ಮೇಷ : ಮಕ್ಕಳ ಅಭಿವೃದ್ಧಿಯ ಬಗ್ಗೆ, ಅವರ ಕೆಲಸಗಳ ಬಗ್ಗೆ ನೆರೆಹೊರೆಯವರಿಂದ ಪ್ರಶಂಸೆಯ ಮಾತು ಕೇಳಿ ಆನಂದವಾಗುತ್ತದೆ. ವೃತ್ತಿಯಲ್ಲಿನಿಮ್ಮ ಅನುಭವ ಮತ್ತು ಪರಿಶ್ರಮ ಸೂಕ್ತ ಸಮಯದಲ್ಲಿಬೆಳಕಿಗೆ ಬರಲಿದೆ.
(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಪಾಚಿ ಹಸಿರು)
---------
ವೃಷಭ : ಬೆಳವಣಿಗೆಯ ಹಾದಿಯಲ್ಲಿದಿಕ್ಕು ತಪ್ಪಿಸುವವರೇ ಹೆಚ್ಚಿರುವುದರಿಂದ ನಿಮ್ಮತನವನ್ನು ಪ್ರದರ್ಶಿಸುವುದು ಕಷ್ಟವಾದೀತು. ದುರ್ಜನರಿಂದ ದೂರವಿದ್ದು ಸಜ್ಜನರಲ್ಲಿಸ್ನೇಹ ಮತ್ತು ವ್ಯವಹಾರವನ್ನು ಮಾಡುವುದು ಉತ್ತಮ.
(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಕಂದು ಕೆಂಪು)
----------
ಮಿಥುನ : ಬಾಡಿಗೆ ಮನೆ ಹುಡುಕುವ ಕೆಲಸದಲ್ಲಿಸಹೋದ್ಯೋಗಿಯೊಬ್ಬರು ನೆರವಿಗೆ ಬರುವರು. ಕೋರ್ಟು-ಕಚೇರಿ ವ್ಯವಹಾರದ ನಿರ್ವಹಣೆ ಬಗ್ಗೆ ದಿಟ್ಟ ನಿರ್ಧಾರ ತೆಗೆದುಕೊಳ್ಳಿ. ಕಚೇರಿ ಕೆಲಸಗಳಿಗಾಗಿ ಸ್ವಲ್ಪ ಅಲೆದಾಟ ಇರುತ್ತದೆ.
(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಹಳದಿ)
-------
ಕಟಕ : ಬಂದ ಅವಕಾಶವನ್ನು ಕಳೆದುಕೊಳ್ಳಬೇಡಿ. ಔದ್ಯೋಗಿಕ ಜೀವನದಲ್ಲಿಪ್ರಮುಖ ಘಟ್ಟವೊಂದನ್ನು ಪ್ರವೇಶಿಸುವ ಸಾಧ್ಯತೆ ಇದೆ. ಈ ಹಿಂದೆ ಅರ್ಧದಲ್ಲಿಕೈಬಿಟ್ಟಿದ್ದ ಕಾರ್ಯಗಳಿಗೆ ಮರು ಚಾಲನೆ ನೀಡುವ ಬಗ್ಗೆ ಗಮನ ಹರಿಸಿ.
(ಶುಭ ಸಂಖ್ಯೆ : 6, ಅದೃಷ್ಟ ಬಣ್ಣ : ಕಪ್ಪು)
-----------
ಸಿಂಹ : ಬಹಳ ಬೇಗ ಗುರಿ ತಲುಪಬೇಕೆಂಬ ನಿಮ್ಮ ಹಂಬಲವು ಸೋಲನ್ನು ತಂದೊಡ್ಡಬಹುದು. ಯೋಚಿಸಿ ಸಾವಕಾಶವಾಗಿ ಕಾರ್ಯ ಮಗ್ನರಾಗಿ. ಕಲ್ಪನಾಲೋಕದಲ್ಲಿವಿಹರಿಸುವುದನ್ನು ಬಿಟ್ಟು ವಾಸ್ತವ ವಿಚಾರದಲ್ಲಿರಿ.
(ಶುಭ ಸಂಖ್ಯೆ :5, ಅದೃಷ್ಟ ಬಣ್ಣ : ಆಕಾಶ ನೀಲಿ)
------------
ಕನ್ಯಾ : ನೀವು ನಿಮ್ಮ ಆಪ್ತ ವಲಯದಲ್ಲಿಟ್ಟ ನಂಬಿಕೆಯು ಸುಳ್ಳಾಗುವ ಸಂದರ್ಭ ಬರಬಹುದು ಎಚ್ಚರಿಕೆಯಿಂದಿರಿ. ಸೌಂದರ್ಯ ವರ್ಧಕ ವಸ್ತುಗಳ ತಯಾರಕರಿಗೆ ಮತ್ತು ಮಾರಾಟಗಾರರಿಗೆ ಲಾಭ ಉಂಟಾಗುತ್ತದೆ.
