ತ್ರಿ ಡಾ.ಜಿ.ಪರಮೇಶ್ವರ ಅವರು ನಾನಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದರು.

Contributed by: Sanath A|Vijaya Karnataka•
dk parameshwar visits various districts for drought situation observation
ಜಾಹೀರಾತು ಪುಟ - 2

ಬರ ನಿರ್ವಹಣೆಗೆ ಆದ್ಯತೆ, ತುರ್ತು ಪರಿಹಾರಕ್ಕೆ ಮುಂಜಾಗ್ರತೆ
ರಾಜ್ಯದಲ್ಲಿಭೀಕರ ಬರ ಪರಿಸ್ಥಿತಿ ಸೃಷ್ಟಿಯಾಗಿದ್ದು, ರೈತರು ಹಾಗೂ ಸಾಮಾನ್ಯ ಜನರು ನೆಮ್ಮದಿಯ ಜೀವನ ನಡೆಸುವುದೇ ಕಷ್ಟಕರವಾಗಿ ಪರಿಣಮಿಸಿದೆ. ಹವಾಮಾನ ಇಲಾಖೆ ಮುನ್ಸೂಚನೆ, ಕೇಂದ್ರ ಸರಕಾರದ ಎಚ್ಚರಿಕೆಗಳ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರ ಪರಿಸ್ಥಿತಿ ನಿರ್ವಹಣೆಯನ್ನು ಸವಾಲಾಗಿ ಸ್ವೀಕರಿಸಿ ಸಮರ್ಥವಾಗಿ ಎದುರಿಸಲು ಕ್ರಮ ಕೈಗೊಂಡಿದ್ದಾರೆ. ಬರ ನಿರ್ವಹಣೆ ಸಂಬಂಧ ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಅಗತ್ಯ ಸಲಹೆ, ಸೂಚನೆ ನೀಡಿದ ಮುಖ್ಯಮಂತ್ರಿಗಳು, ಅಧಿಕಾರಿ- ನೌಕರ ವರ್ಗವು ಪರಿಹಾರ, ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಲ್ಲಿಸಂಪೂರ್ಣವಾಗಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿ ಯೋಜಿತ ರೀತಿಯಲ್ಲಿನಿಭಾಯಿಸುವ ಎಲ್ಲರೀತಿಯ ಮುಂಜಾಗ್ರತೆ ಕೈಗೊಂಡಿದ್ದಾರೆ.

ಪ್ರಸಕ್ತ 2026ರ ನೈಋುತ್ಯ ಮುಂಗಾರು ಅವಧಿಯಲ್ಲಿರಾಜ್ಯದಲ್ಲಿಶೇ.35ರಷ್ಟು ಮಳೆ ಕೊರತೆಯಾಗಿದೆ. ವಾಡಿಕೆಯಂತೆ 852 ಮಿ.ಮೀ. ಮಳೆಯಾಗಬೇಕಿತ್ತು. ಆದರೆ, ಕೇವಲ 551 ಮಿ.ಮೀ. ಮಳೆಯಾಗಿದೆ. ಇದು 1956ರ ಬಳಿಕ ದಾಖಲಾದ ಎರಡನೇ ಅತ್ಯಂತ ಕಡಿಮೆ ಹಾಗೂ 1901ರಿಂದೀಚೆಗೆ ದಾಖಲಾದ ಏಳನೇ ಅತ್ಯಂತ ಕಡಿಮೆ ಮುಂಗಾರು ಮಳೆಯಾಗಿದೆ ಎಂಬುದು ಗಮನಾರ್ಹ. 57.93 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿದ್ದ ಬೆಳೆ ಹಾನಿ ಸಂಭವಿಸಿದೆ. ಇದರಲ್ಲಿ53.92 ಲಕ್ಷ ಹೆಕ್ಟೇರ್ ಕೃಷಿ ಬೆಳೆಯಾಗಿದ್ದರೆ, 4.01 ಲಕ್ಷ ಹೆಕ್ಟೇರ್ ತೋಟಗಾರಿಕಾ ಬೆಳೆಗಳು ಸೇರಿವೆ. ಕೃಷಿ ವೆಚ್ಚವನ್ನು ಆಧಾರವಾಗಿ ಪರಿಗಣಿಸಿದರೆ 62,481.88 ಕೋಟಿ ರೂ. ಆರ್ಥಿಕ ನಷ್ಟದ ಅಂದಾಜು ಇದೆ.

