ಒಂದೂವರೆ ದಶಕದಲ್ಲಿಮೆಟ್ರೊ ಸಾಗಿದ್ದು 96 ಕಿ.ಮೀ. -ಮುಂದಿನ ದಶಕದಲ್ಲಿ300 ಕಿ.ಮೀ. ವಿಸ್ತರಣೆ ಗುರಿ, ಬಿಎಂಆರ್ ಸಿಎಲ್ ಗೆ ಹಲವು ಸವಾಲುಗಳು

Contributed by: mayur.hegde@timesofindia.com|Vijaya Karnataka•
bengaluru metro expands to 96 km aims for 300 km challenges faced by bmrc
-ಅಂತರ ಜಿಲ್ಲಾಸಂಪರ್ಕಕ್ಕೆ ಡಿಪಿಆರ್ ಸಿದ್ಧ

ಮಯೂರ್ ಹೆಗಡೆ ಬೆಂಗಳೂರು
ಘ್ಕಿಞay್ಠ್ಟ.hಛಿಜdಛಿಃಠಿಜಿಞಛಿsಟ್ಛಜ್ಞಿdಜಿa.್ಚಟಞ

ಒಂದೂವರೆ ದಶಕದಲ್ಲಿ96 ಕಿ.ಮೀ. ದೂರ ಸಾಗಿರುವ ನಮ್ಮ ಮೆಟ್ರೊ, ಮುಂದಿನ ಒಂದು ದಶಕದಲ್ಲಿ300 ಕಿ.ಮೀ. ವಿಸ್ತರಣೆಯ ನೀಲನಕ್ಷೆ ಹಾಕಿಕೊಂಡಿದೆ.

ಇದೇ ತಿಂಗಳಾಂತ್ಯಕ್ಕೆ ಗುಲಾಬಿ ಮಾರ್ಗ ಉದ್ಘಾಟನೆಯಾಗುವ ನಿರೀಕ್ಷೆಯಿದ್ದು, 100 ಕಿ.ಮೀ. ವ್ಯಾಪ್ತಿಯ ಮೈಲಿಗಲ್ಲುಸ್ಥಾಪಿಸಲಿದೆ. ಬೆಂಗಳೂರಲ್ಲಿಮೆಟ್ರೊ ಜಾಲ ವಿಸ್ತರಣೆ ಹಾಗೂ ಉಪನಗರಗಳಿಗೆ ಸಂಪರ್ಕ ಕಲ್ಪಿಸುವ ಗುರಿಯನ್ನು ರಾಜ್ಯ ಸರಕಾರ ಹೊಂದಿದೆ. ಈ ಯೋಜನೆಗಳಿಂದ ಸರಿಸುಮಾರು 312 ಕಿ.ಮೀ.ಗೆ (ಈಗಿನ 96 ಕಿ.ಮೀ. ಸೇರಿ) ಮೆಟ್ರೊ ವ್ಯಾಪಿಸುವ ಸಾಧ್ಯತೆಯಿದೆ. ಆದರೆ, ಅನುಷ್ಠಾನದ ವಿಳಂಬ ನಿವಾರಿಸಿಕೊಂಡು ನಿಗದಿತ ಅವಧಿಯಲ್ಲಿವಾಣಿಜ್ಯ ಸಂಚಾರ ಆರಂಭಿಸುವುದೇ ಬಿಎಂಆರ್ ಸಿಎಲ್ ಗೆ ಸವಾಲೆನಿಸಿದೆ.

ಅಂತರ ಜಿಲ್ಲಾಸಂಪರ್ಕ:

ಪ್ರಮುಖವಾಗಿ ಮಾದಾವರದಿಂದ ತುಮಕೂರುವರೆಗೆ 59.96 ಕಿ.ಮೀ. ಮಾರ್ಗಕ್ಕೆ ಡಿಪಿಆರ್ ಪೂರ್ಣಗೊಂಡಿದ್ದು, ಬಿಎಂಆರ್ ಸಿಎಲ್ ಅದನ್ನು ಡಿಸಿಎಂ ಪರಮೇಶ್ವರ್ ಅವರಿಗೆ ಸಲ್ಲಿಸಿದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವದಡಿ 20 ಸಾವಿರ ಕೋಟಿ ರೂ. ಯೋಜನಾ ಮೊತ್ತ ಅಂದಾಜಿಸಲಾಗಿದೆ. ನಗರಾಭಿವೃದ್ಧಿ ಇಲಾಖೆ ಡಿಪಿಆರ್ ಪರಿಶೀಲಿಸಲಿದ್ದು, ಸಚಿವ ಸಂಪುಟ ಸಭೆಯಲ್ಲಿ್ಲಚರ್ಚೆಯಾಗಿ ಯೋಜನೆ ಜಾರಿಗೆ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ. ಒಂದು ವೇಳೆ ಸಂಪುಟದ ಒಪ್ಪಿಗೆ ಸಿಕ್ಕಲ್ಲಿರಾಜ್ಯದಲ್ಲಿಮೊದಲ ಅಂತರ ಜಿಲ್ಲಾಮೆಟ್ರೊ ಎನಿಸಿಕೊಳ್ಳಲಿದೆ.

