ದಸರಾ ಸಂಭ್ರಮ, ಹೆಣ್ಣು ಮಕ್ಕಳಿಗೆ ಸೀರೆ, ಸಿಹಿ ವಿತರಣೆ

Contributed by: Mruthyunjayar77@gmail.com|Vijaya Karnataka•
dasara celebration sarees and sweets distributed to girls
ವಿಕ ಸುದ್ದಿ ಲೋಕ ಚಿಕ್ಕಬಳ್ಳಾಪುರ

ತಾಪಂ ಹಾಗೂ ತಾಲೂಕು ಆಡಳಿತವು ದಸರಾ ಹಾಗೂ ವಿಜಯದಶಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿತು. ಈ ಸಂದರ್ಭದಲ್ಲಿಹೆಣ್ಣು ಮಕ್ಕಳಿಗೆ ಸೀರೆ ಹಾಗೂ ಸಿಹಿ ವಿತರಿಸಿ ಹಬ್ಬದ ಶುಭಾಶಯ ಕೋರಲಾಯಿತು.
ಇದೇ ಸಂದರ್ಭದಲ್ಲಿತಹಸೀಲ್ದಾರ್ ರಶ್ಮಿ ಮಾತನಾಡಿ, ದಸರಾ ಹಾಗೂ ವಿಜಯದಶಮಿಯು ಕೆಟ್ಟದರ ವಿರುದ್ಧ ಒಳ್ಳೆಯದರ ವಿಜಯ ಸಾರುವ ಹಬ್ಬವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿಈ ಹಬ್ಬಕ್ಕೆ ವಿಶೇಷ ಮಹತ್ವವಿದೆ. ಎಲ್ಲರೂ ಪರಸ್ಪರ ಪ್ರೀತಿ, ಗೌರವ ಹಾಗೂ ಸೌಹಾರ್ದತೆಯಿಂದ ಹಬ್ಬ ಆಚರಿಸಬೇಕು. ಹೆಣ್ಣು ಮಕ್ಕಳಿಗೆ ಗೌರವ ನೀಡುವ ಜತೆಗೆ ಅವರ ಶಿಕ್ಷಣ, ಸುರಕ್ಷತೆ ಹಾಗೂ ಸಬಲೀಕರಣಕ್ಕೆ ಆದ್ಯತೆ ನೀಡಬೇಕು ಎಂದರು.

ತಾಪಂ ಇಒ ಶ್ರೀನಾಥ್ ಗೌಡ ಮಾತನಾಡಿ, ಹಬ್ಬಗಳು ಸಮಾಜದಲ್ಲಿಒಗ್ಗಟ್ಟು, ಸಹಬಾಳ್ವೆ ಹಾಗೂ ಸಂತೋಷ ಹೆಚ್ಚಿಸುತ್ತವೆ. ಎಲ್ಲವರ್ಗದ ಜನರು ಒಟ್ಟಾಗಿ ಹಬ್ಬಗಳನ್ನು ಆಚರಿಸುವುದರಿಂದ ಸಾಮಾಜಿಕ ಸಾಮರಸ್ಯ ವೃದ್ಧಿಯಾಗುತ್ತದೆ. ದಸರಾ ಹಬ್ಬವು ಪ್ರತಿಯೊಬ್ಬರ ಜೀವನದಲ್ಲೂಹೊಸ ಉತ್ಸಾಹ ಹಾಗೂ ಸಕಾರಾತ್ಮಕ ಚಿಂತನೆ ಮೂಡಿಸಲಿ. ಎಲ್ಲರೂ ಸಂಭ್ರಮದಿಂದ ವಿಜಯದಶಮಿ ಆಚರಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿಪಂಚಾಯಿತಿ ಸಿಬ್ಬಂದಿ ಹಾಗೂ ತಾಲೂಕು ಆಡಳಿತದ ಸಿಬ್ಬಂದಿ ಹಾಜರಿದ್ದರು.

21 ಸಿಬಿಪಿಪೋಟೋ 5

ತಾಲೂಕು ಆಡಳಿತ ಹಾಗೂ ತಾಪಂ ಜತೆಗೂಡಿ ದಸರಾ ಹಾಗೂ ವಿಜಯದಶಮಿ ಹಬ್ಬ ಆಚರಿಸಿದವು.