ಶಿಕ್ಷಣ ವ್ಯಕ್ತಿಯ ಜೀವನ ರೂಪಿಸುವುದರ ಜತೆಗೆ ಸಮಾಜ ಮತ್ತು ದೇಶದ ಪ್ರಗತಿಗೂ ಮಹತ್ವದ ಕೊಡುಗೆ ನೀಡುತ್ತದೆ. ಆದ್ದರಿಂದ ಪೋಷಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಶಾಸಕ ಎ.ಮಂಜು ಮನವಿ ಮಾಡಿದರು.
ಸಮೀಪದ ರಾಮನಾಥಪುರ ಕನಕ ಸಮುದಾಯ ಭವನದಲ್ಲಿಅರಕಲಗೂಡು ತಾಲೂಕು ಕುರುಬರ ಸಂಘ, ಕನಕ ನೌಕರರ ಸಂಘ, ಹಾಲುಮತ ಮಹಾಸಭಾ ಹಾಗೂ ರೇವಣ್ಣ ಸಿದ್ದೇಶ್ವರ ಕನಕ ಭವನದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘‘ ದೇಶದ ಬದಲಾವಣೆ ಹಾಗೂ ಸಮಾಜದ ಅಭಿವೃದ್ಧಿ ವಿದ್ಯೆಯಿಂದ ಮಾತ್ರ ಸಾಧ್ಯ. ಪ್ರತಿಯೊಂದು ಕುಟುಂಬದಲ್ಲಿಯೂ ಮಕ್ಕಳು ಉತ್ತಮ ಶಿಕ್ಷಣ ಪಡೆದು ವಿದ್ಯಾವಂತರಾಗಬೇಕು ಹಾಗೂ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಸಮಾಜದ ಮತ್ತು ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು. ಎಲ್ಲಸಮುದಾಯಗಳ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಸಾಧನೆಯನ್ನು ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ. ರಾಮನಾಥಪುರ ಕನಕ ಭವನ ನಿರ್ಮಾಣಕ್ಕೆ ಅತಿ ಹೆಚ್ಚು ಅನುದಾನ ನೀಡಿದ ತೃಪ್ತಿ ನನಗಿದೆ’’ ಎಂದರು.
ತಾವರೆಕೆರೆ ಕಾಳಪ್ಪಸ್ವಾಮಿ ಮಠದ ಶ್ರೀ ಶಿವಪುತ್ರ ಸ್ವಾಮೀಜಿ ಮಾತನಾಡಿ, ‘‘ಯಾರು ಎಷ್ಟೇ ದೊಡ್ಡಮಟ್ಟದ ಸಾಧನೆ ಮಾಡಿದರೂ ತಂದೆ- ತಾಯಿಯನ್ನು ನಿರ್ಲಕ್ಷಿಸಿದಲ್ಲಿನಿಮ್ಮ ವಿದ್ಯೆ ಮತ್ತು ಸಾಧನೆ ವ್ಯರ್ಥವಾಗುತ್ತದೆ. ಪ್ರತಿಯೊಬ್ಬರಲ್ಲಿಸಾಧನೆ ಮಾಡುವ ಸಾಮರ್ಥ್ಯವಿದೆ. ಆದರೆ ಸರಿಯಾದ ಗುರಿ ಹಾಗೂ ಪರಿಶ್ರಮ ಅಗತ್ಯ’’ ಎಂದರು.
ಕನಕ ನೌಕರರ ಸಂಘದ ತಾಲೂಕು ಅಧ್ಯಕ್ಷ ಎಸ್ .ಎನ್ .ಶಿವಕುಮಾರ್ ,ಸಂಸದ ಶ್ರೇಯಸ್ ಪಟೇಲ್ , ಯುವ ವಿಜ್ಞಾನಿ ಡಾ. ಕೋಮಲ್ ಕುಮಾರ್ , ಡಾ.ಮಹದೇಶ್ ಪ್ರಸಾದ್ ಮಾತನಾಡಿದರು.
ಪ್ರತಿಭಾ ಪುರಸ್ಕಾರ: ಇದೇ ಸಂದರ್ಭದಲ್ಲಿಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ, ಪದವಿ, ವೈದ್ಯಕೀಯ ಎಂಜಿನಿಯರಿಂಗ್ , ಬಿ ಫಾಮ್ ರ್ , ಅಗ್ರಿಕಲ್ಚರಲ್ ಫಾಮ್ ರ್ ಸೈನ್ಸ್ ಹಾಗೂ ಎಂ.ಡಿ. ಗೆ ಪ್ರವೇಶ ಹಾಗೂ ಸಿವಿಲ್ ಸವೀರ್ ಸಸ್ ಪರೀಕ್ಷೆ ಬರೆದಿರುವ ಕುರುಬ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ತಾಲೂಕು ಕುರುಬರ ಸಂಘದ ಅಧ್ಯಕ್ಷ ಡಾ.ಎಚ್ .ಎಲ್ .ರವೀಂದ್ರ ಪ್ರಸಾದ್ , ಹಾಸನ ಹಿಮ್ಸ್ ನಿರ್ದೇಶಕ ಡಾ.ಬಿ.ರಾಜಣ್ಣ, ಹಾಸನ ಕೆಎಫ್ ಸಿಎಸ್ ಸಿ ಯ ವ್ಯವಸ್ಥಾಪಕ ಆರ್ .ಡಿ.ಶಿವಕುಮಾರ್ , ಜಿಲ್ಲಾಕುರುಬ ಸಂಘದ ನಿರ್ದೇಶಕ ಬೀರಪ್ಪ, ಯುವ ವಿಜ್ಞಾನಿ ಡಾ.ಕೋಮಲ್ ಕುಮಾರ್ , ಡಾ.ಮಹದೇಶ್ ಪ್ರಸಾದ್ , ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪ್ರಸನ್ನಕುಮಾರ್ , ಕನಕ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಅನಿಲ್ ಕುಮಾರ್ , ಜಿ.ಪಂ.ಮಾಜಿ ಸದಸ್ಯ ಎಸ್ .ಪಿ.ರೇವಣ್ಣ, ಆಲೂರು ತಾಲೂಕು ಕನಕ ನೌಕರ ಸಂಘದ ಅಧ್ಯಕ್ಷ ಶ್ರೀಕಾಂತ್ , ತಾಲೂಕು ಕಾರ ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪಿ.ಶಿವಕುಮಾರ್ , ಪೋಷಕರು, ವಿದ್ಯಾರ್ಥಿಗಳಿದ್ದರು.
ಮಾಜಿ ಸಿಎಂ ಸಿದ್ದರಾಮಯ್ಯ ಕುರಿತ ಸ್ಪಿಂಗ್ ಆಪರೇಷನ್ ನಂಬಲು ಅಸಾಧ್ಯ. ಅವರ ರಾಜಕೀಯ ಏಳಿಗೆಯನ್ನು ಸಹಿಸಲಾಗದವರು ಏನೇನೋ ಹೇಳುತ್ತಿದ್ದಾರೆ. ಅವರ ಗೌರವಕ್ಕೆ ಚ್ಯುತಿ ಬರಲು ಬಿಡುವುದಿಲ್ಲ.