ಎಐ

Contributed by: shree.vidya@timesofindia.com|Vijaya Karnataka•
new opportunities for students through ai in india
ಎಸ್ ಬಿಆರ್ ಪಬ್ಲಿಕ್ ಶಾಲೆಯಲ್ಲಿಗಾಂಧೀ ಜಯಂತಿ ಹಾಗೂ ಶಾಸ್ತ್ರಿ ಜಯಂತಿ

ಕಲಬುರಗಿಯ ಎಸ್ ಬಿಆರ್ ಪಬ್ಲಿಕ್ ಶಾಲೆಯಲ್ಲಿರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜಯಂತಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಜಯಂತಿಯನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಹೆಚ್ಚುವರಿ ಜಿಲ್ಲಾಮತ್ತು ಸೆಷಸ್ಸ್ ನ್ಯಾಯಾಧಿಧೀಶ ಎಸ್ . ಎಲ್ . ಚವ್ಹಾಣ್ , ಮಹಾತ್ಮ ಗಾಂಧೀಜಿಯವರ ಜೀವನಾದರ್ಶಗಳು, ಸತ್ಯ, ಅಹಿಂಸೆ ಮತ್ತು ನ್ಯಾಯದ ಮಹತ್ವವನ್ನು ವಿವರಿಸಿ, ವಿದ್ಯಾರ್ಥಿಗಳು ಗಾಂಧೀಜಿಯವರ ಆದರ್ಶಗಳನ್ನು ಜೀವನದಲ್ಲಿಅಳವಡಿಸಿಕೊಳ್ಳುವಂತೆ ಪ್ರೇರೇಪಿಸಿದರು. ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧಿಧೀಶ ವಿಜಯ ಕುಮಾರ್ ಜಟ್ನಾ, ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಜಿಯವರ ಶಿಸ್ತು, ಸಮರ್ಪಣೆ ಮತ್ತು ದೇಶಸೇವೆಯ ಮನೋಭಾವವನ್ನು ವಿದ್ಯಾರ್ಥಿಗಳಿಗೆ ಪರಿಚಯಿಸಿದರು.
ವಿಶಿಷ್ಟ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಕ್ಕಳ ಸಾಹಿತಿ ಕೆ. ರಾಮೇಶ್ವರ, ಗಾಂಧೀಜಿಯವರೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡು ಗಾಂಧೀಜಿಯವರ ಸರಳತೆ, ಸತ್ಯನಿಷ್ಠೆ ಮತ್ತು ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳು ಗಾಂಧೀಜಿಯವರ ಐತಿಹಾಸಿಕ ದಂಡಿ ಉಪ್ಪಿನ ಸತ್ಯಾಗ್ರಹದ ಮೆರವಣಿಗೆಯನ್ನು ಸಾಂಪ್ರದಾಯಿಕ ಉಡುಗೆ-ತೊಡುಗೆ ಹಾಗೂ ದೇಶಭಕ್ತಿಯ ಘೋಷಣೆಗಳೊಂದಿಗೆ ಮರುಸೃಷ್ಟಿಸಿದರು. ಈ ಮನೋಜ್ಞ ಪ್ರಸ್ತುತಿಯು ದಂಡಿ ಯಾತ್ರೆಯ ಐತಿಹಾಸಿಕ ಸನ್ನಿವೇಶವನ್ನು ಸ್ಮರಿಸುವುದರ ಜೊತೆಗೆ, ಗಾಂಧೀಜಿಯವರ ಸ್ವಾತಂತ್ರ ಹೋರಾಟದ ಸಂದೇಶವನ್ನು ಪರಿಣಾಮಕಾರಿಯಾಗಿ ವಿದ್ಯಾರ್ಥಿಗಳ ಮನದಲ್ಲಿಮೂಡಿಸಿತು. ಇದರೊಂದಿಗೆ ವಿದ್ಯಾರ್ಥಿಗಳಿಂದ ವಿವಿಧ ಭಜನೆಗಳು ಹಾಗೂ ಭಾಷಣಗಳು ಜರುಗಿದವು. ಕೊನೆಯಲ್ಲಿರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಈ ಸಮಗ್ರ ಕಾರ್ಯಕ್ರಮವನ್ನು ಎಸ್ ಬಿಆರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ಶ್ರೀ ಎನ್ . ಎಸ್ .ದೇವರಕಲ್ ಅವರ ಮಾರ್ಗದರ್ಶನದಲ್ಲಿಯಶಸ್ವಿಯಾಗಿ ಆಯೋಜಿಸಲಾಯಿತು.

