ಸಿಡಿಲಿಗೆ ಕುರಿಗಾಹಿ, 5 ಆಡು ಸಾವು

Contributed by: Prasanna.Karpur@timesofindia.com|Vijaya Karnataka•
5 goats killed by lightning strike
ಗದಗ: ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದ ಸರಹದ್ದಿನಲ್ಲಿಶುಕ್ರವಾರ ಸಂಜೆ ಗುಡುಗು, ಸಿಡಿಲು ಸಹಿತ ಸುರಿದ ಭಾರಿ ಮಳೆಯ ವೇಳೆ ಸಿಡಿಲು ಬಡಿದು ಕುರಿಗಾಹಿ ಹಾಗೂ ಐದು ಆಡಿಗಳು ಸಾವನ್ನಪ್ಪಿವೆ. ಮಾಬುಸಾಬ್ ಮೋದಿನಸಾಬ್ ಮುಲ್ಲಾನವರ್ (44) ಮೃತ ವ್ಯಕ್ತಿ. ಘಟನೆಯಲ್ಲಿಐದು ಆಡುಗಳೂ ಸಾವನ್ನಪ್ಪಿದ್ದು, ಇಬ್ಬರು ಕುರಿಗಾರರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಗದಗ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.