ಇನ್ನು, ಉದ್ದೇಶಿತ ಕೆ.ಆರ್ .ಪುರದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಗೆ 16 ಕಿ.ಮೀ. ಮೆಟ್ರೊ ಮಾರ್ಗ ವಿಸ್ತರಿಸಲು ಕಾರ್ಯಸಾಧ್ಯತಾ ಅಧ್ಯಯನ ಕೈಗೊಳ್ಳಲಾಗುತ್ತಿದೆ. ಚಲ್ಲಘಟ್ಟದಿಂದ ರಾಮನಗರದ ಬಿಡದಿವರೆಗೆ 15 ಕಿ.ಮೀ. ಮೆಟ್ರೊ ವಿಸ್ತರಣೆ ಕೂಡ ಇದೇ ಹಂತದಲ್ಲಿದೆ.

ಉಳಿದಂತೆ ಸಿಲ್ ್ಕ ಇನ್ ಸ್ಟಿಟ್ಯೂಟ್ ನಿಂದ ಕಗ್ಗಲೀಪುರದವರೆಗೆ 24 ಕಿ.ಮೀ. ಹಾಗೂ ಕಾಳೇನ ಅಗ್ರಹಾರ-ಕಾಡುಗೋಡಿ ಟ್ರೀ ಪಾರ್ಕ್ವರೆಗೆ 73 ಕಿ.ಮೀ ಮೆಟ್ರೊ ವಿಸ್ತರಣೆ ಕಾರ್ಯಸಾಧ್ಯತೆ ಅಧ್ಯಯನಕ್ಕೆ ಕ್ರಮ ಜರುಗಿಸಲಾಗಿದೆ ಎಂದು ಬಿಎಂಆರ್ ಸಿಎಲ್ ಯೋಜನಾ ವಿಭಾಗದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದು ಮುಖ್ಯ ಮಾರ್ಗ ತಮಿಳುನಾಡಿನ ಹೊಸೂರು ಸಂಪರ್ಕಿಸಲು ಸಾಧ್ಯವಾಗುವಂತೆ ಅತ್ತಿಬೆಲೆವರೆಗೆ 11 ಕಿ.ಮೀ. ಮೆಟ್ರೊ ವಿಸ್ತರಿಸಲು ಡಿಪಿಆರ್ ಸಿದ್ಧತೆಗೆ ಬಿಎಂಆರ್ ಸಿಎಲ್ ಗೆ ಸರಕಾರ ಸೂಚಿಸಿದೆ. ಇದು ಕಾರ್ಯರೂಪಕ್ಕೆ ಬಂದಲ್ಲಿಈ ಮಾರ್ಗ ದಕ್ಷಿಣ ಭಾರತದ ಮೊದಲ ಅಂತಾರಾಜ್ಯ ಸಂಪರ್ಕಿಸುವ ಮೆಟ್ರೊ ಆಗಲಿದೆ.

ಮೆಟ್ರೊ ದಾರಿ:

2011ರ ಅ.20ರಂದು ಹಂತ-1ರಡಿ ಬೈಯಪ್ಪನಹಳ್ಳಿಯಿಂದ ಮಹಾತ್ಮ ಗಾಂಧಿ ರಸ್ತೆವರೆಗೆ (6.70 ಕಿ.ಮೀ) ಮೊದಲ ಬಾರಿ ನಮ್ಮ ಮೆಟ್ರೊ ಸೇವೆ ಆರಂಭವಾಗಿತ್ತು. ಬಳಿಕ ನೇರಳೆ ಮತ್ತು ಹಸಿರು ಮಾರ್ಗಗಳ ವಿವಿಧ ವಿಭಾಗಗಳು 2017ರ ನಡುವೆ ಲೋಕಾರ್ಪಣೆಗೊಂಡಿವೆ.

ಹಂತ-2ರಡಿ 2021ರಿಂದ 2025ರ ಅವಧಿಯಲ್ಲಿಬೈಯಪ್ಪನಹಳ್ಳಿ-ಕೃಷ್ಣರಾಜಪುರ, ಕೃಷ್ಣರಾಜಪುರ-ವೈಟ್ ಫೀಲ್ಡ…, ಕೆಂಗೇರಿ-ಚಲ್ಲಘಟ್ಟ, ನಾಗಸಂದ್ರ-ಮಾದಾವರ ಮಾರ್ಗ ವಿಸ್ತರಣೆಯಾದರೆ, ಕೊನೆಯದಾಗಿ ಹಳದಿ ಮಾರ್ಗ ಆರ್ .ವಿ.ರಸ್ತೆಯಿಂದ ಬೊಮ್ಮಸಂದ್ರ ಮೆಟ್ರೊ (2025ರ ಅ.10) ಉದ್ಘಾಟನೆಗೊಂಡಿದೆ.

