ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ

Contributed by: sureshdevaramani@gmail.com|Vijaya Karnataka•
happiness and peace through religious activities
ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ

*ಶ್ರೀಯೋಗಿರಾಜೇಂದ್ರ ಶಿವಾಚಾರ್ಯ ಹೇಳಿಕೆ
ವಿಕ ಸುದ್ದಿಲೋಕ ಕೊಟ್ಟೂರು

‘‘ಧಾರ್ಮಿಕ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಿಗುವುದೇ ಹೊರತು ಐಷಾರಾಮಿ ಬದುಕಿನಿಂದಲ್ಲ,’’ ಎಂದು ಕೊಟ್ಟೂರು

ಭೂತಬುಜಂಗ ಹಿರೇಮಠದ ಶ್ರೀಯೋಗಿರಾಜೇಂದ್ರ ಶಿವಾಚಾರ್ಯರು ಹೇಳಿದರು.

ಪಟ್ಟಣದ ಮೇಗಳಗೇರಿಯಲ್ಲಿನ ಬಿಕ್ಕಿಮರಡಿ ಜರ್ಮಲಿ ದುರುಗಮ್ಮ ದೇವಾಲಯ ಆವರಣದಲ್ಲಿಭೀಮಣ್ಣ ಗಜಾಪುರ ರಚನೆಯ

ಭಕ್ತಿಗೀತೆಗಳ ಸಿಡಿ ಬಿಡುಗಡೆಗೊಳಿಸಿ ಮಾತನಾಡಿದರು.

‘‘ಬಿಕ್ಕಿಮರಡಿ ದುರುಗಮ್ಮ ದೇವಸ್ಥಾನಕ್ಕೆ ಧಾರ್ಮಿಕ ಹಿನ್ನೆಲೆ ಮಾತ್ರವಲ್ಲದೇ, ಜರ್ಮಲಿ ಪಾಳೇಗಾರರ ದಂಡಿನಲ್ಲಿಬಂದ ದುರುಗಮ್ಮ ಎಂಬ ಐತಿಹಾಸಿಕ ಹಿನ್ನೆಲೆ ಇರುವುದು ರೋಚಕದ ಸಂಗತಿ. ಕೆರೆಯ ವಿಶಾಲವಾದ ಅಂಗಳದಲ್ಲಿರುವ ದೇವಿಯ ದೇವಸ್ಥಾನದ ಸುತ್ತ ಗಿಡ ಮರಗಳನ್ನು ಬೆಳೆಸಿ ಪ್ರಕೃತಿ ಸೌಂದರ್ಯ ಹೆಚ್ಚಿಸಬೇಕು,’’ ಎಂದರು.

ಲೇಖಕ ಭೀಮಣ್ಣ ಗಜಾಪುರ ಮಾತನಾಡಿ, ‘‘ಭಕ್ತಿಗೀತೆಗಳ ರಚನೆ ಮೂಲಕ ಲಕ್ಷಾಂತರ ಭಕ್ತರ ಮನಸ್ಸನ್ನು ಮುಟ್ಟಿರುವ ತೃಪ್ತಿ ನನಗಿದೆ. ಭಕ್ತಿಯ ಮಾರ್ಗದೊಂದಿಗೆ ಸತ್ಯದ ಮಾರ್ಗದಲ್ಲಿನಾವೆಲ್ಲನಡೆಯಬೇಕು,’’ ಎಂದರು. ದೇವಸ್ಥಾನದ ಬಿ.ಮಲ್ಲಿಕಾರ್ಜುನ ಪ್ರಾಸ್ತಾವಿಕ ಮಾತನಾಡಿದರು. ಮುಖಂಡರಾದ ಫಕ್ಕೀರಪ್ಪ, ರಾಂಪುರ ಮೂಗಜ್ಜ, ಸುಂಕದಕಲ್ಲುನಾಗರಾಜ, ಮೂಗಪ್ಪ, ಕೋವಿಬೊಮ್ಮಪ್ಪ, ನಾಗರಾಜ, ಬೆನಕನಹಳ್ಳಿ ಹಾಲಸ್ವಾಮಿ ಇತರರು ಇದ್ದರು.

---

ವಿಎನ್ ಆರ್ 22ಕೆಟಿಆರ್ 2: ಕೊಟ್ಟೂರಿನ ಬಿಕ್ಕಿಮರಡಿ ದುರುಗಮ್ಮ ದೇವಿ ಕುರಿತು ಭೀಮಣ್ಣ ಗಜಾಪುರ ರಚಿಸಿ ತಯಾರಿಸಿದ ಸಿಡಿಯನ್ನು ಶ್ರೀಯೋಗಿರಾಜೇಂದ್ರ ಶಿವಾಚಾರ್ಯರು ಬಿಡುಗಡೆಗೊಳಿಸಿದರು.