ಸಾಲ ಬಾಧೆಗೆ ರೈತರೊಬ್ಬರು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಮೀಪದ ದೊಡ್ಡ ಹೂನ್ನೂರು ಗ್ರಾಮದ ಸತೀಶ್ (45)ಮೃತರು.ಮನೆಯಲ್ಲಿಕ್ರಿಮಿನಾಶಕ ಸೇವಿಸಿ ಅಸ್ವಸ್ಥರಾಗಿದ್ದ ಸತೀಶ್ ಅವರನ್ನು ತಕ್ಷಣ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
2.5 ಎಕರೆ ಜಮೀನಿನಲ್ಲಿಕೃಷಿ ಕಾರ್ಯ ನಡೆಸುತ್ತಿದ್ದ ಸತೀಶ್ ಬೇಸಾಯಕ್ಕಾಗಿ ಸಂಘ ಸೇರಿದಂತೆ ಹಲವೆಡೆ ಸಾಲ ಮಾಡಿಕೊಂಡಿದ್ದು, ಸಾಲ ತೀರಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೃತರ ಪುತ್ರ ದೂರು ನೀಡಿದ್ದು, ಬೈಲುಕುಪ್ಪೆ ಪೊಲೀಸ್ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.