ಎಸ್ ಎಫ್ ಐ ನೂತನ ಪದಾಧಿಕಾರಿಗಳು

Contributed by: pramod.harikant@timesofindia.com|Vijaya Karnataka•
welcome to the new officers of sfi
ವಿಕ ಸುದ್ದಿಲೋಕ ಕಾರವಾರ

ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ ಎಫ್ ಐ) ಉತ್ತರ ಕನ್ನಡ ಜಿಲ್ಲಾಘಟಕದ 16ನೇ ಜಿಲ್ಲಾಸಮ್ಮೇಳನದಲ್ಲಿವೀರೇಶ ರಾಠೋಡ ಅವರನ್ನು ಜಿಲ್ಲಾಘಟಕದ ಅಧ್ಯಕ್ಷರಾಗಿ ಹಾಗೂ ರಾಮಚಂದ್ರ ಅವರನ್ನು ಜಿಲ್ಲಾಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.
ನಗರದ ಎಸ್ ಎಫ್ ಐ ಕಚೇರಿಯಲ್ಲಿನಡೆದ ಸಮ್ಮೇಳನದಲ್ಲಿಹಿಂದಿನ ಸಮ್ಮೇಳನದಿಂದ ಈವರೆಗೆ ನಡೆಸಿದ ಕಾರ್ಯಚಟುವಟಿಕೆಗಳ ವಿಮರ್ಶೆ ಹಾಗೂ ಮುಂದಿನ ಅವಧಿಯ ಕಾರ್ಯ ಚಟುವಟಿಕೆಗಳಿಗಾಗಿ 19 ಸದಸ್ಯರ ನೂತನ ಜಿಲ್ಲಾಸಮಿತಿ ಆಯ್ಕೆ ಮಾಡಲಾಗಿದೆ. ಮೇಘನ ಗೌಡ, ಮೆಹತಾಬ್ , ರಂಜಿತ್ ಸಿದ್ದಿ ಹಾಗೂ ಶೇಕಪ್ಪ (ಉಪಾಧ್ಯಕ್ಷರು) ಶಶಿಧರ, ರಾಹುಲ್ , ಯೋಗೇಶ ಹಾಗೂ ಅರ್ಜುನ (ಸಹಕಾರ್ಯದರ್ಶಿಗಳು) ಸಿಂಚನ, ಮನೋಜ, ಬೀರಣ್ಣ, ಶೋಭಿತಾ, ಆರ್ತಿ, ಯೋಗಿತಾ, ಮನು ಹಾಗೂ ನಾಗೇಂದ್ರ ಸ್ವಾಮಿ (ಸದಸ್ಯರು) ಎಂದು ಎಸ್ ಎಫ್ ಐ ರಾಜ್ಯ ಘಟಕದ ಉಪಾಧ್ಯಕ್ಷ ಗಣೇಶ ರಾಠೋಡ ಪ್ರಕಟಣೆಯಲ್ಲಿತಿಳಿಸಿದ್ದಾರೆ.

22ಪ್ರಮೋದ3

ಎಸ್ ಎಫ್ ಐ ನೂತನ ಪದಾಧಿಕಾರಿಗಳು .

ಓದಲೇ ಬೇಕಾದ ಸುದ್ದಿ