ಅಥ್ಲೆಟಿಕ್ಸ್ ನಲ್ಲಿಸಾಧನೆ

Contributed by: raja.bandihal@gmail.com|Vijaya Karnataka•
tippan palakar of athletics has elevated the fame of the district
ಅಥ್ಲೆಟಿಕ್ಸ್ ನಲ್ಲಿಸಾಧನೆ

ಹನುಮಸಾಗರ: ತಮಿಳುನಾಡಿನಲ್ಲಿನಡೆದ 5ನೇ ನ್ಯಾಷನಲ್ ಮಾಸ್ಟರ್ ಸ್ಪೋರ್ಟ್ಸ್ ಆ್ಯಂಡ್ ಗೇಮ್ಸ್ ಚಾಂಪಿಯನ್ ಷಿಪ್ ನಲ್ಲಿದೈಹಿಕ ಶಿಕ್ಷಣ ಶಿಕ್ಷಕ ಹಲವಾರು ಪ್ರಶಸ್ತಿ ಪಡೆಯುವ ಮೂಲಕ ಓಪನ್ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಬಾಲಕರ ಪ್ರೌಢ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತಿಪ್ಪಣ್ಣ ಪಾಲಕಾರ ಅವರು ಅಥ್ಲೆಟಿಕ್ಸ್ ನಲ್ಲಿಪ್ರಶಸ್ತಿ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ರಾಜ್ಯದ ಅಥ್ಲೆಟಿಕ್ಸ್ ವಿಭಾಗದಲ್ಲಿಪ್ರತಿನಿಧಿಸಿದ್ದು, 1500ಮೀ., 800ಮೀ., ಓಟದಲ್ಲಿ(ಪ್ರಥಮ ಸ್ಥಾನ). 400ಮೀ., 4.100ಮೀ., 4.400ಮೀ. ಓಟದಲ್ಲಿ(ದ್ವಿತೀಯ ಸ್ಥಾನ) ಪಡೆದಿದ್ದಾರೆ. ಮುಂದಿನ ಓಪನ್ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರ ಈ ಸಾಧನೆಗೆ ಜಿಲ್ಲೆ, ತಾಲೂಕು ಶಿಕ್ಷಕ ವೃಂದ ಹಾಗೂ ಮನ್ನೇರಾಳ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.

---

ಕೆಪಿಎಲ್ 14ಎಚ್ ಎಸ್ ಆರ್ ಫೋಟೊ4: ಹನುಮಸಾಗರದ ತಿಪ್ಪಣ್ಣ ಪಾಲಕಾರ ಪ್ರಶಸ್ತಿ ಪಡೆದಿರುವುದು.

ಓದಲೇ ಬೇಕಾದ ಸುದ್ದಿ