ಪಟ್ಟಣದ ಶ್ರೀ ಗೌರಿಶಂಕರ ಮಠದಲ್ಲಿ12 ದಿನಗಳಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವಶಾಂತಿಗಾಗಿ ಮಹಾಚಂಡಿಕಾ ಯಾಗದ ಸಮಾರೋಪ ಸಮಾರಂಭ ವಿಜೃಂಭಣೆಯಿಂದ ನೆರವೇರಿತು.ಯಾಗದ ಪೂರ್ಣಾಹುತಿ ಬಳಿಕ ಪೀಠಾಧ್ಯಕ್ಷ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮೀಜಿ ಆಶೀರ್ವಚನ ನೀಡಿ, ‘‘ಇಂದು ಜಗತ್ತಿನಲ್ಲಿಅಶಾಂತಿ, ಅಸಹನೆ ಹೆಚ್ಚಾಗುತ್ತಿದ್ದು, ಮನುಷ್ಯನಲ್ಲಿಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಇಂತಹ ಸಂದರ್ಭದಲ್ಲಿವಿಶ್ವಶಾಂತಿಗಾಗಿ ನಾವು ದೇವಿಯನ್ನು ಆರಾಧಿಸಬೇಕಾಗಿದೆ. ಆದಿಶಕ್ತಿಯಾದ ಚಂಡಿಕಾ ದೇವಿಯ ಅನುಗ್ರಹದಿಂದ ಮಾತ್ರ ವಿಶ್ವದಲ್ಲಿಶಾಂತಿ, ಸಮೃದ್ಧಿ ನೆಲೆಸಲು ಸಾಧ್ಯ,’’ ಎಂದರು.
ಯಾಗಕ್ಕೆ ತನು-ಮನ-ಧನದಿಂದ ಸೇವೆ ಸಲ್ಲಿಸಿದ ಸಮಸ್ತ ಸದ್ಭಕ್ತರಿಗೆ, ಮಹಾಪೂಜೆ, ಪ್ರಸಾದ ಸೇವೆ, ಉಡಿ ತುಂಬುವ ಸೇವೆ ಮಾಡಿದ ದಾನಿಗಳಿಗೆ, ವೇದಮೂರ್ತಿಗಳಿಗೆ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರಿಗೆ ಸ್ವಾಮೀಜಿಗಳು ಆಶೀರ್ವದಿಸಿ ಕೃತಜ್ಞತೆ ಸಲ್ಲಿಸಿದರು. ವೇದಮೂರ್ತಿ ಸಿದ್ದೇಶ್ವರಶಾಸ್ತ್ರೀ ಹಾಗೂ ಸುರೇಶ ಶಾಸ್ತ್ರೀ ಮಹಾಚಂಡಿಕಾ ಯಾಗ ನೆರವೇರಿಸಿಕೊಟ್ಟರು. ಸಮಾರೋಪದಲ್ಲಿಡಾ. ಆರ್ .ಕೆ. ಬಾಗಿ, ಮಹಾದೇವ ಜಿವನಿ, ಸಿದ್ರಾಮ ಕುಕನೂರ, ಮಡ್ಡೆಪ್ಪ ನಿರ್ವಾನಿ, ಚಿದಾನಂದ ಕಾಮಗೌಡ ಸೇರಿದಂತೆ ಅಪಾರ ಸಂಖ್ಯೆಯಲ್ಲಿಭಕ್ತರು ಇದ್ದರು.