ಕಿಚ್ಚು ಹಾಯುವ ಕಾರ್ಯಕ್ರಮ

Contributed by: kariyappa.kudupali@gmail.com|Vijaya Karnataka•
the fire lighting ceremony that brought joy to devotees
ಬುಳ್ಳಾಪುರದಲ್ಲಿಭಕ್ತರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸ

ವಿಕ ಸುದ್ದಿಲೋಕ ರಟ್ಟೀಹಳ್ಳಿ

ತಾಲೂಕಿನ ಬುಳ್ಳಾಪುರ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿದಸರಾ ಮಹೋತ್ಸವ ಅಂಗವಾಗಿ ಕಿಚ್ಚು ಹಾಯುವ ಕಾರ್ಯಕ್ರಮ ಗುರುವಾರ ನಡೆಯಿತು.

ದುರ್ಗಾದೇವಿ ಆರಾಧಕ ಬುಳ್ಳಾಪುರದ ಬಸವರಾಜ ಮೂಡಬಾಗಿಲ ಮತ್ತು ಹಾಡೆ ಗ್ರಾಮದ ರಾಜಪ್ಪ ಕಿರಗೇರಿ ಸಹಸ್ರಾರು ಸಂಖ್ಯೆ ಭಕ್ತರ ಸಮ್ಮುಖದಲ್ಲಿಲೋಕ ಕಲ್ಯಾಣಕ್ಕಾಗಿ ಕಿಚ್ಚು ಹಾಯ್ದರು.

ಬುಳ್ಳಾಪುರ ಮತ್ತು ಹಾಡೆ ಗ್ರಾಮಸ್ಥರು ಮತ್ತು ಸೇರಿದ್ದ ಸಹಸ್ರಾರು ಭಕ್ತರು ಗ್ರಾಮದ ಸಮೀಪದ ಬನ್ನಿ ಮಂಟಪಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ವಿಜಯ ದಶಮಿ ಆಚರಿಸಿದರು. 9 ದಿನ ದೇವಿಯ ಸ್ಮರಣೆ ಮಾಡುತ್ತಾ, ಉಪವಾಸ ವ್ರತ ಆಚರಿಸಿಕೊಂಡು ಬಂದಿದ್ದ ಬಸವರಾಜ ಮೂಡಬಾಗಿಲ ಮತ್ತು ಹಾಡೆ ಗ್ರಾಮದ ರಾಜಪ್ಪ ಕಿರಗೇರಿ ಅವರು ಲೋಕ ಕಲ್ಯಾಣರ್ಥವಾಗಿ ಅಗ್ನಿಕುಂಡದಲ್ಲಿಬಂದು ಕಿಚ್ಚು ಹಾಯ್ದರು. ಅಗ್ನಿ ಕುಂಡದಲ್ಲಿಮೂರು ಬಾರಿ ಕಿಚ್ಚನ್ನು ದಾಟಿ ನಂತರ ಉಡಿಯಲ್ಲಿಬೆಂಕಿ ಕೆಂಡ ಹಾಕಿಕೊಂಡು ದೇವಸ್ಥಾನದ ಗರ್ಭಗುಡಿಗೆ ಆಗಮಿಸಿ ದೇವಿಗೆ ಮಂಗಳಾರತಿ ಸಲ್ಲಿಸಿದರು.

ಪೊಲೀಸರ ಹರಸಾಹಸ:

ಕಿಚ್ಚು ಹಾಯುವ ಕಾರ್ಯಕ್ರಮ ವೀಕ್ಷಣೆಗೆ ರಾಜ್ಯದ ಮೂಲೆಮೂಲೆಗಳಿಂದ ಸಹಸ್ರಾರು ಸಂಖ್ಯೆ ಭಕ್ತರು ಆಗಮಿಸಿದ್ದರು. ಈ ವೇಳೆ ಭಕ್ತರು ಕಿಚ್ಚು ನೋಡುವುದಕ್ಕೆ ಮುಗಿಬೀಳುತ್ತಿದ್ದರು. ಭಕ್ತರನ್ನು ನಿಯಂತ್ರಿಸಲು ರಟ್ಟೀಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಬೇರೆ ಠಾಣೆಯಿಂದ ಆಗಮಿಸಿದ್ದ ಪೊಲೀಸರು ಭಕ್ತರನ್ನು ನಿಯಂತ್ರಿಸಲು ಹರಸಾಹಸಪಟ್ಟರು.

ಫೋಟೋ ಶೀರ್ಷಿಕೆ:ಅ.22 ರಟ್ಟೀಹಳ್ಳಿ.1-

ಬುಳ್ಳಾಪುರ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿದೇವಿ ಆರಾಧಕ ಬಸವರಾಜ ಮೂಡಬಾಗಿಲ ಲೋಕ ಕಲ್ಯಾಣಕ್ಕಾಗಿ ಕಿಚ್ಚ ಹಾಯ್ದರು.

ಅ.22 ರಟ್ಟೀಹಳ್ಳಿ.1.ಎ-

ಬುಳ್ಳಾಪುರ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿಹಾಡೆ ಗ್ರಾಮದ ರಾಜಪ್ಪ ಕಿರಗೇರಿ ಲೋಕ ಕಲ್ಯಾಣಕ್ಕಾಗಿ ಕಿಚ್ಚ ಹಾಯ್ದರು.

ಅ.22. ರಟ್ಟೀಹಳ್ಳಿ.1.ಬಿ- ಕಿಚ್ಚು ನೋಡಲು ಸೇರಿದ ಭಕ್ತರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.