ಫೈಲ್ ನೇಮ್ - ಗಾಂಧಿಧಿ

ಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿಧಿ---------------------

ಇಂಡಿಯಾ ಎಐ ಫೆಲೋಶಿಪ್

ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿಸಂಶೋಧನೆ ಮತ್ತು ಯೋಜನೆಗಳನ್ನು ಕೈಗೊಳ್ಳುವ ಅರ್ಹ ವಿದ್ಯಾರ್ಥಿಗಳಿಗೆ ಕೇಂದ್ರ ಸರಕಾರದ ಎಲೆಕ್ಟ್ರಾನಿP್ಸ… ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಇಂಡಿಯಾ ಎಐ ಮಿಷನ್ ಅಡಿಯಲ್ಲಿಇಂಡಿಯಾ ಎಐ ಫೆಲೋಶಿಪ್ 2026 ಗಾಗಿ ಅರ್ಜಿ ಪ್ರಕ್ರಿಯೆ ಆರಂಭಗೊಂಡಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು 2026 ನವೆಂಬರ್ 30ರೊಳಗೆ ಅಧಿಧಿಕೃತ ಪೋರ್ಟಲ್ ಮೂಲಕ ಆನ್ ಲೈನ್ ನಲ್ಲಿಅರ್ಜಿ ಸಲ್ಲಿಸಬೇಕು.

ಪದವಿ ಪೂರ್ವ/ ಇಂಟಿಗ್ರೇಟೆಡ್ ಡ್ಯುಯಲ್ ಡಿಗ್ರಿ ವಿದ್ಯಾರ್ಥಿಗಳಿಗೆ 1 ಲಕ್ಷ ರೂ.ವರೆಗೆ ಆರ್ಥಿಕ ನೆರವು ಲಭ್ಯವಿದೆ. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಎಐ-ಸಂಬಂಧಿಧಿತ ಸಂಶೋಧನೆಗಾಗಿ 2 ಲಕ್ಷ ರೂ.ವರೆಗೆ ಧನಸಹಾಯ ಸಿಗಲಿದೆ. ಪಿಎಚ್ ಡಿ ಸಂಶೋಧನಾ ವಿದ್ಯಾರ್ಥಿಗಳಿಗೆ ಆರಂಭಿಕ ವರ್ಷಗಳಲ್ಲಿ ಮಾಸಿಕ 70,000 ರೂ.ಗಳಿಂದ 80,000 ರೂ.ಗಳವರೆಗೆ ಫೆಲೋಶಿಪ್ ಹಾಗೂ ವಾರ್ಷಿಕ 2 ಲಕ್ಷ ರೂ.ಗಳ ಸಂಶೋಧನಾ ಅನುದಾನ ನೀಡಲಾಗುತ್ತದೆ. ಅರ್ಹ ವಿದ್ಯಾರ್ಥಿಗಳು ಅಧಿಕೃತ ್ಛಛ್ಝ್ಝಿಟಡಿshಜಿp.ಜ್ಞಿdಜಿaaಜಿ.ಜಟv.ಜ್ಞಿ ವೆಬ್ ಸೈಟ್ ಗೆ ಭೇಟಿ ನೀಡಿ, ತಮ್ಮ ಶೈಕ್ಷಣಿಕ ಹಂತಕ್ಕೆ ತಕ್ಕ ಮಾರ್ಗಸೂಚಿಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಫೈಲ್ ನೇಮ್ - ಎಐ