2ನೇ ಹಂತದ ಮುಂದುವರಿದ ಭಾಗವಾಗಿ ಮುಂದಿನ ವರ್ಷ ಮೇ ವೇಳೆಗೆ ಹೊರವರ್ತುಲ ರಸ್ತೆ ನೀಲಿ ಮಾರ್ಗ (2ಎ), ಗುಲಾಬಿ ಮಾರ್ಗದ ಸುರಂಗ ಮೆಟ್ರೊ ಕಾರ್ಯಾಚರಣೆಗೆ ಮುಂದಾಗುತ್ತಿದೆ. 2 ‘ಎ’ ಸೇರಿದಂತೆ ಕೆ.ಆರ್ .ಪುರ- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸುವ (2 ಬಿ) ಕಾಮಗಾರಿ ನಡೆಯುತ್ತಿದ್ದು, ಒಂದು ವರ್ಷ ವಿಳಂಬವಾಗಿದೆ.

---------------------

ಸಾಧಿಸಿದ್ದು ಅಲ್ಪ:

ದಿಲ್ಲಿಮೆಟ್ರೊ 20 ವರ್ಷಗಳಲ್ಲಿ(2002-2022) 390 ಕಿ.ಮೀ. ವ್ಯಾಪಿಸಿತ್ತು. ಅದಕ್ಕೆ ಹೋಲಿಸಿದರೆ ನಮ್ಮ ಮೆಟ್ರೊ ಹದಿನೈದು ವರ್ಷಗಳಲ್ಲಿ100 ಕಿಮೀ ಕೂಡ ಸೇವೆ ಒದಗಿಸಿಲ್ಲಎಂದು ಸಾಮಾಜಿಕ ಜಾಲತಾಣಗಳಲ್ಲಿಜನತೆ ಆಕ್ಷೇಪಿಸಿದ್ದಾರೆ.

ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ ಸಿಎಲ್ ) ಮೂಲಕ ಪ್ರಸ್ತುತ ನೇರಳೆ, ಹಸಿರು ಹಾಗೂ ಹಳದಿ ಮಾರ್ಗ ಸೇರಿ 96.10 ಕಿಮೀ ವ್ಯಾಪ್ತಿಯಲ್ಲಿಸೇವೆ ಒದಗಿಸುತ್ತಿದೆ. ಒಂದೂವರೆ ದಶಕದಲ್ಲಿವರ್ಷಕ್ಕೆ ತಲಾ 6.5ರಿಂದ 7 ಕಿ.ಮೀ.ನಷ್ಟು ಮಾತ್ರ ಪ್ರಗತಿಯಾಗಿದೆ.

------------

ವಿಳಂಬ, ವೆಚ್ಚದಾಯಕ

ನಮ್ಮ ಮೆಟ್ರೊದ ಈವರೆಗಿನ ಎಲ್ಲಾಯೋಜನೆಗಳು ವರ್ಷಗಟ್ಟಲೆ ವಿಳಂಬವಾಗಿವೆ.

2024ರಲ್ಲಿಕೇಂದ್ರ 3ನೇ ಹಂತಕ್ಕೆ ಅನುಮೋದನೆ ನೀಡುವಾಗ 15611 ಕೋಟಿ ರೂ. ಅಂದಾಜಿಸಲಾಗಿತ್ತು. ಆದರೆ, ಇನ್ನೂ ಕಾಮಗಾರಿ ಆರಂಭವಾಗಿಲ್ಲ. ಈಗಾಗಲೇ ಗಡುವನ್ನು 6 ತಿಂಗಳು (2031 ಮೇ) ವಿಸ್ತರಿಸಲಾಗಿದೆ. ಹಾಗೆಯೇ, ಹಂತ 3 ‘ಎ’ನಡಿ ಸರ್ಜಾಪುರ-ಹೆಬ್ಬಾಳ ಮಾರ್ಗಕ್ಕೆ ವೆಚ್ಚ 25,999 ಕೋಟಿ ರೂ. ಎಂದು ಪರಿಷ್ಕೃತ ಡಿಪಿಆರ್ ನಲ್ಲಿಪ್ರಸ್ತಾವಿಸಲಾಗಿದೆ. ಆದರೆ, ಕೇಂದ್ರದ ಅನುಮೋದನೆ ಇನ್ನೂ ಸಿಕ್ಕಿಲ್ಲ. ರಾಜ್ಯ ಸರಕಾರ ಈ ಯೋಜನೆಗೆ ಅನುಮೋದನೆ ನೀಡಿ ಒಂದೂವರೆ ವರ್ಷವಾಗಿದೆ. ಕೇಂದ್ರದಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ. ಗುಲಾಬಿ ಮಾರ್ಗ ಮತ್ತು ನೀಲಿ ಮಾರ್ಗಗಳು ಎರಡು ವರ್ಷ ವಿಳಂಬವಾಗಿವೆ.

------

ಯೋಜನೆ ಕಿ.ಮೀ ಅಂದಾಜು ವೆಚ್ಚ ಯೋಜನೆ ಮುಗಿದಾಗ (ಕೋಟಿ ರೂ.)

1 ಹಂತ 42 6385 14133

2ನೇಹಂತ 72 26405 40614

ಹಳದಿ ಮಾರ್ಗ 2869 7160

-------------------