ಬೋವಿಕ್ಕಾನ: ಎಸ್ ಐಆರ್ ನ ಹೆಸರಿನಲ್ಲಿಮತದಾರರ ಪಟ್ಟಿಯ ಹಲವಾರು ಹೆಸರುಗಳನ್ನು ತೆಗೆದು ಹಾಕಿ ಬಿಜೆಪಿಗೆ ಬೇಕಾಗಿ ದೇಶದ ಜನಾಧಿಪತ್ಯವನ್ನು ಅಡಿಮೇಲು ಮಾಡಿದ ಮುಖ್ಯ ಚುನಾವಣಾ ಅಧಿಕಾರಿ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ದೆಹಲಿಯಲ್ಲಿನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಸ್ವತಂತ್ರ ಕೃಷಿಕ ಸಂಘ ಮುಳಿಯಾರು ಪಂಚಾಯಿತಿ ಸಮಿತಿ ಬೋವಿಕ್ಕಾನ ಪೇಟೆಯಲ್ಲಿಐಕ್ಯ ಸಂಗಮ ನಡೆಸಿತು.
ಮುಸ್ಲಿಂ ಲೀಗ್ ಪಂಚಾಯಿತಿ ಅಧ್ಯಕ್ಷ ಬಿ.ಎಂ. ಅಬೂಬಕರ್ ಹಾಜಿ ಕಾರ್ಯಕ್ರಮ ಉದ್ಘಾಟಿಸಿದರು. ಕೆ. ಮೊಹಮ್ಮದ್ ಕುಂಞಿ ಅಧ್ಯಕ್ಷತೆ ವಹಿಸಿದ್ದರು. ಎ. ಪಿ. ಹಸ್ಸೈನಾರ್ ಪೊವ್ವಲ್ , ಬಿ.ಕೆ. ಹಂಸ ಆಲೂರು, ಬಿ.ಎಂ. ಅಶ್ರಫ್ , ಅಬ್ಬಾಸ್ ಕೊಳಚೆಪ್ಪು, ಪಿ. ಅಬ್ದುಲ್ಲಕುಂಞಿ ಹಾಜಿ, ಬಿ.ಎಂ. ಹ್ಯಾರಿಸ್ , ಮಾರಿಯಮ್ಮ ಅಬ್ದುಲ್ ಖಾದರ್ , ಹಮೀದ್ , ಅಬ್ದುಲ್ ಖಾದರ್ , ಸುಬೈದ ಬೆಳ್ಳಿಪ್ಪಾಡಿ, ಕೆ.ಸಿ. ರಿಶಾನ, ಮಿಸ್ರಿಯ ರಸಾಕ್ , ಆಯಿಷಾ, ರಶಿಯ, ತಾಹಿರ, ಮೊಯ್ದಿನ್ ಉಪಸ್ಥಿತರಿದ್ದರು. ಎ.ಕೆ. ಯುಸೂಫ್ ಸ್ವಾಗತಿಸಿದರು.ಚಿತ್ರ.. 21ಎಂಯುಲೀಗ್