-----------------

ಭಾರತೀಯ ವಿದ್ಯಾರ್ಥಿಗಳಲ್ಲಿ ಎಐ ಆತಂಕ

ಎಐ ಪರಿಕರಗಳು ತಮ್ಮ ಕಾರ್ಯಗಳ ವೇಗವನ್ನು ಹೆಚ್ಚಿಸಿದರೂ ವಿಷಯಗಳ ಬಗ್ಗೆ ಆಳವಾದ ಜ್ಞಾನ ಪಡೆಯಲು ಅಡ್ಡಿಯಾಗಬಹುದು ಎಂದು ಭಾರತೀಯ ವಿದ್ಯಾರ್ಥಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಹೆಚ್ ಪಿ ಸಂಸ್ಥೆಯು ಇತ್ತೀಚೆಗೆ ಬಿಡುಗಡೆ ಮಾಡಿದ ಎಚ್ ಪಿ ಫ್ಯೂಚರ್ಸ್ 2026: ಸ್ಕಿಲ್ಸ್ ಇನ್ ದಿ ಏಜ್ ಆಫ್ ಇಂಟೆಲಿಜೆಂಟ್ ಮೆಷಿಸ್ಸ್ ಎಂಬ ವರದಿಯಲ್ಲಿ ಈ ಸಂಗತಿಗಳು ಹೊರಬಿದ್ದಿವೆ. ಸಮೀಕ್ಷೆಯಲ್ಲಿ ಪಾಲ್ಗೊಂಡ 82% ಭಾರತೀಯ ವಿದ್ಯಾರ್ಥಿಗಳು ಮಾಹಿತಿಯನ್ನು ಸುದೀರ್ಘವಾಗಿ ನೆನಪಿನಲ್ಲಿಟ್ಟುಕೊಳ್ಳಲು 42% ವಿದ್ಯಾರ್ಥಿಗಳು ಮುದ್ರಿತ ಪುಸ್ತಕಗಳು ಅಥವಾ ಕೈಬರಹದ ನೋಟ್ಸ್ ಗಳನ್ನು ಇಷ್ಟಪಡುವುದಾಗಿ ತಿಳಿಸಿದ್ದಾರೆ. ಎಐ ಬಳಕೆಯಿಂದ ಕೆಲಸ ವೇಗವಾಗಿ ಮುಗಿದರೂ ವಿಷಯದ ಮೂಲಭೂತ ಗ್ರಹಿಕೆ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆದರೂ ಭವಿಷ್ಯದ ಕೆಲಸದ ವಿಚಾರದಲ್ಲಿವಿದ್ಯಾರ್ಥಿಗಳು ಧನಾತ್ಮಕವಾಗಿದ್ದಾರೆ. 78% ಭಾರತೀಯ ವಿದ್ಯಾರ್ಥಿಗಳು ಎಐ ತಂತ್ರಜ್ಞಾನವು ಉದ್ಯೋಗಗಳನ್ನು ಕಸಿದುಕೊಳ್ಳುವುದಕ್ಕಿಂತ ಹೊಸ ಅವಕಾಶಗಳನ್ನು ಹೆಚ್ಚಾಗಿ ಸೃಷ್ಟಿಸುತ್ತದೆ ಎಂದು ನಂಬಿದ್ದಾರೆ. 87% ವಿದ್ಯಾರ್ಥಿಗಳು ತಮ್ಮ ಭವಿಷ್ಯದ ವೃತ್ತಿಯಲ್ಲಿಎಐ ಉಪಕರಣಗಳನ್ನು ಜವಾಬ್ದಾರಿಯುತವಾಗಿ ಬಳಸುವ ಆತ್ಮವಿಶ್ವಾಸ ಹೊಂದಿದ್ದಾರೆ. ಸಮೀಕ್ಷೆಯಲ್ಲಿಜಾಗತಿಕವಾಗಿ 6 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಮತ್ತು ನೀತಿ ನಿರೂಪಣೆ ಕ್ಷೇತ್ರದ 58 ತಜ್ಞರನ್ನು ಸಂದರ್ಶಿಸಲಾಗಿದೆ.

