ಬಿ.ಎಂ.ರಸ್ತೆ ವಿಸ್ತರಣೆಗಾಗಿ ಪರಿಶೀಲನೆ

Contributed by: arunraxidi1@gmail.com|Vijaya Karnataka•
inspection for bm road expansion in sakaleshpur
ಬಿ.ಎಂ.ರಸ್ತೆ ವಿಸ್ತರಣೆಗಾಗಿ ಪರಿಶೀಲನೆ

*ಪೌರಾಡಳಿತ ಇಲಾಖೆಯ ಮುಖ್ಯ ಎಂಜಿನಿಯರ್ ಪುರುಷೋತ್ತಮ್ ದಾಸ್ ಹೆಗ್ಗಡೆ ಅವಲೋಕನ
ವಿಕ ಸುದ್ದಿಲೋಕ ಸಕಲೇಶಪುರ

ಪಟ್ಟಣದ ಬಿ.ಎಂ.ರಸ್ತೆ ವಿಸ್ತರಣೆ ಸಂಬಂಧ ಪೌರಾಡಳಿತ ಇಲಾಖೆಯ ಮುಖ್ಯ ಎಂಜಿನಿಯರ್ ಪುರುಷೋತ್ತಮ್ ದಾಸ್ ಹೆಗ್ಗಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಕೊಲ್ಲಹಳ್ಳಿ ಗ್ರಾಮದ ಬೈಪಾಸ್ ನಿಂದ ಕೆಂಪೇಗೌಡ ಪ್ರತಿಮೆವರೆಗೆ ಪಟ್ಟಣದೊಳಗೆ ಹಾದು ಹೋಗಿರುವ ಬಿ.ಎಂ.ರಸ್ತೆ ವಿಸ್ತರಣೆ ಆಗಬೇಕು ಎಂದು ಸ್ಥಳೀಯರು ಕಳೆದ 3 ದಶಕಗಳಿಂದ ಒತ್ತಾಯಿಸುತ್ತಿದ್ದಾರೆ. ಇತ್ತೀಚೆಗೆ ಪಟ್ಟಣಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೂ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮುರುಳಿ ಮೋಹನ್ ಅವರು ರಸ್ತೆ ವಿಸ್ತರಣೆಗೆ ಆಗ್ರಹಿಸಿ ಮನವಿ ಪತ್ರ ಸಲ್ಲಿಸಿದ್ದರು.

ಈ ಸಂಬಂಧ ಜಿಲ್ಲಾಧಿಕಾರಿ ಕೆ.ಎಸ್ .ಲತಾಕುಮಾರಿ ಅವರು ಪೌರಾಡಳಿತ ಸಚಿವಾಲಯಕ್ಕೆ ವರದಿ ಕಳುಸಿದ್ದರು. ಹೀಗಾಗಿ ಪೌರಾಡಳಿತ ಇಲಾಖೆ ಮುಖ್ಯ ಎಂಜಿನಿಯರ್ ಖುದ್ದು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಸಮಸ್ಯೆ ವಿವರಿಸಿದ ಸ್ಥಳೀಯರು: ಬೆಂಗಳೂರು-ಮಂಗಳೂರು ರಾಷ್ಟಿ್ರೕಯ ಹೆದ್ದಾರಿ ನಮ್ಮ ಊರಿನ ಮೂಲಕವೇ ಹಾದು ಹೋಗುತ್ತದೆ. ಆದರೆ ಈ ರಸ್ತೆ ಕಿರಿದಾಗಿರುವುದರಿಂದ ಪಟ್ಟಣದೊಳಗೆ ವಾಹನಗಳ ಸಂಚಾರಕ್ಕೆ ಭಾರಿ ಸಮಸ್ಯೆ ಉಂಟಾಗುತ್ತಿದೆ. ವಾಹನಗಳನ್ನು ನಿಲ್ಲಿಸುವುದಕ್ಕೆ ಸಮಸ್ಯೆ ಇದೆ. ಹೀಗಾಗಿ ಪ್ರವಾಸಿಗರು ಪಟ್ಟಣದೊಳಗೆ ಬರುವುದೇ ಇಲ್ಲ. ಬೈಪಾಸ್ ಮೂಲಕ ಜಿಲ್ಲಾಕೇಂದ್ರ ಹಾಸನಕ್ಕೆ ಹೋಗುತ್ತಾರೆ. ಇದರಿಂದ ವ್ಯಾಪಾರ ವಹಿವಾಟಿಗೆ ಹೊಡೆತ ಬಿದ್ದಿದೆ ಎಂದು ತಾಲೂಕು ವರ್ತಕರ ಸಂಘದ ಮಾಜಿ ಅಧ್ಯಕ್ಷ ಎಚ್ .ಎಚ್ .ಉದಯ್ ಹಾಗೂ ಸಾಮಾಜಿಕ ಹೋರಾಟಗಾರ ಆಳ್ವ ಅವರು ಮುಖ್ಯ ಎಂಜಿನಿಯರ್ ಗಮನಕ್ಕೆ ತಂದರು.

ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಮುರುಳಿ ಮೋಹನ್ ಮಾತನಾಡಿ, ರಸ್ತೆ ವಿಸ್ತರಣೆ ಸಂಬಂಧ ಡಿಪಿಆರ್ ಸಿದ್ಧಪಡಿಸುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆ ಮುಖ್ಯಾಧಿಕಾರಿಗಳಿಗೆ ಮುಖ್ಯ ಎಂಜಿನಿಯರ್ ಸೂಚಿಸಿದ್ದಾರೆ. ಜಾಗ ಕಳೆದುಕೊಳ್ಳುವವರಿಗೆ ಪರಿಹಾರ ನೀಡಿಯೇ ರಸ್ತೆ ವಿಸ್ತರಣೆ ಮಾಡುವಂತೆ ಮನವಿ ಮಾಡಲಾಗಿದೆ’’ ಎಂದರು.

ಉಪವಿಭಾಗಾಧಿ ಕಾರಿ ಹುಲ್ಲಮನಿ ತಿಮ್ಮಣ್ಣ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸೈಯದ್ ಮುಫೀಜ್ , ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು, ಪುರಸಭೆ ಮುಖ್ಯಾಧಿ ಕಾರಿ ಮಹೇಶ್ವರಪ್ಪ ಹಾಗೂ ಇತರರು ಹಾಜರಿದ್ದರು.

ಫೊಟೋ(ಊಓ21ಏ1)-ಸಕಲೇಶಪುರದ ಬಿ.ಎಂ. ರಸ್ತೆ ವಿಸ್ತರಣೆಗೆ ಸಂಬಂಧಿಸಿದಂತೆ ಪೌರಾಡಳಿತ ಇಲಾಖೆಯ ಮುಖ್ಯ ಎಂಜಿನಿಯರ್ ಪುರುಶೋತ್ತಮ್ ದಾಸ್ ಹೆಗ್ಗಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.