ಕಾನೂನು ಸುವ್ಯವಸ್ಥೆಗೆ ಪೊಲೀಸರೊಂದಿಗೆ ಕೈಜೋಡಿಸಿ

Contributed by: Vinayaka Naik P|Vijaya Karnataka•
public responsibility for law and order on police martyrs day
ಕಿಕ್ಕರ್ : ಪೊಲೀಸ್ ಹುತಾತ್ಮರ ದಿನಾಚರಣೆ

----
ಪೊಲೀಸ್ ಇಲಾಖೆಯಿಂದ ಜನಸ್ನೇಹಿ ಆಡಳಿತ

ವಿಕ ಸುದ್ದಿಲೋಕ ದಾವಣಗೆರೆ

ಪೊಲೀಸ್ ಇಲಾಖೆ ಕೇವಲ ಕಾನೂನು ರಕ್ಷಣೆ ಮಾತ್ರವಲ್ಲದೆ, ಜನಸ್ನೇಹಿ ಆಡಳಿತಕ್ಕೆ ಮುನ್ನುಡಿ ಬರೆದಿದೆ. ಪೊಲೀಸರೊಂದಿಗೆ ಸಾರ್ವಜನಿಕರು ಸಹ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಜೋಡಿಸಬೇಕು ಎಂದು ದೂಡಾ ಆಯುಕ್ತೆ ರೇಣುಕಾ ಸಲಹೆ ನೀಡಿದರು.

ನಗರದ ಜಿಲ್ಲಾಪೊಲೀಸ್ ಕವಾಯತು ಮೈದಾನದಲ್ಲಿಬುಧವಾರ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿಪೊಲೀಸ್ ಹುತಾತ್ಮರ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸಿ ಮಾತನಾಡಿದರು.

‘‘ದೇಶದ ಆಂತರಿಕ ಭದ್ರತೆ, ಕಾನೂನು ಹಾಗೂ ಸುವ್ಯವಸ್ಥೆ ಕಾಪಾಡುವಲ್ಲಿಪೊಲೀಸ್ ಇಲಾಖೆಯ ಪಾತ್ರ ಹಿರಿದಾಗಿದೆ. ಚಳಿ, ಮಳೆ, ಗಾಳಿ ಎನ್ನದೇ ಹಗಲು-ರಾತ್ರಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿ ಅತ್ಯಂತ ಸಮರ್ಪಣಾಭಾವದಿಂದ ಸೇವೆ ಸಲ್ಲಿಸುತ್ತಿದ್ದಾರೆ’’ ಎಂದರು.

‘‘ಪೊಲೀಸ್ ಇಲಾಖೆಯು ಜಿಲ್ಲೆಯ ಜನತೆ ಹಾಗೂ ಸಾರ್ವಜನಿಕರೊಂದಿಗೆ ಅತ್ಯುತ್ತಮ ಒಡನಾಟ ಹೊಂದಿದೆ. ಎಲ್ಲಾಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಅತ್ಯಂತ ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ನಗರದಲ್ಲಿಅಚ್ಚುಕಟ್ಟಾಗಿ ಸಂಚಾರ ನಿರ್ವಹಣೆಗೆ ಶ್ರಮಿಸುತ್ತಿದೆ’’ ಎಂದರು.

ಪೂರ್ವ ವಲಯ ಐಜಿಪಿ ಎನ್ . ಸತೀಶ್ ಕುಮಾರ್ ಮಾತನಾಡಿ, ‘‘ಸುರಕ್ಷಿತ ಸಮಾಜದ ನಿರ್ಮಾಣದಲ್ಲಿಪೊಲೀಸರ ಪಾತ್ರ ಪ್ರಮುಖವಾಗಿದೆ. ಕರ್ತವ್ಯದ ವೇಳೆ ಜೀವತ್ಯಾಗ ಮಾಡಿದ ಹಾಗೂ ಸೇವೆ ಸಲ್ಲಿಸುತ್ತಿರುವ ಪೊಲೀಸ್ ಸಿಬ್ಬಂದಿಯ ತ್ಯಾಗ- ಬಲಿದಾನ ಸ್ಮರಣೀಯ’’ ಎಂದು ನುಡಿದರು.

