ಕೆಎಸ್ ಆರ್ ನಿಲ್ದಾಣದಲ್ಲಿಜನ ಸಂವಾದ

Contributed by: mayur.hegde@timesofindia.com|Vijaya Karnataka•
achievement public dialogue program at ksr railway station
ವಿಕ ಸುದ್ದಿಲೋಕ ಬೆಂಗಳೂರು

ಕಾಯ್ದಿರಿಸದ ರೈಲ್ವೆ ಟಿಕೆಟ್ ಗಳನ್ನು ಪಡೆಯಲು ಬೆಂಗಳೂರಿನ ಕೆಎಸ್ ಆರ್ ಸೇರಿ ಇತರೆ ನಿಲ್ದಾಣಗಳಲ್ಲಿಯುಟಿಎಸ್ ಸಹಾಯಕರನ್ನು ನಿಯೋಜಿಸಲಾಗಿದ್ದು, ಅವರ ನೆರವು ಪಡೆಯುವಂತೆ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶುತೋಷ್ ಕುಮಾರ್ ಸಿಂಗ್ ಕೋರಿದರು.
ವಿಶೇಷ ಅಭಿಯಾನ 6.0 ರ ಭಾಗವಾಗಿ ಪ್ರಯಾಣಿಕರು ರೈಲ್ವೆ ಅಧಿಕಾರಿಗಳೊಂದಿಗೆ ಸೌಲಭ್ಯಗಳ ಕುರಿತು ಅಭಿಪ್ರಾಯ ಹಂಚಿಕೊಳ್ಳಲು ಕೆಎಸ್ ಆರ್ ನಿಲ್ದಾಣದಲ್ಲಿಗುರುವಾರ ಏರ್ಪಡಿಸಿದ್ದ ‘ರೈಲು ಜನ ಸಂವಾದ’ ಕಾರ್ಯಕ್ರಮದಲ್ಲಿಯುವ ಪ್ರಯಾಣಿಕರ ಪ್ರಶ್ನೆಗೆ ಅವರು ಉತ್ತರಿಸಿದರು.

ಟಿಕೆಟಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಪ್ರಯಾಣಿಕರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ‘‘ಪ್ರಯಾಣಿಕರ ಅನುಕೂಲಕ್ಕಾಗಿ ಟಿಕೆಟ್ ವಿತರಣೆ ಸರಳಗೊಳಿಸಲಾಗಿದೆ. ಜತೆಗೆ, ಪ್ರಯಾಣಿಕರ ಕುಂದುಕೊರತೆಗಳನ್ನು ಪರಿಹರಿಸುವಲ್ಲಿರೈಲ್ ಒನ್ , ರೈಲ್ ಮದದ್ ಮತ್ತು ಯುಟಿಎಸ್ ನಂತಹ ಡಿಜಿಟಲ್ ಉಪಕ್ರಮ ಜಾರಿಗೊಂಡಿದೆ. ಕಾಯ್ದಿರಿಸದ ರೈಲ್ವೆ ಟಿಕೆಟ್ ಪಡೆಯುವ ಸಲುವಾಗಿ ಯು.ಟಿ.ಎಸ್ ಸಹಾಯಕ್ ನೆರವು ಪಡೆಯಬಹುದು,’’ ಎಂದರು.

‘‘ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಮುಖ್ಯವಾಗಿ ಯಶವಂತಪುರ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣ ಸೇರಿದಂತೆ ಬೆಂಗಳೂರು ವಿಭಾಗದ 19 ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೆಎಸ್ ಆರ್ ನಲ್ಲಿಯಾರ್ಡ್ ಪುನಾರಚನೆ ಮತ್ತು ಬೆಂಗಳೂರು ಕಂಟೋನ್ಮೆಂಟ್ -ವೈಟ್ ಫೀಲ್ಡ… ವಿಭಾಗದ ಚತುಷ್ಪಥೀಕರಣ ಯೋಜನೆಗಳು ಪ್ರಗತಿಯಲ್ಲಿವೆ,’’ ಎಂದು ಮಾಹಿತಿ ನೀಡಿದರು.

ನೈಋುತ್ಯ ರೈಲ್ವೆಯ ಪ್ರಧಾನ ಮುಖ್ಯ ವೈದ್ಯಕೀಯ ನಿರ್ದೇಶಕಿ ಡಾ.ಎಸ್ . ಶೋಭಾ ಜಾಸ್ಮಿನ್ ಅವರು ಕೃಷ್ಣರಾಜಪುರ ರೈಲು ನಿಲ್ದಾಣದಲ್ಲಿಪ್ರಯಾಣಿಕರೊಂದಿಗೆ ಸಂವಾದ ನಡೆಸಿದರು.

ಕೆಎಸ್ ಆರ್ ಬೆಂಗಳೂರು, ಯಶವಂತಪುರ, ಎಸ್ ಎಂವಿಟಿ ಬೆಂಗಳೂರು, ಕೆಂಗೇರಿ, ಕೃಷ್ಣರಾಜಪುರ, ಕಂಟೋನ್ಮೆಂಟ್ , ಬಂಗಾರಪೇಟೆ, ಯಲಹಂಕ, ಮಂಡ್ಯ, ತುಮಕೂರು ಮತ್ತು ವೈಟ್ ಫೀಲ್ಡ… ನಿಲ್ದಾಣಗಳಲ್ಲಿರೈಲು ಜನಸಂವಾದ ನಡೆಯಿತು.