76 ಮಂದಿಯಿಂದ ದೀಕ್ಷಾ ಭೂಮಿ ಯಾತ್ರೆ

Contributed by: prk.k73@gmail.com|Vijaya Karnataka•
significant diksha bhoomi yatra 76 eligible participants
76 ಮಂದಿಯಿಂದ ದೀಕ್ಷಾ ಭೂಮಿ ಯಾತ್ರೆ

ವಿಕ ಸುದ್ದಿಲೋಕ ಮುಳಬಾಗಲು
ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿರುವ ಬೌದ್ದ ಧರ್ಮದ ಅತ್ಯಂತ ಪವಿತ್ರವಾದ ಸ್ಮಾರಕ ಮತ್ತು ಯಾತ್ರಾ ಸ್ಥಳವಾಗಿದೆ. ಇಲ್ಲಿವಿಜಯದಶಮಿ ದಿನದಂದು ಡಾ. ಬಿ.ಆರ್ . ಅಂಬೇಡ್ಕರ್ ಭೌದ್ದಧರ್ಮವನ್ನು ಸ್ವೀಕರಿಸಿದ ಐತಿಹಾಸಿಕ ಸ್ಥಳವಾಗಿದೆ. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತಾಲೂಕಿನಿಂದ 76 ಮಂದಿ ಎಸ್ಸಿ ಎಸ್ಟಿ ಸಮುದಾಯವನ್ನು ದೀಕ್ಷಾ ಭೂಮಿ ಯಾತ್ರೆಗೆ ಉಚಿತವಾಗಿ ಕಳುಹಿಸಲಾಗುತ್ತಿದೆ ಎಂದು ಸಮಾಜ ಕಲ್ಯಾಣ ಅಧಿಕಾರಿ ಟಿ. ಹರೀಶ್ ತಿಳಿಸಿದರು.

ನಗರದ ನೇತಾಜಿ ಕ್ರೀಡಾಂಗಣದಲ್ಲಿದೀಕ್ಷಾ ಭೂಮಿ ಯಾತ್ರಾಯೋಜನೆಯಡಿ ಮಹಾ ರಾಷ್ಟ್ರದ ನಾಗಪುರಕ್ಕೆ ತೆರಳುವ 76 ಮಂದಿಗೆ ಶುಭಕೋರಿ ಮಾತನಾಡಿದ ಅವರು, ಎಲ್ಲಾಪ್ರಯಾಣಿಕರು ಸಮಾಜ ಕಲ್ಯಾಣ ಇಲಾಖೆಯ ನಿಯಮಗಳನ್ನು ಪಾಲನೆ ಮಾಡಬೇಕೆಂದು ತಿಳಿಸಿದರು.

ತಾಪಂ ಮಾಜಿ ಅಧ್ಯಕ್ಷ ವೆಂಕಟರಮಣ ಮಾತನಾಡಿ, 1956ರ ಅಕ್ಟೋಬರ್ 14 ರಂದು ಡಾ. ಬಿ.ಆರ್ .ಅಂಬೇಡ್ಕರ್ ಅವರು ತಮ್ಮ 5 ಲಕ್ಷಕ್ಕೂ ಅಧಿಕ ಅನುಯಾಯಿಗಳೊಂದಿಗೆ ಭೌಧ್ದಧರ್ಮವನ್ನು ಸ್ವೀಕರಿಸಿದ ದೀಕ್ಷಾಭೂಮಿಗೆ ತೆರಳಲು ತಾಲೂಕಿನ 76 ಮಂದಿಗೆ ಸಮಾಜ ಕಲ್ಯಾಣ ಇಲಾಖೆ ಅವಕಾಶ ಮಾಡಿಕೊಟ್ಟಿರುವುದು ಸಂತೋಷದ ವಿಷಯವಾಗಿದೆ ಎಂದು ತಿಳಿಸಿದರು.

ಡಾ. ಬಿ.ಆರ್ . ಅಂಬೇಡ್ಕರ್ ಅವರ ಆದರ್ಶ, ತತ್ವ ಹಾಗೂ ವಿಚಾರದಾರೆಗಳನ್ನು ಪ್ರತಿಯಬ್ಬರು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕಂಕಣಬದ್ದರಾಗಬೇಕೆಂದು ತಿಳಿಸಿದರಲ್ಲದೆ ಪ್ರತಿಯೊಬ್ಬರು ದೀಕ್ಷಾಭೂಮಿ ಯಾತ್ರೆ ಕೈಗೊಳ್ಳಬೇಕು ಎಂದು ತಿಳಿಸಿದರು.

ಉಪನ್ಯಾಸಕ ರಾಮಕೃಷ್ಣಪ್ಪ, ಸಮಾಜನ ಕಲ್ಯಾಣ ಇಲಾಖೆಯ ಸಿಬ್ಬಂದಿಯಾದ ಉಮಾಪತಿ, ರಾದಿಕ, ಅನಿಲ್ ಕುಮಾರ್ , ಮಂಜುನಾಥ್ , ಮತ್ತಿತರರು ಇದ್ದರು.

18 ಎಂ.ಬಿ.ಎಲ್ ಪೋಟೋ 1 ಮುಳಬಾಗಲು ನಗರದ ನೇತಾಜಿ ಕ್ರೀಡಾಂಗಣದಲ್ಲಿದೀಕ್ಷಾ ಭೂಮಿ ಯಾತ್ರೆಗೆ ತೆರಳಿದ ಪ್ರಯಾಣಿಕರಿಗೆ ಸಮಾಜ ಕಲ್ಯಾಣ ಅಧಿಕಾರಿ ಟಿ. ಹರೀಶ್ ಶುಭಕೋರಿದರು.

ಓದಲೇ ಬೇಕಾದ ಸುದ್ದಿ