ವಿಕ ಸುದ್ದಿಲೋಕ ಮಾಲೂರುಕರ್ನಾಟಕ ವಿಧಾನ ಪರಿಷತ್ತಿನ ಕರ್ನಾಟಕ ಆಗ್ನೇಯ ಪದವೀಧರ ಕ್ಷೇತ್ರದ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಲು ತಾಲೂಕಿನ 6 ಮತಗಟ್ಟೆಗಳಲ್ಲಿಅಗತ್ಯ ಎಲ್ಲಾಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಎಲ್ಲಾಮತಗಟ್ಟೆಗಳಿಗೂ ಪರಿಕರಗಳೊಂದಿಗೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಲುಪಿದ್ದಾರೆ ಎಂದು ತಹಸೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಎಂ.ವಿ. ರೂಪ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅ.23ರಂದು ಬೆಳಗ್ಗೆ 8ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಮತದಾರರ ಪಟ್ಟಿಯಲ್ಲಿಹೆಸರು ನೋಂದಾಯಿಸಿರುವ ಪದವೀಧರ ಮತದಾರರು ಯಾವುದೇ ಆತಂಕವಿಲ್ಲದೆ ಮತ ಚಲಾಯಿಸಲು ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಸಮರ್ಪಕ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿಎರಡು ಮತಗಟ್ಟೆಗಳನ್ನು ತೆರೆಯಲಾಗಿದೆ. 142ನೇ ಮತಗಟ್ಟೆಯಲ್ಲಿಮತದಾರರ ಪಟ್ಟಿಯ ಕ್ರಮ ಸಂಖ್ಯೆ 1 ರಿಂದ 852ರವರೆಗೆ ಹಾಗೂ ಮತ್ತೊಂದು ಮತಗಟ್ಟೆಯಲ್ಲಿಕ್ರಮ ಸಂಖ್ಯೆ 853 ರಿಂದ 1703ರವರೆಗೆ ಇರುವ ಮತದಾರರಿಗೆ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗಿದೆ. ಇದಲ್ಲದೆ, ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜು, ಮಾಲೂರಿನಲ್ಲಿಕ್ರಮ ಸಂಖ್ಯೆ 1704 ರಿಂದ 2584ರವರೆಗೆ ಇರುವ ಮತದಾರರಿಗಾಗಿ ಮತ್ತೊಂದು ಮತಗಟ್ಟೆ ಸ್ಥಾಪಿಸಲಾಗಿದೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಲಕ್ಕೂರು (143ನೇ ಮತಗಟ್ಟೆ), ಕರ್ನಾಟಕ ಪಬ್ಲಿಕ್ ಶಾಲೆ, ಮಾಸ್ತಿ (144ನೇ ಮತಗಟ್ಟೆ) ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು, ಟೇಕಲ್ (145ನೇ ಮತಗಟ್ಟೆ)ಗಳಲ್ಲಿಮತದಾನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಒಟ್ಟು 4392 ಪದವೀಧರ ಮತದಾರರು ಮತದಾರರ ಪಟ್ಟಿಯಲ್ಲಿನೋಂದಾಯಿಸಿಕೊಂಡಿದ್ದಾರೆ. ನಗರ ಪ್ರದೇಶದಲ್ಲಿಮೂರು, ಮಾಸ್ತಿಯಲ್ಲಿಒಂದು, ಲಕ್ಕೂರಿನಲ್ಲಿಒಂದು ಹಾಗೂ ಟೇಕಲ್ ನಲ್ಲಿಒಂದು ಸೇರಿದಂತೆ ಒಟ್ಟು ಆರು ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಚುನಾವಣೆಯನ್ನು ಶಾಂತಿಯುತ ಹಾಗೂ ಯಶಸ್ವಿಯಾಗಿ ನಡೆಸಲು 3 ಎಫ್ ಎಸ್ ಟಿ, 1ಪಿಎಸ್ ಟಿ ಹಾಗೂ 1 ಎಸಿಪಿಟಿ ತಂಡಗಳನ್ನು ರಚಿಸಲಾಗಿದ್ದು, ಮತಗಟ್ಟೆಗಳ ಬಳಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸ್ ಬಂದೋಬಸ್ ್ತ ಕೂಡ ಕಲ್ಪಿಸಲಾಗಿದೆ. ನಗರ ಮೂರು ಮತಗಟ್ಟೆಗಳು ಹೋಬಳಿ ಕೇಂದ್ರಗಳಲ್ಲಿತಲಾ ಒಂದು ಮತಗಟ್ಟೆ ಸೇರಿದಂತೆ ಆರು ಮತಗಟ್ಟೆಗಳಿಗೆ ಚುನಾವಣಾ ಪರಿಕರಗಳೊಂದಿಗೆ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿ ತಲುಪಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ತಾಲೂಕು ಕಚೇರಿಯ ಚುನಾವಣಾ ವಿಭಾಗವನ್ನು ಂ8151-232699 ಸಂಖ್ಯೆಯಲ್ಲಿಸಂಪರ್ಕಿಸಬಹುದು ಎಂದು ಅವರು ಮನವಿ ಮಾಡಿದ್ದಾರೆ.
22 ಮಾಲೂರು ಫೋಟೋ 3: ಮಾಲೂರು ತಾಲೂಕು ಕಚೇರಿಯ ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಎಂ.ವಿ. ರೂಪ. ಮತಗಟ್ಟೆಯನ್ನು ವೀಕ್ಷಿಸುತ್ತಿರುವುದು.