ಇದ್ದೂ ಇಲ್ಲದಂತಾದ ಸಿಸಿ ಕ್ಯಾಮೆರಾ

Contributed by: tirupati8886@gmail.com|Vijaya Karnataka•
malfunctioning cctv camera in balutagi village leads to rampant theft
ಬಳೂಟಗಿ ಗ್ರಾಮದಲ್ಲಿಹೆಚ್ಚಿದ ಕಳ್ಳತನ , ಸಾರ್ವಜನಿಕರ ಆತಂಕ

ಇದ್ದೂ ಇಲ್ಲದಂತಾದ ಸಿಸಿ ಟಿವಿ ಕ್ಯಾಮೆರಾ
ವಿಕ ಸುದ್ದಿಲೋಕ ಮುದೇನೂರು

ಶಿರಗುಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಳೂಟಗಿ ಗ್ರಾಮದ ಚನ್ನಮ್ಮ ವೃತ್ತದಲ್ಲಿಅಳವಡಿಸಿರುವ ಸಿಸಿ ಟಿವಿ ಕ್ಯಾಮೆರಾ ಸಮರ್ಪಕವಾಗಿ ಕಾರ್ಯನಿರ್ವಹಿಸದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ಕಿತ್ತೂರು ರಾಣಿ ಚನ್ನಮ್ಮ ಮೂರ್ತಿ ಇರುವ ವೃತ್ತದಲ್ಲಿವಾಹನ ಹಾಗೂ ಜನರ ಸಂಚಾರದ ಮೇಲೆ ನಿಗಾ ಇಡುವುದು, ಕಳ್ಳತನ ಮತ್ತು ಅಹಿತಕರ ಘಟನೆಗಳಿಗೆ ಕಡಿವಾಣ ಹಾಕುವುದು ಸಿಸಿ ಟಿವಿ ಕ್ಯಾಮೆರಾ ಅಳವಡಿಕೆಯ ಉದ್ದೇಶವಾಗಿತ್ತು. ಆದರೆ, ಕಳೆದ ನಾಲ್ಕು ತಿಂಗಳಲ್ಲಿಮೋಟಾರ್ ಕೇಬಲ್ , ಪಂಪ್ ಸೆಟ್ ಮೋಟಾರ್ ಹಾಗೂ ಲಾರಿ ಬ್ಯಾಟರಿ ಕಳವು ಪ್ರಕರಣಗಳು ನಡೆದಿವೆ. ರಾತ್ರಿ 11ರಿಂದ ಬೆಳಗಿನ ಜಾವ 5ರವರೆಗಿನ ಚಟುವಟಿಕೆಗಳು ಸಿಸಿ ಟಿವಿ ಕ್ಯಾಮೆರಾದಲ್ಲಿಸೆರೆಯಾಗುತ್ತಿಲ್ಲಎಂಬ ಆರೋಪ ಕೇಳಿಬಂದಿದೆ. ಸಿಸಿ ಟಿವಿ ಕ್ಯಾಮೆರಾವನ್ನು ಕೆಲವರ ಅನುಕೂಲಕ್ಕೆ ತಕ್ಕಂತೆ ನಿಯಂತ್ರಿಸಲಾಗುತ್ತಿದೆ ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

‘‘ಸಿಸಿ ಟಿವಿ ಕ್ಯಾಮೆರಾ ದಿನದ 24 ಗಂಟೆಯೂ ಕಾರ್ಯನಿರ್ವಹಿಸುವಂತೆ ಸೆಟ್ಟಿಂಗ್ ಮಾಡಿಸಿ, ಯಾರು ನಿರ್ವಹಿಸುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು,’’ ಎಂದು ಕುಷ್ಟಗಿ ಪಿಎಸ್ ಐ ಹನುಮಂತಪ್ಪ ತಳವಾರ ತಿಳಿಸಿದ್ದಾರೆ.

.................

ಪೋಟೊ ಶಿರ್ಷಿಕೆ

ಕೆಪಿಎಲ್ 22ಎಮಡಿಆರ್ 2

ಮುದೇನೂರು ಸಮೀಪದ ಬಳೂಟಗಿ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವೃತ್ತ.

.................

3-

ಬಳೂಟಗಿ ಗ್ರಾಮದ ಚನ್ನಮ್ಮ ವೃತ್ತದ ಹಿಂಭಾಗದಲ್ಲಿಅಳವಡಿಸಿದ ಸಿಸಿ ಟಿವಿ ಕ್ಯಾಮೆರಾ.