ಬರ ಪರಿಸ್ಥಿತಿಯಿಂದಾಗಿ ಕೃಷಿ ಬೆಳೆ ದೊಡ್ಡ ಪ್ರಮಾಣದಲ್ಲಿನಷ್ಟ ಉಂಟಾಗಿದೆ. ಹಾಗಾಗಿ ರೈತರಿಗೆ ಸರಿಯಾದ ರೀತಿಯಲ್ಲಿನೆರವು, ಪರಿಹಾರ ಸಿಗುವಂತೆ ಮಾಡಲು ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ರಾಜ್ಯ ಸರಕಾರವು ಕೇಂದ್ರ ಸರಕಾರದ ಮಾರ್ಗಸೂಚಿಯಂತೆಯೇ ಎಲ್ಲಪ್ರಕ್ರಿಯೆ ನಡೆಸಲು ಕ್ರಮ ವಹಿಸಿದೆ. ಅದರಂತೆ ನಿರ್ದಿಷ್ಟ ಮಾನದಂಡಗಳನ್ನು ಪರಿಗಣಿಸಿಯೇ ಹಂತ ಹಂತವಾಗಿ ಬರಪೀಡಿತ ತಾಲೂಕುಗಳನ್ನು ಘೋಷಿಸಿದೆ. ಯಾರು ಎಷ್ಟೇ ಒತ್ತಡ ಹೇರಿದರೂ, ಪ್ರಭಾವ ಬೀರಿದರೂ ಗ್ರೌಂಡ್ ಟ್ರೂಥಿಂಗ್ ಪ್ರತಿಕ್ರಿಯೆ ನಡೆಸಿ ಈವರೆಗೆ 226 ತಾಲೂಕುಗಳು ಬರಪೀಡಿತವೆಂದು ಸರಕಾರ ಅಧಿಕೃತವಾಗಿ ಘೋಷಿಸಿದೆ.

ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ

ಬರ ಪರಿಹಾರಕ್ಕಾಗಿ ಕೇಂದ್ರ ಸರಕಾರಕ್ಕೆ ಮುಖ್ಯಮಂತ್ರಿಗಳು ಸೇರಿದಂತೆ ಸರಕಾರವು ಹಲವು ಬಾರಿ ಪತ್ರ ಮುಖೇನ ಮನವಿ ಮಾಡಿದೆ. ಮುಖ್ಯವಾಗಿ ಬರ ಪರಿಹಾರ ರೂಪದಲ್ಲಿ20,585.73 ಕೋಟಿ ರೂ. ಪರಿಹಾರ ಕೋರಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದೆ. ಇದರಲ್ಲಿಬೆಳೆ ಹಾನಿಯ ಪರಿಹಾರದ ಸಹಾಯಧನಕ್ಕಾಗಿ ಇನ್ ಪುಟ್ ಸಬ್ಸಿಡಿ ರೂಪದಲ್ಲಿ6,128.70 ಕೋಟಿ ರೂ., 61.91 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಜೀವನೋಪಾಯ ಪರಿಹಾರವಾಗಿ 12,146.99 ಕೋಟಿ ರೂ., ಕುಡಿಯುವ ನೀರಿನ ಪೂರೈಕೆ ಉದ್ದೇಶಕ್ಕೆ 1,727 ಕೋಟಿ ರೂ. ಹಾಗೂ ಪಶುಸಂಗೋಪನೆ, ಜಾನುವಾರುಗಳ ಸಂರಕ್ಷಣೆಗಾಗಿ 583.04 ಕೋಟಿ ರೂ. ನೆರವು ನೀಡುವಂತೆ ಕೋರಿಕೆ ಸಲ್ಲಿಸಿದೆ. ರೈತರಿಗೆ ದಿನಕ್ಕೆ 327 ರೂ.ನಂತೆ 60 ದಿನಗಳ ಅವಧಿಗೆ ಜೀವನೋಪಾಯ ಪರಿಹಾರವನ್ನು ಲೆಕ್ಕ ಹಾಕಿ ಒದಗಿಸುವಂತೆ ಮನವಿ ಸಲ್ಲಿಸಿದೆ.

