ಏಳುಕೊಳ್ಳದ ನಾಡು ಶ್ರೀಕ್ಷೇತ್ರ ರೇಣುಕಾ ಯಲ್ಲಮ್ಮನ ಗುಡ್ಡದಲ್ಲಿನವರಾತ್ರಿ ಹಬ್ಬದ ಅಂಗವಾಗಿ ಜರುಗಿದ ಜಾತ್ರಾ ಉತ್ಸವ ಬುಧವಾರ ಸಂಪನ್ನಗೊಂಡಿತು.ವಿಜಯದಶಮಿ ಅಂಗವಾಗಿ ಲಕ್ಷಾಂತರ ಭಕ್ತರು ಯಲ್ಲಮ್ಮಾ ದೇವಿ ಸನ್ನಿಧಿಗೆ ಆಗಮಿಸಿ, ಪೂಜೆ ಸಲ್ಲಿಸಿದರು. ಭÜಕ್ತರ ಹರ್ಷೋದ್ಗಾರದ ಮಧ್ಯೆ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ಜರುಗಿತು.
ಯಲ್ಲಮ್ಮನಗುಡ್ಡ-ಉಗರಗೋಳ ಮಾರ್ಗದಲ್ಲಿರುವ ಬನ್ನಿಮಹಾಂಕಾಳೇಶ್ವರಿ (ಬನ್ನೆಮ್ಮದೇವಿ) ದೇವಸ್ಥಾನದವರೆಗೂ ಅರ್ಚಕರು ಆಯುಧಗಳನ್ನು ಹೊತ್ತು ಮೆರವಣಿಗೆ ಮೂಲಕ ಸಾಗಿದರು. ಅಲ್ಲಿಪೂಜಾ ಕಾರ್ಯಕ್ರಮ ಕೈಗೊಂಡು ನಂತರ ಬನ್ನಿ ಮುಡಿಯುವ ಮೂಲಕ ದಸರಾ ಆಚರಣೆ ಸಂಪನ್ನಗೊಳಿಸಲಾುತು.
ದೇವಸ್ಥಾನ ಉಪಕಾರ್ಯದರ್ಶಿ ನಾಗರತ್ನಾ ಚೋಳಿನ, ಶೀತಲ ಕಡಟ್ಟಿ, ರೋಹಿತ ಪೊಲೇಶಿ, ಆರ್ .ಎಸ್ .ಸವದತ್ತಿ, ತಮ್ಮನಗೌಡ ತಿಪರಾಶಿ, ಸಿ.ಎನ್ .ಕುಲಕರ್ಣಿ, ಏಕನಗೌಡ ಮುದ್ದನಗೌಡ್ರ, ಶಂಕರಗೌಡ ಗಂದಿಗವಾಡ, ಸಿದ್ಧನಗೌಡ ಪಾಟೀಲ, ವೈ.ವೈ.ಕಾಳಪ್ಪನವರ, ರಂಜಿತ ಭಜಂತ್ರಿ, ನಾಗರಾಜ ಬಡೆಪ್ಪನವರ, ಪಿಎಸ್ ಐ ರಾಜು ಪೂಜಾರ, ಎಎಸ್ ಐ ಎನ್ .ವಿ.ಧಾರವಾಡ, ಹನುಮಂತ ಭಜಂತ್ರಿ, ಪಂಡಿತ ಯಡೂರಯ್ಯ, ಚಂದ್ರಶೇಖರ ಗಡಾದಗೌಡ್ರ, ರಾಜನಗೌಡ ಟೋಪಣ್ಣವರ, ಮಾರುತಿ ಹೂಗಾರ, ನಾಗನಗೌಡ ಗಡಾದಗೌಡ್ರ, ಯಲ್ಲಪ್ಪಗೌಡ ಪೊಲೇಶಿ, ಅರ್ಚಕರಾದ ಸೋಮಲಿಂಗ ಕಾರಿಮನಿ, ಅಶೋಕ ಸಂಗಟಿ, ಹಾಗೂ ದೇವಸ್ಥಾನ ಸಿಬ್ಬಂದಿ ಹಾಗೂ ಭಕ್ತರು ಇದ್ದರು.
22ಯುಜಿಎಲ್ 1: ಯಲ್ಲಮ್ಮನಗುಡ್ಡ-ಉಗರಗೋಳ ಮಾರ್ಗದ ಬನ್ನೆಮ್ಮ ದೇವಿ ದೇವಸ್ಥಾನ ಬಳಿ ಬನ್ನಿ ಮುಡಿಯಲಾಯಿತು.