ಹೊಸಕೋಟೆಯಲ್ಲಿವಿಜಯದಶಮಿ ಅಂಗವಾಗಿ ಪಲ್ಲಕ್ಕಿ ಉತ್ಸವ, ಬನ್ನಿ ಮರಕ್ಕೆ ಪೂಜೆವಿಕ ಸುದ್ದಿಲೋಕ ಹೊಸಕೋಟೆ
ವಿಜಯದಶಮಿ ಅಂಗವಾಗಿ ಹೊಸಕೋಟೆ ಶ್ರೀ ಅವಿಮುಕ್ತೇಶ್ವರಸ್ವಾಮಿ ಉತ್ಸವ ಅದ್ಧೂರಿಯಾಗಿ ನಡೆಯಿತು.
ಅವಿಮುಕ್ತೇಶ್ವರಸ್ವಾಮಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವಿ.ವಿಜಯ ಕುಮಾರ್ ಹಾಗೂ ತಹಸೀಲ್ದಾರ್ ಶೀತಲ್ ಅವರು ಸಾಂಪ್ರಾದಾಯಿಕವಾಗಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.
ನಗರದಲ್ಲಿ ವಿಜಯದಶಮಿ ಅಂಗವಾಗಿ ನಾನಾ ದೇವರ ಮೂರ್ತಿಗಳ ಉತ್ಸವ ವಿಜೃಂಭಣೆಯಿಂದ ನೆರವೇರಿತು. ಕ್ಷೇತ್ರಪಾಲಕ ಶ್ರೀ ಅವಿಮುಕ್ತೇಶ್ವರ ಸ್ವಾಮಿಯು ಶ್ರೀ ಬಾಲತ್ರಿಪುರಾಸುಂದರಿ ದೇವಿಯೊಟ್ಟಿಗೆ ಉತ್ಸವ ಮೂಲಕ ಕರೆತರಲಾಯಿತು. ನಗರದ ಸಂತೇ ಗೇಟ್ ಬಳಿ ಬನ್ನಿ ಮಂಟಪ ನಿರ್ಮಿಸಿ ಬನ್ನಿ ಮರಕ್ಕೆ ಮಂಗಳ ವಾದ್ಯಗಳ ಮೂಲಕ ಆಗಮಿಸಿ ಪೂಜೆ ನೆರವೇರಿಸಲಾಯಿತು. ಶಾಸಕ ಶರತ್ ಬಚ್ಚೇಗೌಡ ಮಾರ್ಗದರ್ಶನದಲ್ಲಿದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ವಿಜಯ್ ಕುಮಾರ್ , ತಹಸೀಲ್ದಾರ್ ಶೀತಲ್ ಅವರ ನೇತೃತ್ವದಲ್ಲಿ ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ, ಬನ್ನಿ ಮರದ ಕೊಂಬೆಗಳನ್ನು ಕಡಿಯವ ಮೂಲಕ ಪೂಜೆಯನ್ನು ಪೂರ್ಣಗೊಳಿಸಲಾಯಿತು.
ಕಾರ್ಯಕ್ರಮದಲ್ಲಿಯೋಜನಾ ಪ್ರಾಧಿಕಾರ ನಿರ್ದೇಶಕ ಡಾ.ಎಚ್ .ಎಂ. ಸುಬ್ಬರಾಜ್ , ಪೊಲೀಸ್ ನಿರೀಕ್ಷಕ ಬಿ.ಟಿ. ಗೋವಿಂದ್ , ಯೋಜನಾ ಪ್ರಾಧಿಕಾರ ಮಾಜಿ ಅಧ್ಯಕ್ಷ ಡಾ.ಸಿ ಜಯರಾಜ್ , ಪಿಎಲ್ ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಎಂ.ಸಿ ವೆಂಕಟರಮಣಪ್ಪ, ಬ್ರಹ್ಮಾಚಾರ್ , ಹಿರಿಯ ಮುಖಂಡರು ಹಾಜರಿದ್ದರು.
ಕೋಟ್
ದೇಶದಲ್ಲಿತ್ರಿಪುರಾ ಸುಂದರಿ ದೇವಿ ಕೇವಲ ಮೂರು ಕಡೆ ಮಾತ್ರ ನೆಲೆಸಿದ್ದಾಳೆ. ಸಾಂಸ್ಕೃತಿಕ ನಗರಿ ಮೈಸೂರು, ಹೊಸಕೋಟೆಯ ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇವಾಲಯ ಹಾಗೂ ತಮಿಳುನಾಡಿನಲ್ಲಿಮಾತ್ರ ನೆಲೆಯೂರಿದ್ದು, ದೇವಿಗೆ ವಿಜಯದಶಮಿ ಸಂದರ್ಭದಲ್ಲಿ9 ಪೇಟೆಗಳ ದೇವತೆಗಳ ಉತ್ಸವದೊಂದಿಗೆ ಬನ್ನಿ ಮಂಟಪದಲ್ಲಿವಿಶೇಷ ಪೂಜೆ ನೆರವೇರಿಸುವುದು ಐತಿಹಾಸಿಕ ಕಾರ್ಯಕ್ರಮವಾಗಿದೆ.
-ವಿ.ವಿಜಯ್ ಕುಮಾರ್ , ಅಧ್ಯಕ್ಷ, ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇವಾಲಯ, ಹೊಸಕೋಟೆ
ಚಿತ್ರ-21 ಸೂಲಿಬೆಲೆ 1
ಹೊಸಕೋಟೆಯ ಸಂತೆ ಬೀದಿಯಲ್ಲಿನ ಬನ್ನಿ ಮಂಟಪದಲ್ಲಿವಿಜಯದಶಮಿ ಪ್ರಯುಕ್ತ ಶ್ರೀ ಅವಿಮುಕ್ತೇಶ್ವರ ಸ್ವಾಮಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ವಿಜಯ್ ಕುಮಾರ್ ಅವರು ತಹಸೀಲ್ದಾರ್ ಶೀತಲ್ ನೇತೃತ್ವದಲ್ಲಿಬನ್ನಿ ಮರಕ್ಕೆ ಪೂಜೆ ಸಲ್ಲಿಸಿದರು.