ಆರ್ ಎಸ್ಸೆಸ್ಸೆನ್ ಅಧ್ಯಕ್ಷರಾಗಿ ಮಧುಕುಮಾರ್ ಅವಿರೋಧ ಆಯ್ಕೆ

Contributed by: shivaraju.rnr@gmail.com|Vijaya Karnataka•
madhukumar elected unopposed as the new president of rsssn
ಆರ್ ಎಸ್ಸೆಸ್ಸೆನ್ ಅಧ್ಯಕ್ಷರಾಗಿ ಮಧುಕುಮಾರ್ ಅವಿರೋಧ ಆಯ್ಕೆ

ವಿಕ ಸುದ್ದಿಲೋಕ ಬಿಡದಿ: ಬಿಡದಿ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘ(ರೈತರ ಸೇವಾ ಸಹಕಾರ ಸಂಘ)ದ ನೂತನ ಅಧ್ಯಕ್ಷರಾಗಿ ಕಲ್ಲುಗೋಪಹಳ್ಳಿ
ಮಧುಕುಮಾರ್ ಎನ್ .ಕೆ. ಅವರು ಗುರುವಾರ ನಡೆದ ಚುನಾವಣೆಯಲ್ಲಿಅವಿರೋಧ ಆಯ್ಕೆಯಾದರು.

ಸಂಘದ ಅಧ್ಯಕ್ಷರಾಗಿದ್ದ ಜೀವನ್ .ಎಸ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸಂಘದ ಕಾರ್ಯಾಲಯದಲ್ಲಿಅ. 22ರಂದು ಚುನಾವಣೆ ನಿಗದಿಯಾಗಿತ್ತು. ಚುನಾವಣೆ ಪ್ರಕ್ರಿಯೆಯಲ್ಲಿಅಧ್ಯಕ್ಷ ಸ್ಥಾನಕ್ಕೆ ಮಧುಕುಮಾರ್ ಎನ್ .ಕೆ ಅವರನ್ನು ಹೊರತುಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಆಯ್ಕೆಯನ್ನು ಅವಿರೋಧ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಂಘದ ಸಿಇಒ ಕಿರಣ್ ಕುಮಾರ್ ಘೋಷಿಸಿದರು. ಫಲಿತಾಂಶ ಘೋಷಣೆ ನಂತರ ಮುಖಂಡರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ 86 ಗ್ರಾಮಗಳ ಕಾರ್ಯಕ್ಷೇತ್ರದ ಜತೆಗೆ 6156 ಸದಸ್ಯರನ್ನು ಹೊಂದಿರುವ ಸಂಘ ಜಿಲ್ಲೆಯ ಪ್ರತಿಷ್ಠಿತ ಸೊಸೈಟಿಯಾಗಿದೆ. ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ

ಸಂಸ್ಥೆಯಾಗಿ ಹೆಸರಾಗಿದ್ದು ಎಲ್ಲರ ಸಹಕಾರದಿಂದ ಉತ್ತಮ ಲಾಭಾಂಶದಲ್ಲಿಕಾರ್ಯನಿರ್ವಹಿಸುತ್ತಿದೆ. ಸಂಘದ ಎಲ್ಲಸದಸ್ಯರಿಗೆ ಶೀಘ್ರವೇ ಸ್ಮಾರ್ಟ್ ಕಾರ್ಡ್ ಗುರುತಿನ ಚೀಟಿ ವಿತರಿಸಲು ಕ್ರಮವಹಿಸಲಾಗುವುದು ಎಂದರು.

ಸುಮಾರು 60 ವರ್ಷಗಳ ಹಳೇಯದಾದ ಸಂಘದ ಕಾರ್ಯಾಲಯದ ಕಟ್ಟಡ ಶಿಥಿಲವಾಗಿದ್ದು, ಅದನ್ನು ಕೆಡವಿ ಅಲ್ಲಿವಾಣಿಜ್ಯ ಸಂಕೀರ್ಣ ನಿರ್ಮಿಸಲು ನಿರ್ಧರಿಸಲಾಗಿದೆ. ಆಡಳಿತ ಕಚೇರಿ ಹಾಗೂ ಗೋದಾಮನ್ನು ರೈತರ ಸೇವಾ ಸಮುದಾಯ ಭವನಕ್ಕೆ ಸ್ಥಳಾಂತರಿಸಲಾಗುವುದು. ಎಲ್ಲರ ಸಹಕಾರದಲ್ಲಿಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದ ಅವರು ತಮ್ಮ ಆಯ್ಕೆಗೆ ಸಹಕರಿಸಿದ ಸಚಿವರಾದ ಎಚ್ .ಸಿ. ಬಾಲಕೃಷ್ಣ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಹಾಗೂ ಮುಖಂಡರು, ಸಂಘದ ನಿರ್ದೇಶಕರಿಗೆ ಧನ್ಯವಾದ ಅರ್ಪಿಸುವುದಾಗಿ

ಮಧುಕುಮಾರ್ ತಿಳಿಸಿದರು.

