ಜಿಲ್ಲಾದ್ಯಂತ ಸಕಲ ಸಿದ್ಧತೆ, ಮತಗಟ್ಟೆ ತಲುಪಿದ ಸಿಬ್ಬಂದಿ, ಜಿಲ್ಲಾದ್ಯಂತ ಹಕ್ಕು ಚಲಾಯಿಸಲಿರುವ 3,326 ಮತದಾರರು
ಈಶಾನ್ಯ ಶಿಕ್ಷಕರ ಕ್ಷೇತ್ರ ಚುನಾವಣೆ, ಮತದಾನ ಇಂದುವಿಕ ಸುದ್ದಿಲೋಕ ಹೊಸಪೇಟೆ (ವಿಜಯನಗರ)
ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಯ ಮತದಾನ ಅ.23 ರಂದು ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆಯಲಿದ್ದು, ಚುನಾವಣೆಯನ್ನು ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸಲು ಜಿಲ್ಲಾಡಳಿತ ಹಾಗೂ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಜಿಲ್ಲಾದ್ಯಂತ ಒಟ್ಟು 18 ಮತಗಟ್ಟೆಗಳಲ್ಲಿಮತದಾನ ಪ್ರಕ್ರಿಯೆ ಬೆಳಗ್ಗೆಯಿಂದಲೇ ಆರಂಭವಾಗಲಿದ್ದು, ಜಿಲ್ಲಾಡಳಿತದಿಂದ ಸಿದ್ಧತೆ ಮಾಡಿಕೊಂಡಿದ್ದು, ಅಗತ್ಯ ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿ ಗುರುವಾರ ಸಂಜೆಯೇ ತಮಗೆ ನಿಯೋಜಿಸಲಾದ ಮತಗಟ್ಟೆಗಳಿಗೆ ತಲುಪಿದ್ದಾರೆ.
ಜಿಲ್ಲಾದ್ಯಂತ ಒಟ್ಟು 3,326 ಮತದಾರರಿದ್ದು, ಇದರಲ್ಲಿಒಟ್ಟು ಪುರುಷ ಮತದಾರರು 2,190 ಹಾಗೂ 1,136 ಮಹಿಳಾ ಮತದಾರರಿದ್ದು, ಪುರುಷ ಮತದಾರರ ಸಂಖ್ಯೆಯೇ ಹೆಚ್ಚಾಗಿದೆ. ಹೊಸಪೇಟೆ ತಾಲೂಕಿನಲ್ಲಿಒಟ್ಟು 871 ಮತದಾರರಿದ್ದು, 416 ಪುರುಷರು, 455 ಮಹಿಳೆಯರೊಂದಿಗೆ ಜಿಲ್ಲೆಯಲ್ಲೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ತಾಲೂಕಾಗಿದೆ. ಹರಪನಹಳ್ಳಿ ತಾಲೂಕಿನಲ್ಲಿಒಟ್ಟು 627 ಮತದಾರರಲ್ಲಿ454 ಪುರುಷರು, 173 ಮಹಿಳೆಯರು, ಕೊಟ್ಟೂರು ತಾಲೂಕಿನಲ್ಲಿಒಟ್ಟು 522 ಮತದಾರರಲ್ಲಿ379 ಪುರುಷರು, 143 ಮಹಿಳೆಯರು, ಹಡಗಲಿ ತಾಲೂಕಿನಲ್ಲಿಒಟ್ಟು 478 ಮತದಾರರಲ್ಲಿ341 ಪುರುಷರು, 137 ಮಹಿಳೆಯರು ಹಾಗೂ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿಒಟ್ಟು 476 ಮತದಾರರಲ್ಲಿ337 ಪುರುಷರು, 139 ಮಹಿಳೆಯರು, ಕೂಡ್ಲಿಗಿ ತಾಲೂಕಿನಲ್ಲಿಒಟ್ಟು 352 ಮತದಾರರಲ್ಲಿ263 ಪುರುಷರು, 89 ಮಹಿಳೆಯರಿದ್ದಾರೆ.
