ಬಿರಂಜಿ ಹಳ್ಳಕ್ಕೆ ಅಡ್ಡಲಾಗಿ ಗಂಜಲಗೋಡು ಗ್ರಾಮದ ಸಮೀಪ ನಿರ್ಮಿಸಲಾಗುತ್ತಿರುವ ಬಂಡಿಗೋಡಿನ ಸೇತುವೆಯ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎಂದು ಆರೋಪಿಸಿ ರೈತ ಸಂಘ ಮತ್ತು ಹಸಿರುಸೇನೆ ನೇತೃತ್ವದಲ್ಲಿಗ್ರಾಮಸ್ಥರು ಬುಧವಾರ ಸೇತುವೆ ಬಳಿ ಪ್ರತಿಭಟನೆ ನಡೆಸಿದರು.
ರೈತ ಸಂಘ ಮತ್ತು ಹಸಿರುಸೇನೆ ಸದಸ್ಯ ವೈ.ಸಿ.ಸುನೀಲ್ ಕುಮಾರ್ ಮಾತನಾಡಿ, ತಾಲೂಕಿನ ಅಂಬಳೆ ಹೋಬಳಿ ವ್ಯಾಪ್ತಿಯ ಬಂಡಿಗೋಡು ಸೇತುವೆ ಕಾಮಗಾರಿಯಲ್ಲಿಬಳಸುತ್ತಿರುವ ಕಬ್ಬಿಣ ತೀವ್ರ ಕಳಪೆಯಾಗಿದೆ. ಅಲ್ಲದೇ ಮತ್ತಿಕೆರೆಯಲ್ಲೂನೂತನ ಸೇತುವೆ ನಿರ್ಮಿಸುತ್ತಿದ್ದು ಸರಿಯಾದ ರೀತಿಯಲ್ಲಿಕೆಲಸ ಆಗಬೇಕು ಎಂದು ಒತ್ತಾಯಿಸಿದರು.
ಸೇತುವೆಗಳು ಸುತ್ತಮುತ್ತಲಿನ ಗ್ರಾಮಗಳ ರೈತರು, ಸಾರ್ವಜನಿಕರು ಕೃಷಿ ಉತ್ಪನ್ನಗಳ ಸಾಗಣೆ ಹಾಗೂ ಭವಿಷ್ಯದಲ್ಲಿಭಾರಿ ವಾಹನಗಳು ಸಂಚಾರಕ್ಕೆ ಅನುಕೂಲಕಾರಿಯಾಗಿದ್ದು ದೀರ್ಘಕಾಲ ಬಾಳಿಕೆ, ಸುರಕ್ಷತೆಯ ಗುಣಮಟ್ಟವನ್ನು ಕಡ್ಡಾಯವಾಗಿ ಕಾಪಾಡುವುದು ಅಗತ್ಯ ಎಂದರು.
ಬಂಡಿಗೋಡು ಹಾಗೂ ಮತ್ತಿಕೆರೆ ಸಮೀಪ ನಿರ್ಮಿಸುತ್ತಿರುವ ನೂತನ ಸೇತುವೆಗೆ ಒಟ್ಟು 6 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಯಗಚಿ ಡ್ಯಾಂಗೆ ಬಂಡಿಗೋಡು ಸೇತುವೆ ಮೂಲಕ ಹೆಚ್ಚು ನೀರು ಹರಿದುಹೋಗುತ್ತದೆ. ಜತೆಗೆ ಈ ಮಾರ್ಗದಲ್ಲಿಟಿಪ್ಪರ್ , ಟ್ರಕ್ ಸೇರಿದಂತೆ ಭಾರೀ ವಾಹನಗಳು ಸಂಚರಿಸುವ ಕಾರಣ ಗುಣಮಟ್ಟದಿಂದ ಕೂಡಿರಬೇಕು ಎಂದು ಹೇಳಿದರು.
ರೈತಸಂಘ ಮತ್ತು ಹಸಿರುಸೇನೆ ಮುಖಂಡರಾದ ಕಾಂತರಾಜ್ , ಪರ್ವತೇಗೌಡ, ಲೋಕೇಶ್ , ಮುಳ್ಳೇಶ್ , ಶಂಕರ್ , ಗ್ರಾಮಸ್ಥರಾದ ನಂಜೇಗೌಡ, ಶೈಲೇಂದ್ರ, ಪ್ರಕಾಶ್ , ದಯಾನಂದ್ ಹಾಗೂ ಇತರರಿದ್ದರು.
22ಚೇತನ್ ಪಿ-2
ಗಂಜಲಗೋಡು ಗ್ರಾಮದ ಸಮೀಪದ ಬಂಡಿಗೋಡಿನ ಸೇತುವೆಯ ಕಾಮಗಾರಿ ಕಳಪೆಯಾಗಿ ನಡೆಯುತ್ತಿದೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಪ್ರತಿಭಟನೆ ನಡೆಯಿತು.