ನೂತನ ಅಧ್ಯಕ್ಷರನ್ನು ಪೌರಾಡಳಿತ ಸಚಿವ ಎಚ್ .ಸಿ. ಬಾಲಕೃಷ್ಣ ದೂರವಾಣಿ ಮೂಲಕ ಕರೆ ಮಾಡಿ ಶುಭ ಹಾರೈಸಿದರು. ಪುರಸಭೆ ಸದಸ್ಯರಾದ ಎನ್ . ಕುಮಾರ್ , ನವೀನ್ ಕುಮಾರ್ , ಸಂಘದ ಉಪಾಧ್ಯಕ್ಷ ಕೆ.ಪಿ. ಬಾಲಕೃಷ್ಣ, ನಿಕಟಪೂರ್ವ ಅಧ್ಯಕ್ಷ ಜೀವನ್ .ಎಸ್ , ನಿರ್ದೇಶಕರಾದ ವಿ.ಆರ್ .ಮಹೇಶ್ , ಶೋಭಾದೇವರಾಜು, ಅನ್ನಪೂರ್ಣೇಶ್ವರಿ, ಸತ್ಯಪ್ಪ,

ಪುಟ್ಟರೇವಯ್ಯ, ಸಂತೋಷ್ , ರಮೇಶ್ , ಕೆಂಗಲಯ್ಯ, ನಿತ್ಯಾನಂದ ಮುಖಂಡರಾದ ವೀರಭದ್ರಯ್ಯ, ಸಿದ್ದರಾಮಯ್ಯ, ಹೊಂಬೇಗೌಡ(ಪುಟ್ಟ), ಬಿ.ಎಂ.ಕುಮಾರ್ , ದೇವರಾಜು ಎಚ್ .ಎನ್ .ದಾಸಪ್ಪ, ಮಾದೇಶ್ , ನಂಜುಂಡಿ, ನಿಖಿಲ್ ಸಜ್ಜೆನಿಂಗಯ್ಯ, ಕೋಟಪ್ಪ, ನಾಗರಾಜು(ಮಿಲ್ಟಿ್ರ ) ಮತ್ತಿತರರು ಅಭಿನಂದಿಸಿದರು.

ಧಿ

ಕೋಟ್ ..

ಸೊಸೈಟಿ ಆಡಳಿತ ಕಚೇರಿ ಮತ್ತು ಗೋದಾಮನ್ನು ಹೊಸ ಜಾಗದಲ್ಲಿಒಂದೇ ಸೂರಿನಡಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಹಳೆ ಕಟ್ಟಡವಿರುವ ಜಾಗದಲ್ಲಿವಾಣಿಜ್ಯ ಸಂಕೀರ್ಣ ನಿರ್ಮಿಸಿ ಸಂಘಕ್ಕೆ ವರಮಾನ ಹೆಚ್ಚಿಸಲು ನಿರ್ಧರಿಸಲಾಗಿದೆ. ಉದ್ದೇಶಕ್ಷೇತ್ರದ ಪೌರಾಡಳಿತ ಸಚಿವ ಎಚ್ .ಸಿ. ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿಹಾಗೂ ಸಂಘದ ನಿರ್ದೇಶಕರ ವಿಶ್ವಾಸದೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಸರಕಾರದಿಂದ ಸೂಕ್ತ ಜಾಗ ಮಂಜೂರಾದರೆ ಸುಸಜ್ಜಿತ ಆಡಳಿತ ಕಚೇರಿ ಮತ್ತು ಗೋದಾಮವನ್ನು ನಿರ್ಮಿಸಲಾಗುವುದು.

- ಎನ್ .ಕೆ. ಮಧುಕುಮಾರ್ , ಅಧ್ಯಕ್ಷರು, ಆರ್ ಎಸ್ ಎಸ್ ಎನ್ ಬಿಡದಿ.

ಧಿ

22ಬಿಡಿಆರ್ ಫೋಟೋ-1-ಬಿಡದಿ ಆರ್ ಎಸ್ ಎಸ್ ಎನ್ ಸೊಸೈಟಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಎನ್ .ಕೆ. ಮಧುಕುಮಾರ್ ಅವರನ್ನು ಸಂಘದ ನಿರ್ದೇಶಕರು ಅಭಿನಂದಿಸಿದರು.

22ಬಿಡಿಆರ್ ಫೋಟೋ-2ಎ-ಎನ್ .ಕೆ. ಮಧುಕುಮಾರ್ , ಅಧ್ಯಕ್ಷರು, ಆರ್ ಎಸ್ ಎಸ್ ಎನ್ ಬಿಡದಿ.

ಧಿ