ಫೈಲ್ ನೇಮ್ - ಎಜುಕೇಶನ್

----------------------

ವಿದ್ಯಾರ್ಥಿಗಳಲ್ಲಿಹೆಚ್ಚುತ್ತಿರುವ ಉದ್ಯಮಶೀಲತೆ

ಐಐಟಿ ಮಂಡಿ ಮತ್ತು ಬೆಂಗಳೂರಿನ ರೇವಾ ವಿಶ್ವವಿದ್ಯಾಲಯ ಜಂಟಿಯಾಗಿ ಹೊರತಂದಿರುವ ಗೇಸ್ ಭಾರತ 2025 ರಾಷ್ಟ್ರೀಯ ಸಮೀಕ್ಷಾ ವರದಿ ಪ್ರಕಾರ, ಭಾರತದಲ್ಲಿ ಪ್ರತಿ 5 ಜನ ಕಾಲೇಜು ವಿದ್ಯಾರ್ಥಿಗಳಲ್ಲಿಒಬ್ಬರು ಅಂದರೆ ಶೇಕಡಾ 22ರಷ್ಟು ವಿದ್ಯಾರ್ಥಿಗಳು ಈಗಾಗಲೇ ಸ್ವಂತ ಉದ್ಯಮವನ್ನು ಪ್ರಾರಂಭಿಸಿದ್ದಾರೆ. ಇದು ಜಾಗತಿಕ ಸರಾಸರಿಯಾದ ಶೇಕಡಾ 23ಕ್ಕೆ ಸುಮಾರು ಹತ್ತಿರದಲ್ಲಿದೆ. ‘ನಾವು ವಿದ್ಯಾರ್ಥಿ ಉದ್ಯಮಿಗಳನ್ನು ಹೇಗೆ ರೂಪಿಸುವುದು? ಎಂಬ ಶೀರ್ಷಿಕೆಯಡಿ ಪ್ರಕಟವಾಗಿರುವ ಈ ವರದಿಯನ್ನು ಭಾರತದ 38 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 1200ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳ 25,783 ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸಮೀಕ್ಷೆಯಲ್ಲಿಪಾಲ್ಗೊಂಡ ಶೇಕಡಾ 43ರಷ್ಟು ಭಾರತೀಯ ವಿದ್ಯಾರ್ಥಿಗಳು ಭವಿಷ್ಯದಲ್ಲಿಉದ್ಯಮ ಆರಂಭಿಸುವ ಆಸೆ ಹೊಂದಿರುವುದಾಗಿ ತಿಳಿಸಿದ್ದಾರೆ. ಈಗಾಗಲೇ ಉದ್ಯಮ ಆರಂಭಿಸಿರುವ ವಿದ್ಯಾರ್ಥಿಗಳಲ್ಲಿಶೇಕಡಾ 35.5ರಷ್ಟು ಮಂದಿ ನಿಯಮಿತವಾಗಿ ಮಾರಾಟ ಮತ್ತು ವಹಿವಾಟು ನಡೆಸುತ್ತಿದ್ದು, ಎಂಜಿನಿಯರಿಂಗ್ ಅಥವಾ ಪದವಿ ಮುಗಿಸಿದ ತಕ್ಷಣ ಸ್ವಂತ ಉದ್ಯಮ ಆರಂಭಿಸಲು ಬಯಸುವವರ ಪ್ರಮಾಣವು 2023ರಲ್ಲಿದ್ದ ಶೇಕಡಾ 14ರಿಂದ 2025ರಲ್ಲಿಶೇಕಡಾ 16.2ಕ್ಕೆ ಏರಿಕೆಯಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಕೇವಲ ಉದ್ಯೋಗಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದಲ್ಲದೆ, ಹೊಸ ಉದ್ಯಮಗಳನ್ನು ಹುಟ್ಟುಹಾಕಲು ಮತ್ತು ಯುವ ಸಂಸ್ಥಾಪಕರಿಗೆ ಮಾರ್ಗದರ್ಶನ ಹಾಗೂ ಆರ್ಥಿಕ ಬೆಂಬಲ ನೀಡುವ ನಿಟ್ಟಿನಲ್ಲಿಶಿಕ್ಷಣ ಪದ್ಧತಿ ರೂಪುಗೊಳ್ಳಬೇಕು ಎಂದು ಈ ವರದಿ ಶಿಫಾರಸು ಮಾಡಿದೆ.

