ವಿಕ ಸುದ್ದಿಲೋಕ ಹರಪನಹಳ್ಳಿತಾಲೂಕಿನ ಅರಸೀಕೆರೆ ಯಲ್ಲಿವಿಜಯದಶಮಿ ನಿಮಿತ್ತ ಮಹಾನವಮಿ ಬಂಡಿ ಮೆರವಣಿಗೆ ಸಂಭ್ರಮದಿಂದ ಜರುಗಿತು. ಸ್ಥಳೀಯರಾದ ಕಂಡೆಪ್ಲಅಂಜಿನಪ್ಪ ಅವರ ಮನೆಯ ಎತ್ತುಗಳು ಮೆರವಣಿಗೆಯಲ್ಲಿಭಾಗಿಯಾಗಿದ್ದವು. ಗ್ರಾಮದಿಂದ ಆರಂಭವಾಗುವ ಜೋಡೆತ್ತುಗಳ ಮೆರವಣಿಗೆ ಸಮೀಪದ ಅಡವಿ ಮಲ್ಲಾಪುರ ಗ್ರಾಮದ ಮೈಲಾರ ಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿತು. ಇದಕ್ಕೂ ಮೊದಲು ಮೈಲಾರ ಲಿಂಗೇಶ್ವರ ಮೂರ್ತಿಯನ್ನು ಅರಸೀಕೆರೆ ದೇವಸ್ಥಾನದಿಂದ ಅಡವಿ ಮಲ್ಲಾಪುರದ ದೇವಸ್ಥಾನದವರೆಗೂ ಪಲ್ಲಕ್ಕಿಯಲ್ಲಿಪ್ರತಿಷ್ಠಾಪಿಸಿ ಸುಮಾರು 3 ಕಿ.ಮೀ. ದೂರದವರೆಗೆ ಕಾಲ್ನಡಿಗೆಯಲ್ಲಿಸಾಗಿ ಅಲ್ಲಿದೇವಸ್ಥಾನಕ್ಕೆ ತಂದು ಪೂಜೆ ಸಲ್ಲಿಸಲಾಯಿತು.