ಸಂಸತ್ ಆವರಣದಲ್ಲಿಚೆನ್ನಮ್ಮ ಜಯಂತಿ ಆಚರಣೆ

Contributed by: shashidonihaklu@gmail.com|Vijaya Karnataka•
202nd victory festival celebration of kittur rani chennamma jayanti in parliament
ವಿಕ ಸುದ್ದಿಲೋಕ ತುಮಕೂರು

ಹೊಸದಿಲ್ಲಿಯಲ್ಲಿಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಹಾಗೂ ಬ್ರಿಟಿಷರ ವಿರುದ್ಧದ 202ನೇ ವಿಜಯೋತ್ಸವವನ್ನು ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ಖಾತೆ ಸಹಾಯಕ ಸಚಿವ ವಿ. ಸೋಮಣ್ಣ ಅವರ ನೇತೃತ್ವದಲ್ಲಿಆಚರಿಸಲಾಯಿತು.
ಸಚಿವ ವಿ. ಸೋಮಣ್ಣ ಮಾತನಾಡಿ, ರಾಷ್ಟ್ರ ಕಂಡ ಅಪ್ರತಿಮ ಮಹಿಳಾ ಸೇನಾನಿ ಹಾಗೂ ಕಿತ್ತೂರು ಸಂಸ್ಥಾನದ ವೀರವನಿತೆ ರಾಣಿ ಚೆನ್ನಮ್ಮ ಅವರ ಜನ್ಮದಿನ ಮತ್ತು ಬ್ರಿಟಿಷರ ವಿರುದ್ಧದ ಹೋರಾಟದ ವಿಜಯೋತ್ಸವವನ್ನು ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕಿತ್ತೂರು ರಾಣಿ ಚೆನ್ನಮ್ಮ ಅವರು ಕೇವಲ ಯುದ್ಧ ಮಾಡಿದ ರಾಣಿಯಲ್ಲ. ಸಾಮ್ರಾಜ್ಯಶಾಹಿ ಶಕ್ತಿಗೆ ಸವಾಲೆಸೆದು, ಅನ್ಯಾಯದ ವಿರುದ್ಧ ದಿಟ್ಟ ಪ್ರತಿರೋಧ ತೋರಿದ ವೀರ ಮಹಿಳೆ. ಅವರ ಶೌರ್ಯ, ಸಾಹಸ ಮತ್ತು ಸ್ವಾಭಿಮಾನದ ಹೋರಾಟ ಅವರನ್ನು ಇತಿಹಾಸದಲ್ಲಿಪ್ರತಿರೋಧದ ಅಮರ ಸಂಕೇತವನ್ನಾಗಿಸಿದೆ ಎಂದು ಹೇಳಿದರು.

ರಾಣಿ ಚೆನ್ನಮ್ಮ ಅವರ ಧೈರ್ಯ, ಶೌರ್ಯ ಮತ್ತು ದೇಶಪ್ರೇಮ ಇಂದಿಗೂ ದೇಶದ ರಕ್ಷಣೆಯಲ್ಲಿತೊಡಗಿರುವ ವೀರ ಯೋಧರಿಗೆ ಸ್ಫೂರ್ತಿಯಾಗಿದೆ. ಇಂತಹ ಮಹಾನ್ ಸಾಧಕರನ್ನು ಪ್ರತಿವರ್ಷ ಸ್ಮರಿಸುವ ಮೂಲಕ ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸಬೇಕು ಎಂದು ಸಚಿವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಕೇಂದ್ರ ಜಲಶಕ್ತಿ ಸಚಿವ ಸಿ.ಆರ್ . ಪಾಟೀಲ್ , ಸಂಸದರಾದ ಪಿ.ಸಿ. ಮೋಹನ್ ಮತ್ತು ಡಾ. ಸುಧಾಕರ್ , ಮಾಜಿ ಸಚಿವ ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ್ , ಕೂಡಲಸಂಗಮದ ಬಸವ ಮೃತ್ಯುಂಜಯ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧ ಗಣ್ಯರು ಹಾಗೂ ದೆಹಲಿಯಲ್ಲಿನೆಲೆಸಿರುವ ಕನ್ನಡಿಗರು ಭಾಗವಹಿಸಿ ರಾಣಿ ಚೆನ್ನಮ್ಮ ಅವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು.

ಫೋಟೋ 23ಟಿಯುಎಂ2 : ಹೊಸದಿಲ್ಲಿಯಲ್ಲಿಸಂಸತ್ ಆವರಣದ ಪ್ರೇರಣಾ ಸ್ಥಳದಲ್ಲಿಕಿತ್ತೂರು ರಾಣಿ ಚೆನ್ನಮ್ಮ ಅವರ ಜಯಂತಿ ಹಾಗೂ ಬ್ರಿಟಿಷರ ವಿರುದ್ಧದ 202ನೇ ವಿಜಯೋತ್ಸವವನ್ನು ವಿ.ಸೋಮಣ್ಣ ನೇತೃತ್ವದಲ್ಲಿಆಚರಿಸಲಾಯಿತು.