ಬೆಂಗಳೂರು: ಆಭರಣ ಮಾರಾಟ ಸಂಸ್ಥೆ ಜೋಸ್ ಅಲುಕ್ಕಾಸ್ , ಕರ್ನಾಟಕದಾದ್ಯಂತ ಇರುವ ತನ್ನ ಶೋರೂಮ್ ಗಳ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಕೊಡುಗೆಗಳನ್ನು ಘೋಷಿಸಿದೆ.‘‘ವಿವಿಧೆಡೆ ಇರುವ ಜೋಸ್ ಅಲುಕ್ಕಾಸ್ ಮಳಿಗೆಗಳು ವಿಭಿನ್ನ ವಾರ್ಷಿಕೋತ್ಸವದ ಮೈಲುಗಲ್ಲುಗಳನ್ನು ತಲುಪಿವೆ. ಬೆಂಗಳೂರಿನ ಜಯನಗರ ಮಳಿಗೆಯು 15ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರೆ, ಫಾಲ್ಕನ್ ಸಿಟಿ ಮಾಲ್ ಮಳಿಗೆಯು ನಾಲ್ಕನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಕಮ್ಮನಹಳ್ಳಿ ಮತ್ತು ಕೆ.ಆರ್ . ಪುರಂ ಮಳಿಗೆಗಳು ಮೂರನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದು, ಎಚ್ ಎಸ್ ಆರ್ ಲೇಔಟ್ ಮತ್ತು ಬೆಳಗಾವಿ ಮಳಿಗೆಗಳು ಎರಡನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿವೆ. ಈ ಮಳಿಗೆಗಳಲ್ಲಿವಾರ್ಷಿಕೋತ್ಸವದ ವಿಶೇಷ ಕೊಡುಗೆಗಳು ಅಕ್ಟೋಬರ್ 21ರವರೆಗೆ ಗ್ರಾಹಕರಿಗೆ ದೊರೆಯಲಿವೆ. ಆಯ್ದ ಆಭರಣಗಳು, ನೆಕ್ಲೇಸ್ ಗಳು ಮತ್ತು ಬಳೆಗಳಿಗೆ ಕೇವಲ ಶೇ.2.99ರಷ್ಟು ತಯಾರಿಕೆ ಶುಲ್ಕ ವಿಧಿಸಲಾಗುತ್ತದೆ. ಚಿನ್ನ ಮತ್ತು ಪ್ಲಾಟಿನಂ ಆಭರಣಗಳ ತಯಾರಿಕೆ ಶುಲ್ಕದಲ್ಲಿಶೇ.30ರವರೆಗೂ ರಿಯಾಯಿತಿ ನೀಡಲಾಗುತ್ತದೆ. ವಜ್ರದ ಆಭರಣಗಳಿಗೂ ಶೇ.30ರಷ್ಟು ರಿಯಾಯಿತಿ ಲಭ್ಯವಿದೆ. ಪ್ರತಿ ಖರೀದಿ ಮೇಲೂ ಖಚಿತ ಉಡುಗೊರೆಗಳಿವೆ. ಅಲ್ಲದೆ ಹಳೆಯ 22 ಕ್ಯಾರೆಟ್ ಚಿನ್ನದ ಆಭರಣಗಳನ್ನು ಹೊಸ ಎಚ್ ಯುಈಡಿ ಚಿನ್ನದ ಆಭರಣಗಳೊಂದಿಗೆ ವಿನಿಮಯ ಮಾಡಿಕೊಂಡಾಗ ಯಾವುದೇ ಮೌಲ್ಯ ನಷ್ಟವಿರುವುದಿಲ್ಲ,’’ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ವಾರ್ಷಿಕೋತ್ಸವದ ಆಚರಣೆಗಳ ಕುರಿತು ಮಾತನಾಡಿದ ಜೋಸ್ ಅಲುಕ್ಕಾಸ್ ನ ವ್ಯವಸ್ಥಾಪಕ ನಿರ್ದೇಶಕ ಪಾಲ್ ಅಲುಕ್ಕಾಸ್ ಅವರು, ‘‘15ನೇ ವರ್ಷದ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಜಯನಗರ ಮಳಿಗೆಯಿಂದ ಹಿಡಿದು ಎರಡನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿರುವ ಬೆಳಗಾವಿ, ಎಚ್ ಎಸ್ ಆರ್ ಲೇಔಟ್ ಮಳಿಗೆಗಳವರೆಗೆ, ಪ್ರತಿಯೊಂದು ಮಳಿಗೆಯ ವಾರ್ಷಿಕೋತ್ಸವವು ಹಲವಾರು ವರ್ಷಗಳಿಂದ ಗ್ರಾಹಕರು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಗ್ರಾಹಕರು ಸಾಂಪ್ರದಾಯಿಕ ಕರಕುಶಲತೆಗೆ ಮಹತ್ವ ನೀಡುವುದರ ಜೊತೆಗೆ, ಇಂದಿನ ಅಭಿರುಚಿಗೆ ಹೊಂದುವ ವಿನ್ಯಾಸಗಳನ್ನೂ ಹೆಚ್ಚಾಗಿ ಬಯಸುತ್ತಿದ್ದಾರೆ. ಬೆಂಗಳೂರು ಮತ್ತು ಬೆಳಗಾವಿಯಾದ್ಯಂತ ಈ ಮೈಲಿಗಲ್ಲುಗಳನ್ನು ಆಚರಿಸುತ್ತಿರುವ ಸಂದರ್ಭದಲ್ಲಿ, ವೈವಿಧ್ಯಮಯ ಆಭರಣಗಳ ಸಂಗ್ರಹ, ಗುಣಮಟ್ಟದ ಕರಕುಶಲತೆ ಮತ್ತು ವೈಯಕ್ತಿಕ ಕಾಳಜಿಯ ಸೇವೆಯನ್ನು ಒದಗಿಸುವ ನಮ್ಮ ಬದ್ಧತೆಯನ್ನು ಮುಂದುವರಿಸುತ್ತೇವೆ,’’ ಎಂದು ಹೇಳಿದರು.