ಕುಡಿಯುವ ನೀರು ಪೂರೈಕೆ

ಗ್ರಾಮೀಣ ಪ್ರದೇಶಗಳಲ್ಲಿಶುದ್ಧ ಕುಡಿಯುವ ನೀರು ಪೂರೈಕೆಗೆ ವಿಶೇಷ ಒತ್ತು ನೀಡಿರುವ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರವು ಅಗತ್ಯವಿರುವ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಕ್ರಮ ವಹಿಸಿದೆ. ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ಪೂರೈಸಲು ನಿರ್ದೇಶನ ನೀಡಿದೆ. ಕುಡಿಯುವ ನೀರು ಪೂರೈಕೆಗಾಗಿಯೇ ಎಲ್ಲಜಿಲ್ಲಾಧಿಕಾರಿಗಳಿಗೆ ಒಟ್ಟು 117 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಜತೆಗೆ ಪ್ರತಿ ಕ್ಷೇತ್ರಗಳಿಗೆ ಒಟ್ಟು 189 ಕೋಟಿ ರೂ. ಅನುದಾನ ನೀಡಿದ್ದು, ಇದನ್ನೂ ಕುಡಿಯುವ ನೀರು ಪೂರೈಕೆ ಕಾರ್ಯಕ್ಕೆ ಬಳಸಲು ಸೂಚಿಸಲಾಗಿದೆ. ಜಾನುವಾರುಗಳಿಗೆ ಮೇವಿನ ಕೊರತೆ ಇರುವ ಕಡೆ ಮೇವಿನ ಕಿಟ್ ಗಳನ್ನು ನೀಡಲಾಗಿದೆ. ಮೇವು ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ. ಮೇವು ಕಿಟ್ ಖರೀದಿಗೆ 25 ಕೋಟಿ ರೂ.ಗಳನ್ನು ಸರಕಾರ ಮಂಜೂರು ಮಾಡಿದೆ.

ಬರಗಾಲದ ಸಂದರ್ಭದಲ್ಲಿಬೆಳೆ ನಷ್ಟಕ್ಕೆ ಸಿಲುಕಿ ಸಂಕಷ್ಟದಲ್ಲಿರುವ ರೈತರು ಈ ಹಿಂದೆ ಪಡೆದ ಸಾಲ ಮರುಪಾವತಿಗೆ ತೊಂದರೆ ಅನುಭವಿಸುವಂತಾಗಬಾರದು ಎಂಬ ಕಾರಣಕ್ಕೆ ಮೊರಟೋರಿಯಂ ಅವಧಿಯನ್ನು 12 ತಿಂಗಳಿಗೆ ಹಾಗೂ ಸಾಲ ಮರು ಪಾವತಿ ಅವಧಿಯನ್ನು 36 ತಿಂಗಳಿನಿಂದ 60 ತಿಂಗಳವರೆಗೆ ವಿಸ್ತರಿಸುವಂತಹ ಮಹತ್ವದ ತೀರ್ಮಾನ ಕೈಗೊಂಡಿದೆ. ಹಾಗೆಯೇ ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಂದ ಯಾರಾದರೂ ರೈತರಿಗೆ ಕಿರುಕುಳ ನೀಡಿದರೆ ಇಲ್ಲವೇ ತೊಂದರೆ ಕೊಟ್ಟರೆ ಅವರ ವಿರುದ್ಧ ಕಠಿಣ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ.

