ಎನ್ ಜಿಒ ಸಂಘಟನೆಯಿಂದ ಆಹ್ಲಾದ ಮೆರವಣಿಗೆ

Contributed by: crastalp19@gmail.com|Vijaya Karnataka•
celebration rally by ngo organization kasaragod
ಕಾಸರಗೋಡು : ಕೇರಳ ಮಾರಿಟೈಮ್ ಮಂಡಳಿಯಲ್ಲಿ 2017ರ ಬಳಿಕ ಸರ್ವಿಸ್ ನಲ್ಲಿ ಪ್ರವೇಶಿಸಿದವರನ್ನು ಸರಕಾರಿ ಸಿಬ್ಬಂದಿಗಳಾಗಿ ಕಾಯಂಗೊಳಿಸಿದ ಯುಡಿಎಫ್ ಸರಕಾರಕ್ಕೆ ಹಾಗೂ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿ ಎನ್ ಜಿಒ ಅಸೋಸಿಯೇಶನ್ ಜಿಲ್ಲಾ ಸಮಿತಿಯ ನೇತೃತ್ವದಲ್ಲಿಕಾಸರಗೋಡು ಪೋರ್ಟ್ ಕಚೇರಿಯ ಮುಂಭಾಗದಲ್ಲಿ ಆಹ್ಲಾದ ಮೆರವಣಿಗೆ ನಡೆಯಿತು.

ಜಿಲ್ಲಾಅಧ್ಯಕ್ಷ ಎ.ಟಿ. ಶಶಿ ಉದ್ಘಾಟಿಸಿದರು. ರಾಜ್ಯ ಸಮಿತಿ ಸದಸ್ಯ ಜಯಪ್ರಕಾಶ್ ಎಂ.ಬಿ.ಆಚಾರ್ , ಜಿಲ್ಲಾಕಾರ್ಯದರ್ಶಿ ವಿ.ಟಿ.ಪಿ.ರಾಜೇಶ್ ,ಜತೆ ಕಾರ್ಯದರ್ಶಿಗಳಾದ ರತಿ ವಯಲಪ್ರಂ, ಎಂ.ಕೆ. ಶ್ರೀನಿಮೋನ್ , ಬ್ರಾಂಚ್ ಅಧ್ಯಕ್ಷ ರತೀಶ್ ಬಂದಡ್ಕ, ಕಾರ್ಯದರ್ಶಿ ಶೆಜಿಲ್ ಪಿಣರಾಯಿ ಮಾತನಾಡಿದರು.
ಚಿತ್ರ: 16ಕೆಎಸ್ ಎಲ್ ಎನ್ ಜಿಒ