ಫೈಲ್ ನೇಮ್ - ಜಾಬ್

---------------

ಸರಕಾರಿ ಶಾಲೆಗಳಿಗೆ ಹೊಸ ಪ್ರವೇಶ ನಿಯಮ

ವಿದ್ಯಾರ್ಥಿಗಳ ಸುರಕ್ಷತೆ, ಭದ್ರತೆ ಮತ್ತು ಗೌಪ್ಯತೆಯನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿಗುಜರಾತ್ ಸರಕಾರವು ಮಹತ್ವದ ನಿರ್ಧಾರ ಕೈಗೊಂಡಿದ್ದು, ಸರಕಾರಿ ಶಾಲೆಗಳ ಆವರಣಕ್ಕೆ ಹೊರಗಿನವರು ಪ್ರವೇಶಿಸಲು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇನ್ನು ಮುಂದೆ ಯಾವುದೇ ಹೊರಗಿನವರು ಶಾಲಾ ಆವರಣದೊಳಗೆ ಪ್ರವೇಶಿಸಲು ಶಾಲೆಯ ಪ್ರಾಂಶುಪಾಲರು ಅಥವಾ ಮುಖ್ಯಸ್ಥರಿಂದ ಪೂರ್ವ ಲಿಖಿತ ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ತರಗತಿಗಳು, ಪ್ರಯೋಗಾಲಯಗಳು, ಗ್ರಂಥಾಲಯಗಳು, ವಸತಿ ನಿಲಯಗಳು ಮತ್ತು ಆಟದ ಮೈದಾನಗಳಂತಹ ವಿದ್ಯಾರ್ಥಿಗಳ ಚಟುವಟಿಕೆಗಳು ನಡೆಯುವ ಸ್ಥಳಗಳಿಗೆ ಪ್ರಾಂಶುಪಾಲರ ಲಿಖಿತ ಅನುಮತಿ ಹಾಗೂ ಶಿಕ್ಷಕರೊಬ್ಬರ ಉಪಸ್ಥಿತಿಯಲ್ಲಿ ಪ್ರವೇಶಿಸಲು ಅವಕಾಶವಿರುತ್ತದೆ. ಪ್ರಾಂಶುಪಾಲರ ಪೂರ್ವ ಲಿಖಿತ ಅನುಮತಿಯಿಲ್ಲದೆ ವಿದ್ಯಾರ್ಥಿಗಳು, ಶಿಕ್ಷಕರು ಅಥವಾ ಶಾಲಾ ಚಟುವಟಿಕೆಗಳ ಫೋಟೊ ತೆಗೆಯುವುದು, ವಿಡಿಯೊ ಮಾಡುವುದು, ಸಂದರ್ಶನ ನಡೆಸುವುದು ಅಥವಾ ಲೈವ್ ಸ್ಟ್ರೀಮಿಂಗ್ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಶಾಲೆಯ ನಿಯಮಗಳನ್ನು ಉಲ್ಲಂಘಿಘಿಸುವವರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಸಂಬಂಧಪಟ್ಟ ಶಿಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿ, ಕಾನೂನು ಕ್ರಮ ಕೈಗೊಳ್ಳಲು ಪ್ರಾಂಶುಪಾಲರಿಗೆ ಅಧಿಕಾರ ನೀಡಲಾಗಿದೆ.

ಫೈಲ್ ನೇಮ್ - ಗುಜರಾತ್

----------------