ವಿಕ ಸುದ್ದಿಲೋಕ ಕುರುಗೋಡುತಾಲೂಕಿನ ಯರಿಂಗಳಿಗಿ ಗ್ರಾಮದ ಮೈಲಾರ ಲಿಂಗೇಶ್ವರ ದೇವಸ್ಥಾನದಲ್ಲಿನಡೆದ ಕಾರ್ಣಿಕೋತ್ಸವದಲ್ಲಿನವೀನ್ ಬಡಿಗೇರ್ ‘ಹುಟ್ಟಿದ ಕಂದ ಸುಖಪಟ್ಟಿತಲೇ ಪರಾಕ್ ’ ಎಂದು ಭವಿಷ್ಯವಾಣಿ ನುಡಿದರು. ಯರಿಂಗಳಿಗಿ ಗ್ರಾಮವೂ ಸೇರಿ ಜಿಲ್ಲೆಯ ನಾನಾ ಗ್ರಾಮಗಳಿಂದ ಬಂದಿದ್ದ ಸಾವಿರಾರು ಜನರು ಕಾರ್ಣಿಕೋತ್ಸವಕ್ಕೆ ಸಾಕ್ಷಿಯಾದರು. ದೇವಸ್ಥಾನದಲ್ಲಿಸರಪಳಿ ಸೇವೆ ಜರುಗಿತು. ನವೀನ್ ಬಡಿಗೇರ್ , ವಿಠ್ಠೋಬಪ್ಪ, ಕಾರ್ತಿಕ್ ಮತ್ತು ರಾಜು ಸ್ವಾಮಿ ಕಬ್ಬಿಣದ ಸರಪಳಿ ಎಳೆದು ತುಂಡುಮಾಡುವ ಮೂಲಕ ನೆರೆದ ಜನರನ್ನು ಮೂಕವಿಸ್ಮಿತರನ್ನಾಗಿ ಮಾಡಿದರು. ಬಳ್ಳಾರಿಯ ಎಸ್ಪಿ ಕಚೇರಿಯಲ್ಲಿಸೇವೆ ಸಲ್ಲಿಸುತ್ತಿದ್ದ ಕಾಳಪ್ಪ ಆಚಾರಿ ಎನ್ನುವವರು ಪ್ರಾರಂಭದಿಂದ ಸರಪಳಿ ಪವಾಡ ಮತ್ತು ಕಾರ್ಣಿಕ ನುಡಿಯುತ್ತಿದ್ದರು. ಅವರು ಲಿಂಗೈಕ್ಯರಾದ ನಂತರ ಅವರ ಮಗ ನವೀನ್ ಬಡಿಗೇರ್ ಆರು ವರ್ಷಗಳಿಂದ ಕಾರಣಿಕ ನುಡಿಯುತ್ತಿದ್ದಾರೆ. ಕಾರ್ಣಿಕೋತ್ಸವ ನಿಮಿತ್ತ ದೇವಸ್ಥಾನದಲ್ಲಿವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು.
21 ಕುರುಗೋಡು ದರೂರ್ 1
ಕುರುಗೋಡು ತಾಲೂಕಿನ ಯರಿಂಗಳಿಗಿ ಗ್ರಾಮದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿಕಾರ್ಣಿಕೋತ್ಸವ ನಡೆಯಿತು.