ಸಸಿ ಬಿಡುವ ಮೂಲಕ ದಸರಾ ಉತ್ಸವಕ್ಕೆ ತೆರೆ

Contributed by: raja.bandihal@gmail.com|Vijaya Karnataka•
beginning of dasara festival with planting
ಸಸಿ ಬಿಡುವ ಮೂಲಕ ದಸರಾ ಉತ್ಸವಕ್ಕೆ ತೆರೆ

ವಿಕ ಸುದ್ದಿಲೋಕ ಹನುಮಸಾಗರ
ಪಟ್ಟಣದ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮುದಾಯದವರು ಸಾಮೂಹಿಕವಾಗಿ ಬುಧವಾರ ಸಸಿ ಬಿಡುವ ಮೂಲಕ ದಸರಾ ಉತ್ಸವಕ್ಕೆ ತೆರೆ ಎಳೆದರು.

ಮಹಿಳೆಯರು ಗಂಗಾ ಪೂಜೆ ನೆರವೇರಿಸಿ ಮನೆಯಲ್ಲಿಹಾಕಿದ್ದ ಸಸಿಗಳನ್ನು ಪುರುಷರು ಹಳ್ಳಕ್ಕೆ ತಂದು ಗಂಗೆಗೆ ಬಾಗಿನ ಹಾಗೂ ನೈವೇದ್ಯ ಅರ್ಪಿಸಿದರು. ಒಂಬತ್ತು ದಿನಗಳಿಂದ ನಡೆದ ನವರಾತ್ರಿಯ ಉತ್ಸವಕ್ಕೆ ಸಸಿ ಬಿಡುವ ಮೂಲಕ ತೆರೆ ಎಳೆಯಲಾಯಿತು. ಎಸ್ ಎಸ್ ಕೆ ಸಮುದಾಯದವರು ಒಬ್ಬರಿಗೊಬ್ಬರು ಬುತ್ತಿ ಹಂಚಿ ಸಂತಸ ವ್ಯಕ್ತಪಡಿಸಿದರು.

ದೇವಸ್ಥಾನದ ಅರ್ಚಕ ಶಂಕರ ಬಸೂದೆ, ವೀಣಾಕಾರ ತುಳಸಿನಾಥಸಾ ಪಾಟೀಲ್ , ಗಣಪತಿಸಾ ಬಿದರಿ, ನಾರಾಯಣಸಾ ರಾಯಬಾಗಿ, ಅಂಬಸಾ ತುಳಸಿಕಟ್ಟಿ, ಯಲ್ಲುಸಾ ಕಾಟವಾ,

ಕಿಶನ ಕಾಟ್ವಾ ಇದ್ದರು.

ಕೆಪಿಎಲ್ 21ಎಚ್ ಎಸ್ ಆರ್ ಫೋಟೊ3:ಹನುಮಸಾಗರದ ಎಸ್ ಎಸ್ ಕೆ ಸಮಾಜದಿಂದ ಬುಧವಾರ ಸಾಮೂಹಿಕ ಸಸಿ ಬಿಡುವ ಮೂಲಕ ದಸರಾ ಉತ್ಸವಕ್ಕೆ ತೆರೆ ಎಳೆಯಲಾಯಿತು.

ಓದಲೇ ಬೇಕಾದ ಸುದ್ದಿ