18 ಮತಗಟ್ಟೆ ಕೇಂದ್ರಗಳಲ್ಲಿಬಿಗಿ ಭದ್ರತೆ:
ಜಿಲ್ಲೆಯ ಒಟ್ಟು 18 ಮತಗಟ್ಟೆ ಕೇಂದ್ರಗಳಿಗೆ ಅಗತ್ಯ ಮತಪೆಟ್ಟಿಗೆಗಳು, ಲೇಖನ ಸಾಮಗ್ರಿಗಳು ಹಾಗೂ ಮೂಲಸೌಕರ್ಯಗಳನ್ನು ರವಾನಿಸಲಾಗಿದ್ದು, ಹೊಸಪೇಟೆ ತಾಲೂಕಿನ ಚಿತ್ತವಾಡಿಗಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿಅತಿ ಹೆಚ್ಚು ಅಂದರೆ 747 ಮತದಾರರಿದ್ದಾರೆ. ಹರಪನಹಳ್ಳಿಯ ಜೂನಿಯರ್ ಕಾಲೇಜು ಮುಖ್ಯ ಸಭಾಂಗಣದಲ್ಲಿ346 ಹಾಗೂ ಕೊಟ್ಟೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ491 ಮತದಾರರು ನೋಂದಾಯಿಸಿಕೊಂಡಿದ್ದಾರೆ. ಪ್ರತಿಯೊಂದು ಮತಗಟ್ಟೆಯಲ್ಲೂಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಪೊಲೀಸ್ ಬಂದೋಬಸ್ ್ತ ಕೈಗೊಳ್ಳಲಾಗಿದೆ.
ಮತದಾರರ ಪಟ್ಟಿಯಲ್ಲಿಹೆಸರಿರುವ ಶಿಕ್ಷಕರು ನಿಗದಿತ ಸಮಯದೊಳಗೆ ತಮ್ಮ ಗುರುತಿನ ಚೀಟಿಯೊಂದಿಗೆ ಮತಗಟ್ಟೆಗೆ ಆಗಮಿಸಿ, ತಪ್ಪದೇ ಮತದಾನದ ಹಕ್ಕನ್ನು ಚಲಾಯಿಸುವಂತೆ ಜಿಲ್ಲಾಡಳಿತ ಕೋರಿದೆ.
---
ತಾಲೂಕುವಾರು ಮತದಾರರ ವಿವರ
ತಾಲೂಕು ಪುರುಷರು ಮಹಿಳೆಯರು ಒಟ್ಟುಮತದಾರರು
ವಿಜಯನಗರ 416 455 871
ಹರಪನಹಳ್ಳಿ 454 173 627
ಕೊಟ್ಟೂರು 379 143 522
ಹಡಗಲಿ 341 137 478
ಹಗರಿಬೊಮ್ಮನಹಳ್ಳಿ 337 139 476
ಕೂಡ್ಲಿಗಿ 263 89 352
ಒಟ್ಟು 2,190 1,136 3,326
ಧಿ
ವಿಜೆಎನ್ 22ಜಯಪ್ಪ14: ಹೊಸಪೇಟೆ ನಗರದ ಚಿತ್ತವಾಡ್ಗಿ ಪ್ರದೇಶದ ಮತಗಟ್ಟೆ ಕೇಂದ್ರಕ್ಕೆ ತೆರಳಿರುವ ಚುನಾವಣಾ ಸಿಬ್ಬಂದಿ.
ವಿಜೆಎನ್ 22ಜಯಪ್ಪ15: ಕೂಡ್ಲಿಗಿಯಲ್ಲಿಚುನಾವಣಾ ಸಿಬ್ಬಂದಿ ಮತಪೆಟ್ಟಿಗೆ ಸೇರಿದಂತೆ ಅಗತ್ಯ ಸಾಮಗ್ರಿಗಳೊಂದಿಗೆ ತಮ್ಮ ನಿಯೋಜಿತ ಮತಗಟ್ಟೆ ಕೇಂದ್ರಗಳತ್ತ ಗುರುವಾರ ತೆರಳಿದರು.