ವಿಕ ಸುದ್ದಿಲೋಕ ಕುಶಾಲನಗರಕನ್ನಡಭಾಷೆ ಬಳಸದೆ ಸಂಪೂರ್ಣ ಆಂಗ್ಲಮಯ ಫಲಕ ಅಳವಡಿಕೆ ಖಂಡಿಸಿ ಎಚ್ .ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.
ಕೊಡಗು-ಮೈಸೂರು ಗಡಿಭಾಗದ ಅರಣ್ಯ ತಪಾಸಣಾ ಗೇಟ್ ಸಮೀಪದಲ್ಲಿಅಳವಡಿಸಿರುವ ಟ್ರೆಂಡ್ಸ್ ಗೆ ಸಂಬಂಧಿಸಿದ ನಾಮಫಲಕ ಸಂಪೂರ್ಣ ಆಂಗ್ಲಮಯವಾಗಿದೆ ಎಂದು ಆರೋಪಿಸಿ ಕರವೇ ಜಿಲ್ಲಾಧ್ಯಕ್ಷ ಡಾ.ಬಿ. ಎ.ದಿನೇಶ್ ಶೆಟ್ಟಿ ನೇತೃತ್ವದಲ್ಲಿಪದಾಧಿಕಾರಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬಿ.ಎ.ದಿನೇಶ್ ಮಾತನಾಡಿ, ‘‘ಕನ್ನಡ ಭಾಷೆ ಕಡೆಗಣನೆ ಖಂಡಿಸಿ ಹಲವು ಬಾರಿ ಹೋರಾಟ ನಡೆಸಿ ಪುರಸಭೆಗೆ ಮನವಿ ಸಲ್ಲಿಸಿದ್ದೇವೆ. ಸರಕಾರದ ಆದೇಶದ ಪ್ರಕಾರ ಪ್ರತಿಯೊಂದು ಅಂಗಡಿ-ಮಳಿಗೆಯ ನಾಮಫಲಕದಲ್ಲಿಶೇ. 60 ರಷ್ಟು ಕನ್ನಡ ಇರಲೇಬೇಕು. ಆದರೆ ಮೇಲಿಂದ ಮೇಲೆ ಇದು ಉಲ್ಲಂಘನೆ ಆಗುತ್ತಿದೆ. ಇದು ಸಹಿಸಲಸಾಧ್ಯ. ಯಾರೇ ಆಗಲಿ ಕರ್ನಾಟಕದಲ್ಲಿಮೊದಲು ಕನ್ನಡಕ್ಕೆ ಆದ್ಯತೆ ನೀಡಬೇಕಿದೆ. ಇಂತಹ ಪ್ರಕರಣ ಮರುಕಳಿಸದಂತೆ ಪುರಸಭೆ ಅಧಿಕಾರಿಗಳು ಕೂಡ ಕಟ್ಟುನಿಟ್ಟಿನ ಕ್ರಮವಹಿಸುವ ಮೂಲಕ ಎಚ್ಚರಿಕೆ ನೀಡಬೇಕಿದೆ,’’ ಎಂದು ಆಗ್ರಹಿಸಿದರು.
ವೇದಿಕೆಯ ಪ್ರಮುಖರಾದ ಕೆ. ಚಂದ್ರು ಮತ್ತು ವಿ.ಎಚ್ . ಪುಟ್ಟಮ್ಮ ಮಾತನಾಡಿ,‘‘ನಮ್ಮ ನಾಡಿನಲ್ಲಿದುಡಿಯುವುದಾದರೆ ಕನ್ನಡಕ್ಕೆ ಮೊದಲ ಆದ್ಯತೆ ನೀಡಲೇಬೇಕು. ತಪ್ಪಿದಲ್ಲಿನಮ್ಮ ಹೋರಾಟ ನಿರಂತರವಾಗಿ ಮುಂದುವರಿಯುತ್ತದೆ,’’ ಎಂದು ಎಚ್ಚರಿಸಿದರು.
ಆಂಗ್ಲನಾಮಫಲಕವನ್ನು ತೆರವುಗೊಳಿಸಿ ಸಂಬಂಧಿಸಿದವರಿಗೆ ಬೃಹತ್ ಮೊತ್ತದ ದಂಡ ವಿಧಿಸಬೇಕು ಎಂದು ಸ್ಥಳಕ್ಕೆ ಆಗಮಿಸಿದ ಪುರಸಭೆಯ ಸಾನಿಟರಿ ಸೂಪರ್ವೈಸರ್ ಮೋಹನ್ ಕುಮಾರ್ ಅವರನ್ನು ಒತ್ತಾಯಿಸಲಾಯಿತು.
ಕರವೇ ತಾಲೂಕು ಅಧ್ಯಕ್ಷ ಪುಟ್ಟಸ್ವಾಮಿ, ಜಿಲ್ಲಾಕಾರ್ಯದರ್ಶಿ ಸತೀಶ್ ಎಂ.ಎಸ್ , ತಾಲೂಕು ಉಪಾಧ್ಯಕ್ಷ ರಂಗಸ್ವಾಮಿ, ಜಿಲ್ಲಾಮಹಿಳಾ ಜಂಟಿ ಕಾರ್ಯದರ್ಶಿ ಪ್ರೇಮಾ, ಸಾಮಾಜಿಕ ಜಾಲತಾಣದ ಭರತ್ , ತಾಲೂಕು ಕಾರ್ಯದರ್ಶಿ
ಕಮಲ್ , ವೆಂಕಟೇಶ್ , ಕಾರ್ತಿಕ್ ಗಣಪತಿ, ರಾಜೇಗೌಡ ಮತ್ತಿತರರು ಇದ್ದರು.
23 ಕೆಯುಎಸ್ 01 ಚಿತ್ರದಲ್ಲಿಕನ್ನಡಭಾಷೆ ಬಳಸದೆ ಸಂಪೂರ್ಣ ಆಂಗ್ಲಮಯ ಫಲಕ ಅಳವಡಿಕೆ ಖಂಡಿಸಿ ಹೆಚ್ .ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ ನಡೆಯಿತು.