(ನೋಡಿದೆ)ಕ್ರೆಡಿಟ್ ಕಾರ್ಡ್ ಗೆಂದು ಮಾಹಿತಿ ವಂಚನೆ

Contributed by: Beeresha M|Vijaya Karnataka•
credit card information fraud youth loses 680 lakhs
ಕ್ರೆಡಿಟ್ ಕಾರ್ಡ್ ಗೆಂದು ಮಾಹಿತಿ ವಂಚನೆ

-6.80 ಲಕ್ಷ ರೂ. ಕಳೆದುಕೊಂಡ ಯುವಕ
ಮೈಸೂರು: ಫೇಸ್ ಬುಕ್ ನಲ್ಲಿಕ್ರೆಡಿಟ್ ಕಾರ್ಡ್ ಜಾಹೀರಾತು ಗಮನಿಸಿದ ಯುವಕ ಅಪರಿಚಿತರು ನೀಡಿದ ಅರ್ಜಿಯಲ್ಲಿತನ್ನ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿ 6.80 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಗರದಲ್ಲಿನಡೆದಿದೆ.

ನಗರದ ವಿಜಯನಗರ ನಿವಾಸಿ ಯುವಕ ಫೇಸ್ ಬುಕ್ ವೀಕ್ಷಿಸುವ ವೇಳೆ ಕ್ರೆಡಿಟ್ ಕಾರ್ಡ್ ಜಾಹೀರಾತನ್ನು ಗಮನಿಸಿ ಅಲ್ಲಿನ ಲಿಂಕ್ ಬಟನ್ ಒತ್ತಿದ್ದಾನೆ. ಅಲ್ಲಿಂದ ಅಪರಿಚಿತ ವ್ಯಕ್ತಿಯ ಕರೆ ಬಂದಿದೆ.

ನಾವು ನಿಮಗೆ ಅರ್ಜಿಯನ್ನು ಕಳುಹಿಸುತ್ತೇವೆ. ನಿಮ್ಮ ಬ್ಯಾಂಕ್ ಖಾತೆಯ ವಿವರಗಳನ್ನು ನೀಡಿ ಕಾರ್ಡ್ ಪಡೆಯಿರಿ ಎಂದು ತಿಳಿಸಿದ್ದಾರೆ. ಅವರ ಮಾತನ್ನು ನಂಬಿದ ಯುವಕ ತನ್ನ ಬ್ಯಾಂಕ್ ಖಾತೆಯ ವಿವರಗಳನ್ನು ಅರ್ಜಿ ಮೂಲಕ ನೀಡಿದ್ದಾನೆ. ಇದಾದ ಕೆಲ ಹೊತ್ತಿನಲ್ಲಿಯುವಕನ ಬ್ಯಾಂಕ್ ಖಾತೆಯಲ್ಲಿದ್ದ 6.80 ಲಕ್ಷ ರೂ. ಹಣವನ್ನು ಖದೀಮರು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ. ಸೈಬರ್ ಪೊಲೀಸ್ ಠಾಣೆಯಲ್ಲಿದೂರು ದಾಖಲಾಗಿದೆ.