ಎಲ್ಲಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾಪಂಚಾಯಿತಿ ಸಿಇಒಗಳೊಂದಿಗೆ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರ ನಿರ್ವಹಣೆಯಲ್ಲಿಯಾವುದೇ ರೀತಿಯ ಲೋಪವಾಗದಂತೆ ಅಗತ್ಯ ಮುನ್ನೆಚ್ಚರಿಕೆ, ಪರಿಹಾರ ಕ್ರಮ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿನ ಹಣವನ್ನೂ ಬಳಸಿಕೊಂಡು ಪರಿಸ್ಥಿತಿ ನಿಭಾಯಿಸುವಂತೆಯೂ ನಿರ್ದೇಶನ ನೀಡಿದ್ದಾರೆ. ಎಲ್ಲಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಸಂಕಷ್ಟದಲ್ಲಿರುವ ಜನರಿಗೆ ನೆರವಾಗುವಂತೆ ಸೂಚಿಸಿದ್ದಾರೆ. ಅದರ ಧನಾತ್ಮಕ ಫಲಿತಾಂಶಗಳು ಸದ್ಯ ಕಾಣಲಾರಂಭಿಸಿರುವುದು ಭರವಸೆ ಮೂಡಿಸಿದೆ.

----

ಬರ ನಿರ್ವಹಣೆ ಪ್ರಮುಖಾಂಶ

* 226 ತಾಲೂಕು ಬರಪೀಡಿತ

* ಬರ ಪಟ್ಟಿಗೆ ಸೇರಿಸಲು ವೈಜ್ಞಾನಿಕವಾಗಿ ಗ್ರೌಂಡ್ ಟ್ರೂಥಿಂಗ್

* ಮುಂಜಾಗ್ರತೆಗಾಗಿ ಜಿಲ್ಲಾಡಳಿತಗಳೊಂದಿಗೆ ಸಿಎಂ ಸಭೆ

* ಜನ, ಜಾನುವಾರಿಗೆ ಕುಡಿಯುವ ನೀರಿಗೆ ತುರ್ತು ಪರಿಹಾರ

* ರೈತರ ಸಾಲ ಮರು ಪಾವತಿ ಅವಧಿ ವಿಸ್ತರಣೆ

* ಮೈಕ್ರೋ ಫೈನಾನ್ಸ್ ಗಳಿಗೆ ಕಠಿಣ ಎಚ್ಚರಿಕೆ

-----------------------------------------

ಎಲ್ಲಸಚಿವರಿಂದ ಬರ ಅಧ್ಯಯನ ಪ್ರವಾಸ

ರಾಜ್ಯದಲ್ಲಿಬರ ಪರಿಸ್ಥಿತಿ ಎದುರಾಗುತ್ತಿದ್ದಂತೆ ಸಚಿವ ಸಂಪುಟದ ಎಲ್ಲಸದಸ್ಯರನ್ನು ಬರ ಅಧ್ಯಯನ ಪ್ರವಾಸಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕಳುಹಿಸಿ ಕೊಟ್ಟರು. ಈ ಸಂಬಂಧ ಸಚಿವರುಗಳಿಗೆ ಜಿಲ್ಲಾವಾರು ಜವಾಬ್ದಾರಿ ಹಂಚಿಕೆ ಮಾಡಿದ ಅವರು, ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಅರಿತು ವರದಿ ಸಲ್ಲಿಸುವಂತೆ ಸೂಚಿಸಿದರು.

