* ಬಿ.ಜಿ ನಗರದ ಆದಿಚುಂಚನಗಿರಿ ಆಸ್ಪತ್ರೆ ಸಾರ್ವಜನಿಕ ಸಂಪರ್ಕಾಧಿಕಾರಿ ಧರ್ಮೇಂದ್ರ ಮಾಹಿತಿವಿಕ ಸುದ್ದಿಲೋಕ ಹಾಸನ
ಹುಟ್ಟಿನಿಂದಲೇ ದೈಹಿಕ ನ್ಯೂನತೆಗಳು ಹಾಗೂ ಸುಟ್ಟ ಗಾಯಗಳಿಂದ ಉಂಟಾಗುವ ವಿರೂಪಗಳಿಂದ ಬಳಲುತ್ತಿರುವವರಿಗೆ ಅ.26ರಿಂದ ನ.5 ರವರೆಗೆ ಮಂಡ್ಯ ಜಿಲ್ಲೆಯ ಬಿ.ಜಿ ನಗರದ ಆದಿಚುಂಚನಗಿರಿ ಆಸ್ಪತ್ರೆಯಲ್ಲಿಉಚಿತ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಧರ್ಮೇಂದ್ರ ತಿಳಿಸಿದರು.
‘‘ಆದಿಚುಂಚನಗಿರಿ ಆಸ್ಪತ್ರೆ ಟ್ರಸ್ಟ್ , ವಿಶ್ವವಿದ್ಯಾಲಯ ಹಾಗೂ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿರೋಟರಿ ಬೆಂಗಳೂರು ಉತ್ತರ ಸಂಸ್ಥೆಯ ಸಹಭಾಗಿತ್ವದಲ್ಲಿನಡೆಯಲಿರುವ ಶಿಬಿರದಲ್ಲಿಅಮೆರಿಕಾದ ರೋಟೋಪ್ಲಾಸ್ಟ್ ಇಂಟರ್ ನ್ಯಾಷನಲ್ ನ 30 ಸದಸ್ಯರ ವೈದ್ಯರ ತಂಡ ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡುವರು,’’ ಎಂದು ಸುದ್ದಿಗೋಷ್ಠಿಯಲ್ಲಿಹೇಳಿದರು.
‘‘ಶಸ್ತ್ರತ್ರಚಿಕಿತ್ಸೆ, ಔಷಧೋಪಚಾರ , ವೈದ್ಯರು ಮತ್ತು ದಾದಿಯರ ಸೇವೆ, ಊಟ ಹಾಗೂ ವಸತಿ ಸೌಲಭ್ಯಗಳನ್ನು ಅರ್ಹರಿಗೆ ಉಚಿತವಾಗಿ ಒದಗಿಸಲಾಗುವುದು. ಬೆಂಕಿ ಅವಘಡಗಳಿಂದ ಉಂಟಾಗುವ ಸುಟ್ಟಗಾಯಗಳು ಕೆಲವೊಮ್ಮೆ ಚರ್ಮದ ಸಂಕೋಚನ, ಗಾಯದ ಗುರುತುಗಳು ಮತ್ತು ದೇಹದ ಭಾಗಗಳ ಚಲನವಲನಕ್ಕೆ ಅಡ್ಡಿಯಾಗಬಹುದು. ಇಂತಹ ವಿರೂಪಗಳಿಗೆ ಪುನರ್ ನಿರ್ಮಾಣ ಶಸ್ತ್ರಚಿಕಿತ್ಸೆ ಮೂಲಕ ಚಿಕಿತ್ಸೆ ನೀಡುವುದು ಶಿಬಿರದ ಉದ್ದೇಶವಾಗಿದೆ,’’ ಎಂದರು.
‘‘ಆರ್ಥಿಕ ಸಮಸ್ಯೆಯಿಂದಾಗಿ ದುಬಾರಿ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲು ಸಾಧ್ಯವಾಗದ ಕುಟುಂಬಗಳಿಗೆ ಉಚಿತವಾಗಿ ತಜ್ಞ ವೈದ್ಯರ ಸೇವೆ ದೊರೆಯಲಿದೆ. ಗ್ರಾಮೀಣ ಪ್ರದೇಶಗಳ ಜನರು ಈ ಅವಕಾಶ ಸದುಪಯೋಗಪಡಿಸಿಕೊಳ್ಳಬೇಕು,’’ ಎಂದು ಮನವಿ ಮಾಡಿದರು.
‘‘ಆದಿಚುಂಚನಗಿರಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಕಳೆದ 11 ವರ್ಷಗಳಿಂದ ಇಂತಹ ಶಿಬಿರಗಳನ್ನು ಆಯೋಜಿಸಿಕೊಂಡು ಬರುತ್ತಿದೆ. ಮೂರು ತಿಂಗಳಿಗಿಂತ ಹೆಚ್ಚಿನ ವಯಸ್ಸಿನವರು ಶಿಬಿರದ ಪ್ರಯೋಜನ ಪಡೆಯಲು ಅರ್ಹರಾಗಿದ್ದಾರೆ. ವೈದ್ಯಕೀಯ ತಪಾಸಣೆ ಮತ್ತು ಆರೋಗ್ಯ ಸ್ಥಿತಿಯ ಆಧಾರದ ಮೇಲೆ ಶಸ್ತ್ರ ಚಿಕಿತ್ಸೆಗೆ ಸಂಬಂಧಿಸಿದ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ಈಗಾಗಲೇ 230ಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿಕೊಂಡಿದ್ದು, ಆಸಕ್ತರು ಮೊ: 6364854932 ಸಂಪರ್ಕಿಸಬಹುದು,’’ ಎಂದರು.
ಸುದ್ದಿಗೋಷ್ಠಿಯಲ್ಲಿಪ್ರೊ.ಪ್ರಸನ್ನ, ಪ್ರೊಫೆಸರ್ ಡಾ.ನವೀನ್ ಇತರರು ಹಾಜರಿದ್ದರು.