ಮುಂಡರಗಿ: ಪಟ್ಟಣದ ಶಾಸಕರ ಮಾದರಿ ಕೇಂದ್ರ ಶಾಲೆಯಲ್ಲಿಹಿರಿಯ ನಾಗರಿಕರ ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದ ಮಾಸಿಕ ಸಭೆ ಅ.25 ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ.ತಾಲೂಕು ಘಟಕದ ಅಧ್ಯಕ್ಷ ಆರ್ .ಬಿ.ಹಕ್ಕಂಡಿ ಸಭಾಧ್ಯಕ್ಷತೆ ವಹಿಸುವರು. ಸಂಘದ ಉಪಸಮಿತಿ ಅಧ್ಯಕ್ಷ ಈಶ್ವರಪ್ಪ ವೀ.ಹಂಚಿನಾಳ, ಜಿಲ್ಲಾಘಟಕದ ಅಧ್ಯಕ್ಷ ಎಸ್ .ಕೆ.ಖಂಡಪ್ಪಗೌಡ್ರ, ಮುಖ್ಯ ಕಾರ್ಯದರ್ಶಿ ಎಂ.ಎಚ್ .ಹುಲ್ಲೂರ, ಸಹಾಯಕ ಕಾರ್ಯದರ್ಶಿ ರಾಜಶೇಖರ ಕರಡಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಅಕ್ಟೋಬರ್ ತಿಂಗಳಲ್ಲಿಜನಿಸಿದವರ ಜನ್ಮದಿನ ಆಚರಿಸಲಾಗುವುದು. ಹೊಸದಾಗಿ ಸಂಘಕ್ಕೆ ಸೇರಬಯಸುವ ಅಭ್ಯರ್ಥಿಗಳು ಆಗಮಿಸಿ ಫಾಮ್ ರ್ ತುಂಬಿ, ರಸೀದಿ ಪಡೆದುಕೊಳ್ಳಲು ಮತ್ತು ವಾರ್ಷಿಕ ವಂತಿಗೆ ನೀಡುವವರು, ಕಟ್ಟಡ ನಿಧಿ ನೀಡುವವರು ಸಂಪರ್ಕಿಸಲು ಪ್ರಧಾನ ಕಾರ್ಯದರ್ಶಿ ಎಸ್ .ಎಸ್ .ಇನಾಮತಿ ತಿಳಿಸಿದ್ದಾರೆ.