ಅದರಂತೆ ಬರ ಅಧ್ಯಯನ ಪ್ರವಾಸ ಕೈಗೊಂಡ ಸಚಿವರುಗಳು, ಬೆಳೆ ನಷ್ಟದಿಂದ ಕಂಗಾಲಾದ ರೈತರು ಹಾಗೂ ಬಾಧಿತ ಜನರನ್ನು ಭೇಟಿಯಾಗಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ವಾಸ್ತವಾಂಶದ ಆಧಾರದಲ್ಲಿಸರಕಾರಕ್ಕೆ ವರದಿ ಸಲ್ಲಿಸಿದರು.

ಸಿಎಂ, ಡಿಸಿಎಂರಿಂದಲೂ ಪ್ರವಾಸ

ಬರಪೀಡಿತ ಪ್ರದೇಶಗಳಿಗೆ ಸ್ವತಃ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಪ್ರವಾಸ ಮಾಡಿದರು. ಸಂಕಷ್ಟಕ್ಕೆ ಒಳಗಾದ ಜನರನ್ನು ಭೇಟಿಯಾದ ಮುಖ್ಯಮಂತ್ರಿಯವರು ಪರಿಹಾರದ ಭರವಸೆಯೊಂದಿಗೆ ಸರಕಾರ ತಮ್ಮೊಂದಿಗೆ ಇದೆ ಎಂಬ ಧೈರ್ಯ ತುಂಬಿದರು. ಜತೆಗೆ ಕಂದಾಯ ಇಲಾಖೆಯ ಹೊಣೆ ಹೊತ್ತಿರುವ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ ಅವರು ನಾನಾ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕನ ಮಾಡಿದರು.

ಬರದ ಚರ್ಚೆಗೆ ಸದನ ಸಾಕ್ಷಿ, ರೈತರಿಗೆ 2,500 ರೂ. ನೆರವಿನ ಘೋಷಣೆ

ರಾಜ್ಯದಲ್ಲಿತೀವ್ರ ಬರ ಪರಿಸ್ಥಿತಿಯ ಲಕ್ಷಣ ಕಾಣುತ್ತಿದ್ದಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಚ್ಚೆತ್ತುಕೊಂಡು ಸಂಪುಟ ಸಹೋದ್ಯೋಗಿಗಳೊಂದಿಗೆ ತುರ್ತು ಸಭೆ ನಡೆಸಿ ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿಚರ್ಚಿಸಿದರು. ರೈತರು, ಸಾಮಾನ್ಯ ಜನರ ಹಿತ ಕಾಪಾಡುವ ಸಂಬಂಧ ಪರಿಹಾರ ಹಾಗೂ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮಹತ್ವದ ಸಲಹೆ, ಸೂಚನೆ ನೀಡಿದರು. ಜತೆಗೆ ರಾಜ್ಯಾದ್ಯಂತ ಬರದ ಭೀಕರತೆ ಅರಿಯುವ ಹಾಗೂ ಆ ಪರಿಸ್ಥಿತಿಗೆ ತಕ್ಕಂತೆ ಪರಿಹಾರಾತ್ಮಕ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ವಿಸ್ತೃತವಾಗಿ ಚರ್ಚಿಸಲು ವಿಧಾನಮಂಡಲ ಅಧಿವೇಶನವನ್ನೇ ಕರೆದು ವೇದಿಕೆ ಕಲ್ಪಿಸಿದರು. ಈ ಬಗ್ಗೆ ವಿಶೇಷ ಮೆಚ್ಚುಗೆಯೂ ವ್ಯಕ್ತವಾಯಿತು.

