Chaos And Confusion In Dasara Festivities Criticized
ಗೊಂದಲ, ಅವ್ಯವಸ್ಥೆಯ ದಸರಾ: ಬಿಜೆಪಿ ಟೀಕೆ
Contributed by: Beeresha M|Vijaya Karnataka•
ಗೊಂದಲ, ಅವ್ಯವಸ್ಥೆಯ ದಸರಾ: ಬಿಜೆಪಿ ಟೀಕೆ
ವಿಕ ಸುದ್ದಿಲೋಕ ಮೈಸೂರುಈ ಬಾರಿಯ ದಸರಾ ಗೊಂದಲ, ಅವ್ಯವಸ್ಥೆ ಹಾಗೂ ಲೋಪದೋಷಗಳಿಂದ ಕೂಡಿದ್ದು, ಏಕವ್ಯಕ್ತಿ ಮಾದರಿಯ ದಸರಾ ಆಗಿತ್ತು ಎಂದು ಬಿಜೆಪಿ ವಕ್ತಾರ ಮೋಹನ್ ಆರೋಪಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ‘‘ಆಹಾರ ಮೇಳದ ಸ್ಟಾಲ್ ಗಳಿಗೆ 1.50 ಲಕ್ಷ ರೂ.ವರೆಗೆ ಶುಲ್ಕ ವಿಧಿಸಿದ್ದರಿಂದ ಆಹಾರ ಪದಾರ್ಥಗಳ ಬೆಲೆ ಹೆಚ್ಚಾಗಿದ್ದು, ಸ್ವಚ್ಛತೆ, ಸುರಕ್ಷತೆ ಹಾಗೂ ಅಗ್ನಿಶಾಮಕ ವ್ಯವಸ್ಥೆಯಲ್ಲೂಲೋಪಗಳಿದ್ದವು,’’ ಎಂದು ದೂರಿದರು. ‘‘ಲಿಂಗಾಂಬುಧಿ ಮತ್ತು ಕುಪ್ಪಣ್ಣ ಪಾರ್ಕ್ನ ಪುಷ್ಪಪ್ರದರ್ಶನದ ಪ್ರವೇಶ ಹಾಗೂ ಪಾರ್ಕಿಂಗ್ ಶುಲ್ಕದ ನಿಗದಿಯಲ್ಲೂಪಾರದರ್ಶಕತೆ ಇರಲಿಲ್ಲ,’’ ಎಂದರು.
‘‘ರೈತರು, ಜಾನುವಾರುಗಳಿಗೆ ಮೂಲಸೌಕರ್ಯ ಕಲ್ಪಿಸುವಲ್ಲಿಜಿಲ್ಲಾಡಳಿತ ವಿಫಲವಾಗಿದೆ. ಕಲಾವಿದರ ಆಯ್ಕೆ ಮತ್ತು ಸಂಭಾವನೆ ಪಾವತಿಯಲ್ಲೂಪಾರದರ್ಶಕತೆ ಇರಲಿಲ್ಲ. ಪಾಸ್ ಹಾಗೂ ಟಿಕೆಟ್ ಇದ್ದರೂ ಸಾರ್ವಜನಿಕರು, ಹಿರಿಯ ನಾಗರಿಕರು ಮತ್ತು ಮಕ್ಕಳು ಪ್ರವೇಶ ಸಿಗದೆ ಪರದಾಡುವಂತಾಯಿತು. ಶಿಷ್ಟಾಚಾರ ಉಲ್ಲಂಘನೆ ಹಾಗೂ ಗಲಾಟೆಗಳಿಂದ ವಜ್ರಮುಷ್ಟಿ ಕಾಳಗ ರದ್ದಾಯಿತು,’’ ಎಂದು ಆರೋಪಿಸಿದರು.
ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
‘‘ಕಳೆದ ಮೂರು ವರ್ಷಗಳಿಂದ ದಸರಾ ಮಹೋತ್ಸವವನ್ನು ಯಶಸ್ವಿಯಾಗಿ ನಡೆಸುವಲ್ಲಿಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಫಲರಾಗಿದ್ದಾರೆ. 22 ಉಸ್ತುವಾರಿ ಸಚಿವರು ಹಾಗೂ ಅಗತ್ಯ ವ್ಯವಸ್ಥೆಗಳಿದ್ದರೂ ದಸರಾವನ್ನು ಸಮರ್ಪಕವಾಗಿ ನಿರ್ವಹಿಸಲು ಆಡಳಿತ ಯಂತ್ರ ವಿಫಲವಾಗಿದೆ. ಇದಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು,’’ ಎಂದು ಒತ್ತಾಯಿಸಿದರು.
ಟಿಕೆಟ್ ಇದ್ದರೂ ಪ್ರವೇಶವಿಲ್ಲ!
‘‘ದಸರಾ ಮೆರವಣಿಗೆ ಆರಂಭವಾಗುವ ನಿಗದಿತ ಸಮಯಕ್ಕೂ ಮೊದಲೇ ಗೇಟ್ ಗಳನ್ನು ಮುಚ್ಚಲಾಗಿತ್ತು. ಪಾಸ್ ಮತ್ತು ಟಿಕೆಟ್ ಹೊಂದಿದ್ದ ಸಾರ್ವಜನಿಕರು, ಹಿರಿಯ ನಾಗರಿಕರು ಹಾಗೂ ಮಕ್ಕಳು ಬಿಸಿಲಿನಲ್ಲಿಹೊರಗೆ ಕಾಯುವಂತಾಯಿತು. ಪಟ್ಟಿಯಲ್ಲಿಹೆಸರುಗಳಿದ್ದರೂ ಪ್ರಮುಖ ಸಚಿವರು ಮತ್ತು ಅಧಿಕಾರಿಗಳನ್ನು ಒಳಗೆ ಬಿಡದೆ ತಡೆದ ಘಟನೆಗಳೂ ನಡೆದಿವೆ,’’ ಎಂದು ಆರೋಪಿಸಿದರು.
ಹಣ ಪಾವತಿಸಿ ದಸರಾ ಟಿಕೆಟ್ ಅಥವಾ ಗೋಲ್ಡ್ ಪಾಸ್ ಖರೀದಿಸಿದ್ದರೂ ಪ್ರವೇಶ ಸಿಗದವರು ಟಿಕೆಟ್ ಗಳನ್ನು ಬಿಜೆಪಿ ಕಚೇರಿಗೆ ತಲುಪಿಸಬೇಕು. ಸರಕಾರದ ವಿರುದ್ಧ ಗ್ರಾಹಕ ವ್ಯಾಜ್ಯಗಳ ನ್ಯಾಯಾಲಯದಲ್ಲಿಪಕ್ಷದ ವಕೀಲರ ಮೂಲಕ ಉಚಿತವಾಗಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಮೋಹನ್ ತಿಳಿಸಿದರು.