ಜೈಲುಗಳಲ್ಲಿಮಾದಕವಸ್ತು ಪ್ರಕರಣ ಆರೋಪಿಗಳು ಹೆಚ್ಚುತ್ತಿದ್ದಾರೆ: ಅಧಿಕಾರಿಗಳಿಗೆ ತಲೆನೋವು

Contributed by: crastalp19@gmail.com|Vijaya Karnataka•
drug offenders releasing from prisons facing health limitations
ಕಾಸರಗೋಡು: ಮಾದಕವಸ್ತು ಪ್ರಕರಣಗಳಲ್ಲಿಬಂಧಿಸಲಾದ ಆರೋಪಿಗಳ ಸ್ವಭಾವವು ಜಯಲು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸುತ್ತಿದೆ. ಮಾದಕವಸ್ತು ಮಾಫಿಯಾ ಪ್ರಕರಣಗಳಿಗೊಳಗಾಗಿ ಜೈಲು ಸೇರುವವರಲ್ಲಿಶೇ. 70 ಮಂದಿ ಕೇವಲ ಮಾರಾಟಗಾರರು ಮಾತ್ರವಲ್ಲಮಾರಕ ಮಾದಕವಸ್ತುಗಳ ದಾಸರೂ ಆಗಿದ್ದಾರೆ. ಮಾದಕವಸ್ತು ಲಭಿಸದಾಗ ಇವರು ಸ್ವಯಂ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಜೈಲಿನ ಏಕಾಂತದಲ್ಲಿಇವರು ತೋರಿಸುತ್ತಿರುತ್ತಿರುವ ಅಸಾಧರಣ ವಿಕೃತಿಗಳಿಗೆ ಹಾಗೂ ಮಾನಸಿಕ ಅಸ್ವಸ್ಥತೆಗಳಿಗೆ ಜೈಲು ಅಧಿಕಾರಿಗಳಷ್ಟೇ ಸಾಕ್ಷಿಯಾಗಿದ್ದಾರೆ. ಮಾದಕವಸ್ತು ಪ್ರಕರಣಗಳಿಗೊಳಗಾಗಿ ಜೈಲು ತಲುಪುವವರ ಸಂಖ್ಯೆಯು ಭಾರೀ ಪ್ರಮಾಣದಲ್ಲಿಹೆಚ್ಚಿರುವುದರಿಂದ ಜೈಲಿನಲ್ಲಿಮುಂಜಾಗ್ರತೆ ಕ್ರಮಗಳನ್ನು ಹೆಚ್ಚಿಸುವ ಅಗತ್ಯವಿದೆ.ನಿರಂತರ ಮಾದಕವಸ್ತು ಉಪಯೋಗಿಸುವವರು ಜೈಲು ಸೇರುತ್ತಿದ್ದು, ಮಾದಕವಸ್ತು ಲಭಿಸದ ಕಾರಣ ಪ್ರತ್ಯೇಕ ಮಾನಸಿಕ ಸ್ಥಿತಿಗೆ ತಲುಪುತ್ತಾರೆ. ಆರಂಭದ ದಿನಗಳಲ್ಲಿಸಿಬಂದಿಗಳೊಂದಿಗೆ, ಸಹಕೈದಿಗಳೊಂದಿಗೆ ಮಾತಿನಚಕಾಮಕಿಗಿಳಿಯುತ್ತಾರೆ. ಕೆಲವೊಮ್ಮೆ ಹೊಡೆದಾಟವು ನಡೆಯುತ್ತದೆ. ಕೆಲವರಿಗೆ ಸ್ವಯಂ ಗಾಯಗೊಳಿಸುವ ಅಭ್ಯಾಸವೂ ಇದೆ. ಮಾದಕವಸ್ತು ಸಿಗದಾಗ ಮಾನಸಿಕ ಒತ್ತಡ, ವೈಕಾರಿಕ ಪ್ರತಿಕ್ರಿಯೆ, ಶಾರೀರಿಕ ಸಮಸ್ಯೆಗಳು, ವಿಷಾದ ಎಂಬಿವು ಪ್ರಕಟಗೊಳ್ಳುತ್ತವೆ. ಇವರನ್ನು ಜೈಲು ಅಧಿಕಾರಿಗಳು ಪ್ರತ್ಯೇಕವಾಗಿ ಗಮನಿಸುತ್ತಾರೆ. ನಿರಂತರ ಈ ರೀತಿ ವರ್ತಿಸುವ ಕೈದಿಗಳಿಗೆ ಪ್ರತ್ಯೇಕ ಚಿಕಿತ್ಸೆಯನ್ನು ಜೈಲಿನೊಳಗಿನ ಆಸ್ಪತ್ರಗಳಲ್ಲಿನೀಡಲಾಗುತ್ತದೆ. ತಿಂಗಳುಗಳ ಬಳಿಕ ಕೆಲವರು ಒಂಟಿತನ ಅನುಬವಿಸಿ ಮೌನವಾಗಿ ಬಿಡುತ್ತಾರೆ. ಸಂಬಂಧಿಕರು, ಸಂದರ್ಶಕರಾದ ಹತ್ತಿರದವರನ್ನು ಕಾಣಲು ಆರೋಪಿಗಳು ಆಸಕ್ತಿ ತೋರಿಸುವುದೂ ಇಲ್ಲ.

