ವಿಕ ಸುದ್ದಿಲೋಕ ರಟ್ಟೀಹಳ್ಳಿಮಠ ಮಂದಿರಗಳು ಮನುಷ್ಯನಿಗೆ ಶಾಂತಿ ನೆಮ್ಮದಿ ನೀಡುವ ಪವಿತ್ರ ಸ್ಥಳಗಳಾಗಿವೆ. ನಮ್ಮ ಸಂಸ್ಕೃತಿ, ಸಂಪ್ರದಾಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿಹಬ್ಬಗಳು ನಡೆಯುತ್ತಿರುವುದು ಶ್ಲಾಘನೀಯ ಎಂದು ಶಾಸಕ ಯು.ಬಿ.ಬಣಕಾರ ಹೇಳಿದರು.
ತಾಲೂಕಿನ ಕುಡಪಲಿ ಗ್ರಾಮದ ಶ್ರೀಮರಡಿ ತಿಮ್ಮಪ್ಪನ ಸನ್ನಿಧಿಯಲ್ಲಿನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿದೇವಸ್ಥಾನ ಕಮಿಟಿಯವರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
‘‘ಧರ್ಮೋ ರಕ್ಷತಿ ರಕ್ಷಿತಃ, ಧರ್ಮವನ್ನು ನಾವು ಕಾಪಾಡಿದರೆ, ಧರ್ಮ ನಮ್ಮನ್ನು ಕಾಪಾಡುತ್ತದೆ. ಎಲ್ಲರೂ ಉತ್ತಮ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿಧರ್ಮದ ಹಾದಿಯಲ್ಲಿನಡೆಯಬೇಕು. ರಟ್ಟೀಹಳ್ಳಿ-ಹಿರೇಕೆರೂರು ತಾಲೂಕಿನಲ್ಲಿಇಲ್ಲಿಯವರೆಗೆ ಸುಮಾರು 300ಕ್ಕೂ ಹೆಚ್ಚು ದೇವಸ್ಥಾನಗಳ ಅಭಿವೃದ್ಧಿಗೆ ಅನುದಾನ ಒದಗಿಸಲಾಗಿದೆ. ಕುಡಪಲಿಯ ಶ್ರೀ ಮರಡಿ ತಿಮ್ಮಪ್ಪನ ದೇವಸ್ಥಾನದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿಹೆಚ್ಚಿನ ಗಮನ ಕೊಡಲಾಗುವುದು,’’ ಎಂದ ಅವರು, ಬೋರವೆಲ್ ಕೊರಸಿ ಕೊಡುವ ಭರವಸೆ ನೀಡಿದರು.
ಗಿರಿಯಪ್ಪ ಚೌಡಕ್ಕನವರ, ಅಧ್ಯಕ್ಷ ಭೀಮಪ್ಪ ದೊಡ್ಡದ್ಯಾವಣ್ಣನವರ, ಉಪಾಧ್ಯಕ್ಷ ಶರಣಪ್ಪ ಅಡವೆಕ್ಕನವರ, ಕಾರ್ಯದರ್ಶಿ ಈರಪ್ಪ ಸೊಂಡೇರ, ಮಹೇಶ್ವರ ಕೆಂಚರಡ್ಡೇರ, ನಿವೃತ್ತ ಶಿಕ್ಷಕ ಮಹೇಶ್ವರ ಮೆಣಸಿನಾಳ ಸೇರಿದಂತೆ ದೇವಸ್ಥಾನ ಕಮಿಟಿ ಸದಸ್ಯರು, ಗ್ರಾಮದ ಹಿರಿಯರು, ಮುಖಂಡರು ಮತ್ತು ಸಾವಿರಾರು ಭಕ್ತರು ಉಪಸ್ಥಿತರಿದ್ದರು.
ಬನ್ನಿ ಮುಡಿಯುವ ಹಬ್ಬ;
ಕುಡುಪಲಿ ಗ್ರಾಮದ ಗಡಿ ಅಂಚಿನ ಬೆಟ್ಟದ ಮೇಲಿರುವ ಮರಡಿ ತಿಮ್ಮಪ್ಪನ ದೇವಸ್ಥಾನದ ಆವರಣದಲ್ಲಿಗುರುವಾರ ಸಂಜೆ ಬನ್ನಿ ಮುಡಿಯುವ ಹಬ್ಬ ಸಂಭ್ರಮದಿಂದ ಜರುಗಿತು. ಬೆಳಗ್ಗೆಯಿಂದ ತಿಮ್ಮಪ್ಪನಿಗೆ ವಿಶೇಷ ಪೂಜೆಗಳು ನೆರವೇರಿದವು. ಮಧ್ಯಾಹ್ನ 12ರ ಬಳಿಕ ಕುಡುಪಲಿ ಸೇರಿದಂತೆ ಸುತ್ತಮುತ್ತಲಿನ ಭಕ್ತರು ಚಕ್ಕಡಿ, ಟ್ರ್ಯಾಕ್ಟರ್ , ದ್ವಿಚಕ್ರ, ತ್ರಿಚಕ್ರ ವಾಹನ ಸೇರಿದಂತೆ ವಿವಿಧ ವಾಹನಗಳಲ್ಲಿಬಂದು ತಿಮ್ಮಪ್ಪನ ದರ್ಶನ ಪಡೆದರು. ಶ್ರೀವೀರಮಹೇಶ್ವರನ ಪಲ್ಲಕ್ಕಿ ಮೆರವಣಿಗೆ ತಿಮ್ಮಪ್ಪನ ಸನ್ನಿಧಿಗೆ ಬಂದ ನಂತರ ವಿಶೇಷ ಪೂಜೆ ಸಲ್ಲಿಸಲಾಯಿತು.
ಫೋಟೋ ಶೀರ್ಷಿಕೆ:-ಅ.22.ರಟ್ಟೀಹಳ್ಳಿ.12-
ಕುಡಪಲಿ ಗ್ರಾಮದ ಶ್ರೀ ಮರಡಿ ತಿಮ್ಮಪ್ಪನ ಸನ್ನಿಧಿಯಲ್ಲಿಗುರುವಾರ ನಡೆದ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿಶಾಸಕ ಯು.ಬಿ.ಬಣಕಾರ ಮಾತನಾಡಿದರು.