಲವರು ಆಧುನಿಕ ವಿನ್ಯಾಸಗಳನ್ನು ಆಯ್ಕೆ ಮಾಡುತ್ತಾರೆ. ಇಲ್ಲಿಆ ಉಡುಪು ಧರಿಸುವವರ ಆತ್ಮವಿಶ್ವಾಸ ಮುಖ್ಯವಾಗುತ್ತದೆ.

ಅದು ಬ್ಯಾಕ್ ಲೆಸ್ ಚೋಲಿ ಆಗಿರಲಿ, ಸ್ಲೀವ್ ಲೆಸ್ ಆಗಿರಲಿ ಅಥವಾ ಶೋಲ್ಡರ್ ಲೆಸ್ ಗೌನ್ ಆಗಿರಲಿ. ಧರಿಸಿದವರಿಗೆ ಕಂಫರ್ಟಬಲ್ ಅನಿಸಿದರೆ ಬ್ಯಾಕ್ ಲೆಸ್ ಚೋಲಿಧಾರಿಗಳೂ ಬೆನ್ನಾಣಗಿತ್ತಿಯರಾಗಿ ಆತ್ಮವಿಶ್ವಾಸದ ಹೆಜ್ಜೆಯನ್ನಿಡುತ್ತಾರೆ.

ಓದಲೇ ಬೇಕಾದ ಸುದ್ದಿ