ಮಂಗಳೂರಿನ ಕಲ್ಲಚ್ಚು ಪ್ರಕಾಶನದ 17ನೇ ಆವೃತ್ತಿಯ 2026ನೇ ಸಾಲಿನ ವಾರ್ಷಿಕ ಕಲ್ಲಚ್ಚು ಪ್ರಶಸ್ತಿಗೆ ಸಾಹಿತಿ, ಸಾಂಸ್ಕೃತಿಕ ಚಿಂತಕ ಉಮ್ಮತ್ತೂರು ರೇವಣ್ಣ ಭಾಜನರಾಗಿದ್ದಾರೆ.ಮೂಲತಃ ಚಾಮರಾಜನಗರ ಜಿಲ್ಲೆಯವರಾದ ಇವರು, ಪ್ರಸ್ತುತ ಸಿಂಗಾಪುರದಲ್ಲಿನೆಲೆಸಿದ್ದಾರೆ. ಅಲ್ಲಿನ ಕನ್ನಡ ಸಂಘ ಮತ್ತು ವಾಹಿನಿ, ಅಂತರ್ಜಾಲ, ನಾಟಕಗಳಲ್ಲೂಸಕ್ರಿಯವಾಗಿದ್ದು, ತಮ್ಮ ಸೌಮ್ಯ ವಿಶಿಷ್ಟ ಪ್ರಬುದ್ಧ ಮಾತುಗಾರಿಕೆಯ ಮೂಲಕ ಜನಪ್ರಿಯರಾಗಿದ್ದಾರೆ.
ಇವರು ಜನಪದ ಮತ್ತು ವಚನ ಪರಂಪರೆಯ ಬಗ್ಗೆ ಅಗಾಧ ಅಧ್ಯಯನ ಮಾಡಿದ್ದಾರೆ. ನ. 14ರಂದು ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಪ್ರಕಾಶನದ ವ್ಯವಸ್ಥಾಪಕ ಮುಖ್ಯಸ್ಥ ಸಾಹಿತಿ ಪ್ರಕಾಶಕ ಮಹೇಶ ಆರ್ . ನಾಯಕ್ ಪ್ರಕಟಣೆಯಲ್ಲಿತಿಳಿಸಿದ್ದಾರೆ.