ಅಳ್ನಾವರ: ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿಅತ್ಯುತ್ತಮ ಸಾಧನೆಗೈದ ಕಡಬಗಟ್ಟಿ ಗ್ರಾಮದ ಕುಸ್ತಿ ಪಟುಗಳಾದ ಗಾಯತ್ರಿ ಬೆಕ್ವಡಾಕರ್ , ಅಮೃತಾ ಜಾಧವ, ಕೊಗಿಲಗೇರಿ ಗ್ರಾಮದ ಪ್ರಲ್ಹಾದ ಸುಳಗೇಕರ್ ಅವರನ್ನು ಸನ್ಮಾನಿಸಲಾಯಿತು.ಎಂಎಸ್ ಐಎಲ್ ಮಾಜಿ ನಿರ್ದೇಶಕ ಶಿವಾಜಿ ಡೊಳ್ಳಿನ್ ಸಾಧಕರನ್ನು ಅಭಿನಂದಿಸಿ ಮಾತನಾಡಿ, ಕುಸ್ತಿ ನಮ್ಮ ನಾಡಿನ ಪಾರಂಪರಿಕ ಕ್ರೀಡೆಯಾಗಿದ್ದು, ದೈಹಿಕ ಸಾಮರ್ಥ್ಯ, ಶಿಸ್ತು, ಧೈರ್ಯ ಹಾಗೂ ಆತ್ಮವಿಶ್ವಾಸವನ್ನು ಬೆಳೆಸುವಲ್ಲಿಪ್ರಮುಖ ಪಾತ್ರ ವಹಿಸುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿಅನೇಕ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆತರೆ ಅಂತಾರಾಷ್ಟ್ರೀಯಮಟ್ಟದಲ್ಲಿ ಸಾಧನೆ ಮಾಡಬಲ್ಲರು. ರಾಜ್ಯಮಟ್ಟದಲ್ಲಿಸ್ಥಾನ ಗಳಿಸಿರುವ ಈ ಕ್ರೀಡಾಪಟುಗಳ ಸಾಧನೆ ಇತರ ಯುವಜನರಿಗೆ ಸ್ಫೂರ್ತಿಯಾಗಲಿ. ಕ್ರೀಡಾಪಟುಗಳು ನಿರಂತರ ಅಭ್ಯಾಸ, ಪರಿಶ್ರಮ ಮತ್ತು ಶ್ರದ್ಧೆಯ ಮೂಲಕ ಇನ್ನಷ್ಟು ಉನ್ನತ ಸಾಧನೆ ಮಾಡಬೇಕು. ಅವರ ಸಾಧನೆಗೆ ಕುಟುಂಬದವರು, ತರಬೇತುದಾರರು ಹಾಗೂ ಸಮಾಜದ ಪ್ರೋತ್ಸಾಹವೂ ಅಗತ್ಯವಾಗಿದೆ ಎಂದರು.
ಕಡಬಗಟ್ಟಿ ಗ್ರಾಮದ ಗಾಯತ್ರಿ ಬೆಕ್ವಡಾಕರ್ ರಾಜ್ಯಮಟ್ಟದ ಕುಸ್ತಿ ಸ್ಪರ್ಧೆಯಲ್ಲಿಪ್ರಥಮ, ಅಮೃತಾ ಜಾಧವ ದ್ವಿತೀಯ, ಕೊಗಿಲಗೇರಿ ಗ್ರಾಮದ ಪ್ರಲ್ಹಾದ ಸುಳಗೇಕರ್ ತೃತೀಯ ಸ್ಥಾನ ಪಡೆದ್ದಿದ್ದಾರೆ.