(ಶುಭ ಸಂಖ್ಯೆ : 4, ಅದೃಷ್ಟ ಬಣ್ಣ : ಹಸಿರು)
---------
ತುಲಾ : ವೈದ್ಯ ವಿದ್ಯಾರ್ಥಿಗಳಿಗೆ ವ್ಯಾಸಂಗದಲ್ಲಿಪ್ರಗತಿ ಕಂಡುಬರುವುದು. ಹೆಚ್ಚಿನ ವಿದ್ಯಾಭ್ಯಾಸಕ್ಕೆ ವಿದೇಶಕ್ಕೆ ತೆರಳಲು ಬೇಕಾದ ತಯಾರಿ ನಡೆಸಿಕೊಳ್ಳಿ. ಇನ್ನೊಬ್ಬರಿಂದ ಹೀಯಾಳಿಕೆಯ ಮಾತನ್ನು ಕೇಳಬೇಕಾಗಬಹುದು.
(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಕೆಂಪು)
--------
ವೃಶ್ಚಿಕ : ಲಾಭ-ನಷ್ಟಗಳ ಬಗ್ಗೆ ಪುನರಾವಲೋಕನ ಅಗತ್ಯವೆನಿಸುವುದು. ವಿದೇಶಿ ಬಂಡವಾಳಗಳಿಂದ ಲಾಭ ಗಳಿಸುವ ಅವಕಾಶ ಬರಲಿದೆ. ಬರಬೇಕಾಗಿದ್ದ ಹಣಕ್ಕೆ ಇರುವ ಅಡಚಣೆಯನ್ನು ನಿವಾರಿಸಿಕೊಳ್ಳಲು ಮಾರ್ಗದರ್ಶಕರನ್ನು ಭೇಟಿಯಾಗಿ.
(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಬೂದು)
----------
ಧನು : ಮೇಲಧಿಕಾರಿಯಿಂದ ಹೆಚ್ಚಿನ ಅವಕಾಶಗಳು ಮತ್ತು ಪ್ರಶಂಸೆಯ ಮಾತುಗಳನ್ನು ಕೇಳುವಿರಿ. ಕೇವಲ ನಿಮ್ಮ ಬಗ್ಗೆ ಯೋಚಿಸುವ ಸ್ವಾರ್ಥ ಬುದ್ಧಿ ಬಿಟ್ಟು ಇತರರ ಕುರಿತು ಕಾಳಜಿ ವಹಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ.
(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಖಾಕಿ)
-------
ಮಕರ : ಸರಕಾರಿ ಕೆಲಸದ ಗುತ್ತಿಗೆದಾರರು ಕಾಮಗಾರಿಗಳನ್ನು ತಮ್ಮೆಡೆಗೆ ಮಾಡಿಕೊಳ್ಳುವ ವಿಚಾರದಲ್ಲಿವಿಫಲರಾಗಬಹುದು. ಹಾಲಿನ ಡೈರಿ ಪದಾರ್ಥಗಳ ವ್ಯಾಪಾರಸ್ಥರಿಗೆ ಹೆಚ್ಚಿನ ಉತ್ಪಾದನೆಯಿಂದ ಲಾಭ ಇರುವುದು.
(ಶುಭ ಸಂಖ್ಯೆ :4, ಅದೃಷ್ಟ ಬಣ್ಣ : ನೀಲಿ)
---------
ಕುಂಭ : ಅನಿವಾರ್ಯದ ಕೆಲಸವಾದರೂ ವೆಚ್ಚವು ನಿಮ್ಮ ಯೋಚನೆಯನ್ನು ಮೀರಿ ಹೋಗಲಿದೆ. ಸಹೋದರರಲ್ಲಿದ್ದ ಸ್ಥಿರಾಸ್ತಿ ವಿಚಾರದ ಮನಸ್ತಾಪಗಳು ದೂರಾಗುವುವು. ತಂದೆ-ಮಕ್ಕಳ ಸಂಬಂಧ ಗಾಢವಾಗಿರುವುದು.
(ಶುಭ ಸಂಖ್ಯೆ :2, ಅದೃಷ್ಟ ಬಣ್ಣ : ಗುಲಾಬಿ)
-------
ಮೀನ : ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರಗಳು ದೊರೆಯಲಿವೆ. ನೆರೆಹೊರೆಯವರ ಸಹಾಯ ಸಹಕಾರ ಕೇಳುವುದು ಅಗೌರವವೆಂದು ಭಾವಿಸಬೇಡಿ. ಶಿವನ ಆರಾಧನೆಯಿಂದ ನೆಮ್ಮದಿ ಉಂಟಾಗಲಿದೆ.