ಕಳೆದ ಒಂದು ವರ್ಷದಿಂದ ರಾಜ್ಯದಲ್ಲಿಅತ್ಯಧಿಕ ಸಂಖ್ಯೆಯಲ್ಲಿಜೈಲು ಸೇರುವುದು ಮಾದಕವಸ್ತು ಪ್ರಕರಣದಲ್ಲಿಹಾಗೂ ಪೋಕ್ಸೋ ಪ್ರಕರಣದಲ್ಲಾಗಿದೆ. 2025ರಲ್ಲಿರಾಜ್ಯಾದ್ಯಂತ 36,316 ಮಾದಕವಸ್ತು ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ3800 ಮಂದಿಗೆ ಶಿಕ್ಷೆ ವಿಧಿಸಿದ್ದು, 3800 ಮಂದಿಗೆ ಶಿಕ್ಷೆ ವಿಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಮಾದಕವಸ್ತು ಕೈದಿಗಳಿಗೆ ಮಾನಸಿಕ ಬೆಂಬಲ: ಮಾದಕವಸ್ತು ಮುಕ್ತಿಗಾಗಿ ಮನಃಶಾಸ್ತ್ರಜ್ಞರ ಹಾಗೂ ಕೌನ್ಸಿಲರ್ ಗಳ ಸೇವೆಯನ್ನು ಜೈಲು ಇಲಾಖೆಯು ನೀಡುತ್ತಿದೆ. ಮನಸ್ಸು ಶಾಂತಗೊಳಿಸುವುದಕ್ಕಾಗಿ ನೌಕರಿ ತರಬೇತಿ, ಯೋಗ, ಧ್ಯಾನ, ಜೈಲಿನ ನಾನಾ ನೌಕರಿಗಳಲ್ಲಿನೇಮಿಸುವುದು ಮಾಡಲಾಗುತ್ತದೆ. ಮಾದಕವಸ್ತು ಪ್ರಕರಣಗಳ ಆರೋಪಿಗಳನ್ನು ಕೇವಲ ಆರೋಪಿಗಳಾಗಿ ಮಾತ್ರವಲ್ಲಪ್ರತ್ಯೇಕ ಮಾನಸಿಕ ಸಾಂತ್ವನ ಹಾಗೂ ಚಿಕಿತ್ಸೆ ಅಗತ್ಯವಿರುವ ವ್ಯಕ್ತಿಗಳಾಗಿ ಜೈಲು ಅಧಿಕಾರಿಗಳು ಕಾಣುತ್ತಾರೆ.

ಚಿತ್ರ: 22ಕೆಎಸ್ ಎಲ್ ಜೈಲು