ಬರ ಪರಿಸ್ಥಿತಿಯಲ್ಲಿನಾಡಿನ ಜನರ ಸಮಸ್ಯೆ, ಸವಾಲು, ಬೇಡಿಕೆ, ನಿರೀಕ್ಷೆ, ಅಭಿವೃದ್ಧಿ, ಕಲ್ಯಾಣದ ವಿಚಾರವಾಗಿ ಮುಕ್ತ ಚರ್ಚೆಗೆ ಅವಕಾಶವಿರುವ ವೇದಿಕೆ ಎಂದರೆ ಅದು ವಿಧಾನಮಂಡಲ ಅಧಿವೇಶನ. ಆಡಳಿತಾರೂಢ ಪಕ್ಷದ ಜತೆಗೆ ಪ್ರತಿಪಕ್ಷಗಳು ಕೂಡ ತಮ್ಮಲ್ಲಿರುವ ಮಾಹಿತಿಯನ್ನು ಹಂಚಿಕೊಂಡು ಸರಕಾರಕ್ಕೆ ಸಲಹೆ, ಸೂಚನೆ ನೀಡಿ ಜನರ ರಕ್ಷಣೆಗೆ ಧಾವಿಸುವಂತೆ ಮಾಡುವ ಮಹತ್ವದ ಅವಕಾಶವನ್ನೂ ಅಧಿವೇಶನ ಕಲ್ಪಿಸುತ್ತದೆ. ಈ ಹಿನ್ನೆಲೆಯಲ್ಲಿಮುಖ್ಯಮಂತ್ರಿಗಳು ಕಳೆದ ಸೆಪ್ಟೆಂಬರ್ ನಲ್ಲಿವಿಶೇಷ ವಿಧಾನಮಂಡಲ ಅಧಿವೇಶನ ಕರೆದು ಜನರನ್ನು ಬಾಧಿಸುತ್ತಿರುವ ಬರ ಪರಿಸ್ಥಿತಿ ಕುರಿತಂತೆ ಸಮಗ್ರ ಚರ್ಚೆಗೆ ಅವಕಾಶ ಒದಗಿಸಿದರು.

ಬರ ಪರಿಸ್ಥಿತಿ ವಿಸ್ತೃತ ಚರ್ಚೆ

ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಬೆಳೆದು ನಿಂತ ಬೆಳೆಗಳ ಸಂರಕ್ಷಣೆ, ಅಲ್ಪ ಮಳೆ, ತೇವಾಂಶದಲ್ಲಿಬೆಳೆಯಬಹುದಾದ ಬೆಳೆಗಳತ್ತ ಗಮನ ಹರಿಸುವುದು, ಕೂಲಿ ಕಾರ್ಮಿಕರ ಜೀವನ ನಿರ್ವಹಣೆ, ವಲಸೆ ತಡೆ ಕ್ರಮಗಳು, ವಿಬಿಜಿ ರಾಮ್ ಜಿ ಯೋಜನೆಯಡಿ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸಿ ಬರ ಪರಿಸ್ಥಿತಿಯ ಹೊಡೆತದಿಂದ ಪಾರು ಮಾಡುವ ಪ್ರಯತ್ನ ಸೇರಿದಂತೆ ಇತರೆ ವಿಚಾರಗಳ ಬಗ್ಗೆ ಸದನದಲ್ಲಿಸುದೀರ್ಘ ಚರ್ಚೆ ನಡೆಯಿತು. ವಿಧಾನಸಭೆಯಲ್ಲಿ100ಕ್ಕೂ ಹೆಚ್ಚು ಶಾಸಕರು ಬರ ಪರಿಸ್ಥಿತಿ ಕುರಿತ ಚರ್ಚೆಯಲ್ಲಿಪಾಲ್ಗೊಂಡು ತಮ್ಮ ಕ್ಷೇತ್ರಗಳಲ್ಲಿನ ಬರದ ಚಿತ್ರಣವನ್ನು ಬಿಚ್ಚಿಡುವ ಪ್ರಯತ್ನ ಮಾಡಿದರು. ವಿಧಾನ ಪರಿಷತ್ ನಲ್ಲೂಸದಸ್ಯರು ಬರ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಮಹತ್ವದ ಚರ್ಚೆ ನಡೆಸಿದರು.

ರಾಜ್ಯ ಸರಕಾರ ಬರ ನಿರ್ವಹಣೆಗೆ ಕೈಗೊಂಡಿರುವ ಪರಿಣಾಮಕಾರಿ ಕ್ರಮಗಳ ಬಗ್ಗೆ ಪ್ರಸ್ತಾಪಿಸಿ ಹಲವರು ಮೆಚ್ಚುಗೆ ವ್ಯಕ್ತಪಡಿಸುವ ಜತೆಗೆ ಮುಂದಿನ ದಿನಗಳಲ್ಲೂಬರ ತೀವ್ರತೆ ಜನರನ್ನು ಕಾಡದಂತೆ ತಡೆಯುವ ನಿಟ್ಟಿನಲ್ಲಿಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸಲಹೆ, ಅಭಿಪ್ರಾಯಗಳನ್ನು ನೀಡಿದರು. ಉಭಯ ಸದನಗಳಲ್ಲೂಸದಸ್ಯರು ಬರ ಭೀಕರತೆಯನ್ನು ಸರಕಾರಕ್ಕೆ ತಿಳಿಸುವ ಪ್ರಯತ್ನ ನಡೆಸುವ ಜತೆಗೆ ಜನಹಿತಕ್ಕಾಗಿ ಕೈಗೊಳ್ಳಬೇಕಾದ ಪರಿಹಾರ ಕ್ರಮಗಳ ಕುರಿತು ವಿಚಾರ ಮಂಡಿಸಿದರು.

ಪ್ರತಿ ರೈತರಿಗೆ 2,500 ರೂ. ನೆರವು ಘೋಷಣೆ

ಎಲ್ಲವನ್ನೂ ತಾಳ್ಮೆಯಿಂದ ಆಲಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರ ಪರಿಸ್ಥಿತಿಯಲ್ಲಿರೈತರು, ಸಾಮಾನ್ಯ ಜನರ ಹಿತರಕ್ಷಣೆಗೆ ಅಗತ್ಯವಿರುವ ಎಲ್ಲಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೊಳ್ಳುವ ಭರವಸೆಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿನೀಡಿದರು. ಈ ಮೂಲಕ ರಾಜ್ಯದ ಜನತೆಗೆ ಸಂದೇಶ ಸಾರಿದರು. ಬರ ಪರಿಸ್ಥಿತಿಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಅನ್ನದಾತರ ಕುಟುಂಬಗಳಿಗೆ ನೆರವಾಗಲು ಪ್ರತಿ ರೈತರಿಗೆ 2,500 ರೂ. ಇನ್ ಪುಟ್ ಸಬ್ಸಿಡಿ ಬಿಡುಗಡೆ ಮಾಡುವ ಮಹತ್ವದ ಘೋಷಣೆ ಮಾಡಿದರು. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ (ಎನ್ ಡಿಆರ್ ಎಫ್ ) ನೆರವು ನಿರೀಕ್ಷಿಸಿ ಈ ಪರಿಹಾರವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದು, ಇದರಿಂದ ಸುಮಾರು 45ರಿಂದ 50 ಲಕ್ಷ ರೈತರಿಗೆ ಅನುಕೂಲವಾಗುತ್ತಿದೆ. ಈ ಮಹತ್ವದ ನೆರವಿನ ಕಾರ್ಯಕ್ಕೆ 1,550 ಕೋಟಿ ರೂ. ಭರಿಸಲು ಹಣಕಾಸು ಸಚಿವರೂ ಆದ ಮುಖ್ಯಮಂತ್ರಿಗಳು ಕ್ರಮ ವಹಿಸಿದ್ದಾರೆ.

ಕೇಂದ್ರ ಸಹಕರಿಸಿದರೆ ಸಾಲ ಮನ್ನಾ

ಭೀಕರ ಬರಗಾಲದ ಹಿನ್ನೆಲೆಯಲ್ಲಿಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ರಕ್ಷಿಸುವುದು ಸರಕಾರದ ಜವಾಬ್ದಾರಿ. ಈ ವಿಚಾರವಾಗಿ ಕೇಂದ್ರ ಸರಕಾರವೇನಾದರೂ ಸಹಕಾರ ನೀಡಿದರೆ ರೈತರ ಸಾಲ ಮನ್ನಾ ಮಾಡಲು ರಾಜ್ಯ ಸರಕಾರ ಸಿದ್ಧವಿದೆ. ಅಗತ್ಯವೆನಿಸಿದರೆ ಎಲ್ಲಯೋಜನೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಯಾದರೂ ರೈತರಿಗೆ ನೆರವಾಗಲಿದೆ. ಕೇಂದ್ರ ಸರಕಾರ ನಿರ್ದಿಷ್ಟ ಪಾಲು ಭರಿಸಿದರೆ ಸಾಲ ಮನ್ನಾಗೆ ಸಿದ್ಧ ಎಂದು ಮುಖ್ಯಮಂತ್ರಿಗಳು ಸದನದಲ್ಲೇ ಪ್ರಕಟಿಸಿದ್ದು ಗಮನಾರ್ಹ.

ಬರ ಪರಿಸ್ಥಿತಿಯಿಂದ ತೊಂದರೆಯಲ್ಲಿರುವ ರೈತ ಸಮುದಾಯದೊಂದಿಗೆ ಸರಕಾರ ಇದೆ. ಪರಿಹಾರ ಕೆಲಸಗಳಿಗೆ ಹಣದ ಕೊರತೆ ಇಲ್ಲ. ರೈತರ ಸಾಲ ಮರುಪಾವತಿ ಅವಧಿಯನ್ನು ಈಗಾಗಲೇ ವಿಸ್ತರಣೆ ಮಾಡಲಾಗಿದೆ. ಉದ್ಯೋಗ ಅರಸಿ ಜನ ವಲಸೆ ಹೋಗುವುದನ್ನು ತಪ್ಪಿಸಲು ವಿಬಿಜಿ ರಾಮ್ ಜಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲಾಗಿದೆ. ಜಾನುವಾರುಗಳಿಗೆ ಮೇವು ಕೊರತೆಯಾಗದಂತೆಯೂ ಕ್ರಮ ವಹಿಸಲಾಗಿದೆ. ಕೃಷಿ ಪಂಪ್ ಸೆಟ್ ಗಳಿಗೆ 5ರಿಂದ 7 ತಾಸು ತ್ರೀಫೇಸ್ ವಿದ್ಯುತ್ ಪೂರೈಸಲಾಗುತ್ತಿದೆ. ಮೈಕ್ರೋ ಫೈನಾನ್ಸ್ ನವರಿಂದ ಕಿರುಕುಳ ತಪ್ಪಿಸಲು ನಿರ್ದೇಶನ ನೀಡಲಾಗಿದೆ. ಒಟ್ಟಾರೆ, ಬರಗಾಲದ ತೀವ್ರ ಸಂಕಷ್ಟದ ಸ್ಥಿತಿಯಲ್ಲಿರೈತರನ್ನು ರಕ್ಷಣೆಗೆ ಎಲ್ಲಪ್ರಾಮಾಣಿಕ ಪ್ರಯತ್ನಗಳನ್ನೂ ಸರಕಾರ ಮಾಡಲಿದೆ ಎಂದು ಡಿ.ಕೆ.ಶಿವಕುಮಾರ್ ಸದನಗಳಲ್ಲೇ ಭರವಸೆ ನೀಡಿ ರೈತರು ಹಾಗೂ ಬರದಿಂದ ತೊಂದರೆಗೆ ಒಳಗಾದ ರಾಜ್ಯದ ಜನರಿಗೆ ಸ್ಥೈರ್ಯ ತುಂಬಿದ್ದಾರೆ