ಎಸ್ಪಿ ಎಚ್ .ಟಿ. ಶೇಖರ್ ಮಾತನಾಡಿ, ‘‘1953 ಅಕ್ಟೋಬರ್ 21ರಂದು ಸಿಆರ್ ಪಿಎಫ್ ನ ಡಿ.ಎಸ್ .ಪಿ ಕರಣ್ ಸಿಂಗ್ ನೇವೃತ್ವದಲ್ಲಿಲಡಾಖ್ ಪ್ರದೇಶದಲ್ಲಿಚೀನಾ ಸೈನಿಕರು ನಮ್ಮ ಸಿಆರ್ ಪಿಎಫ್ ತುಕುಡಿ ಮೇಲೆ ದಾಳಿ ಮಾಡಿರುತ್ತಾರೆ. ಈ ಹೋರಾಟದಲ್ಲಿಸಿಆರ್ ಪಿಎಫ್ ನ 10 ಜವಾನರು ವೀರಮರಣ ಹೊಂದಿದ್ದಲ್ಲದೇ 9 ಜವಾನರನ್ನು ಚೀನಾ ಸೈನಿಕರು ದಸ್ತಗಿರಿ ಮಾಡಿರುತ್ತಾರೆ. ಸಿಆರ್ ಪಿಫ್ ನ ಈ ಜವಾನರ ಧೈರ್ಯ, ಸಾಹಸ ಹಾಗೂ ಆತ್ಮಸಮರ್ಪಣೆಯನ್ನು ದೇಶದ ಎಲ್ಲಾಪ್ರಜೆಗಳು ಸ್ಮರಿಸುತ್ತಾರೆ. ಈ ಶೂರರ ಸ್ಮರಣೆಗಾಗಿ ಲಡಾಖ್ ನ ಅಬಾಸಿಚಿನ್ ಭಾಗದಲ್ಲಿಹದಿನೆಂಟು ಸಾವಿರ ಅಡಿ ಎತ್ತರದ ಸ್ಮಾರಕ ನಿರ್ಮಿಸಲಾಗಿದೆ. ಕರ್ತವ್ಯ ಪಾಲನೆಯಲ್ಲಿಪ್ರತಿವರ್ಷ ದೇಶದಲ್ಲಿಅನೇಕ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಅಂತಹವರ ಸ್ಮರಣೆಗಾಗಿ ಪ್ರತಿವರ್ಷ ಅ.21ರಂದು ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತಿದೆ’’ ಎಂದು ಮಾಹಿತಿ ನೀಡಿದರು.

ಎಎಸ್ಪಿ ಪರಮೇಶ್ವರ ಹೆಗಡೆ, ಡಿವೈಎಸ್ಪಿಗಳಾದ ತಿಪ್ಪೇಸ್ವಾಮಿ, ಬಿ.ಎಸ್ . ಬಸವರಾಜ, ಕೃಷ್ಣಮೂರ್ತಿ, ಶರಣಬಸವೇಶ್ವರ ಇತರರಿದ್ದರು.

----

ಕೋಟ್ ...

2025ರ ಸೆಪ್ಟೆಂಬರ್ 1ರಿಂದ 2026 ಆಗಸ್ಟ್ 31ರ ವರೆಗೆ ಭಾರತದಲ್ಲಿಕರ್ತವ್ಯ ಪಾಲನೆಯಲ್ಲಿಒಟ್ಟು 154 ಅಧಿಕಾರಿ ಮತ್ತು ಸಿಬ್ಬಂದಿಗಳು ವೀರಮರಣ ಹೊಂದಿದ್ದಾರೆ. ರಾಜ್ಯದ ಪೊಲೀಸ್ ನಿರೀಕ್ಷಕ ಪಚ್ಚಯ್ಯ ವೀರಯ್ಯ ಸಾಲಿಮಠ, ಉಪ ನಿರೀಕ್ಷಕ ಎಂ.ಎಲ್ . ಬಸವರಾಜ, ಮುಖ್ಯ ಪೇದೆಗಳಾದ ಬೀರಲಿಂಗ, ಎ.ಎಂ. ಸಾಲಿಮಠ ಇಸ್ಮಾಯಿಲ್ ಸೇರಿ ಐವರು ಹುತಾತ್ಮರಾಗಿದ್ದಾರೆ.

- ಎಚ್ .ಟಿ. ಶೇಖರ್ ಎಸ್ಪಿ.

-----

* ಫೋಟೋ ಬರಲಿದೆ.

ಓದಲೇ ಬೇಕಾದ ಸುದ್ದಿ