ಸಾಗರ: ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅಂತರಂಗ ಪ್ರಕಾಶನದಿಂದ ಅ. 23ರಂದು ಸಂಜೆ 4 ಗಂಟೆಗೆ ಸಮೀಪದ ಕುಗ್ವೆ -ಅಂಬಾಪುರದ ಸಿಂಗಾಪುರ ರಸ್ತೆಯ ‘ಬಹುಮುಖಿ’ಯಲ್ಲಿನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ರಂಗಕರ್ಮಿ, ಹೆಗ್ಗೋಡು ನೀನಾಸಮ್ ಪ್ರಾಂಶುಪಾಲ ಡಾ.ಎಂ.ಗಣೇಶ್ ಅವರಿಗೆ ಅಭಿನಂದನೆ ಹಾಗೂ ಅವರೊಂದಿಗೆ ರಂಗಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.ಪತ್ರಕರ್ತ ಎಂ. ರಾಘವೇಂದ್ರ ಅವರು ಡಾ. ಗಣೇಶ್ ಅವರ ರಂಗಭೂಮಿ ಬದುಕು ಮತ್ತು ಸಾಧನೆ ಕುರಿತು ಮಾತನಾಡಲಿದ್ದಾರೆ. ಇದೇ ಸಂದರ್ಭ ಸಾಹಿತಿ ಅ.ರಾ. ಶ್ರೀನಿವಾಸ ಅವರ ‘ಅವಲೋಕನ’ ಪುಸ್ತಕ ಬಿಡುಗಡೆಗೊಳ್ಳಲಿದೆ. ತಾಲೂಕು ಕಸಾಪ ಅಧ್ಯಕ್ಷ ವಿ.ಟಿ. ಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ.